ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯುವುದು ಅನುಮಾನ..! ಕಾರಣವೇನು ಗೊತ್ತೇ?

ಈ ಬಾರಿ ಐಪಿಎಲ್ ನಲ್ಲಿ ಅತಿ ರಂಜಿತ ಉದ್ಘಾಟನಾ ಸಮಾರಂಭ ನಡೆಯುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಧಿಕಾರಿಗಳೊಬ್ಬರು ಹೇಳುವಂತೆ ಉದ್ಘಾಟನಾ ಸಮಾರಂಭ ನಡೆಸುವುದರಿಂದ ಹಣ ವ್ಯರ್ಥ ಎನ್ನಲಾಗಿದೆ.

Updated: Nov 6, 2019 , 09:27 PM IST
ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯುವುದು ಅನುಮಾನ..! ಕಾರಣವೇನು ಗೊತ್ತೇ?

ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಅತಿ ರಂಜಿತ ಉದ್ಘಾಟನಾ ಸಮಾರಂಭ ನಡೆಯುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಧಿಕಾರಿಗಳೊಬ್ಬರು ಹೇಳುವಂತೆ ಉದ್ಘಾಟನಾ ಸಮಾರಂಭ ನಡೆಸುವುದರಿಂದ ಹಣ ವ್ಯರ್ಥ ಎನ್ನಲಾಗಿದೆ.

ಉದ್ಘಾಟನಾ ಸಮಾರಂಭಗಳಿಂದ ಹಣ ವ್ಯರ್ಥ, ಇನ್ನೊಂದೆಡೆಗೆ ಕ್ರಿಕೆಟ್ ಅಭಿಮಾನಿಗಳು ಕೂಡ ಆಸಕ್ತಿ ತೋರುತ್ತಿಲ್ಲ, ಮತ್ತು ಪ್ರದರ್ಶಕರಿಗೆ ಸಾಕಷ್ಟು ಸಂಬಳ ನೀಡಬೇಕಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಐಪಿಎಲ್ 2019 ರ ಉದ್ಘಾಟನಾ ಸಮಾರಂಭವನ್ನು ರದ್ದುಪಡಿಸಲಾಯಿತು ಮತ್ತು ಬಜೆಟ್ ಹಣವನ್ನು ಸಶಸ್ತ್ರ ಪಡೆಗಳಿಗೆ ನೀಡಲಾಯಿತು.

'ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲು ಅಂದಾಜು ವೆಚ್ಚ 20 ಕೋಟಿ ರೂ. ಭಾರತೀಯ ಸೈನ್ಯಕ್ಕೆ 11 ಕೋಟಿ ರೂ. ಸಿಆರ್ಪಿಎಫ್ ಗೆ 7 ಕೋಟಿ ರೂ. ಮತ್ತು ನೌಕಾಪಡೆ ಮತ್ತು ವಾಯುಪಡೆಗೆ ತಲಾ 1 ಕೋಟಿ ರೂ. ಎಂದು ಈ ಹಿಂದೆ ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿತ್ತು. ಅಕ್ಟೋಬರ್‌ನಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರೈ ಅವಧಿ ಮುಕ್ತಾಯಗೊಂಡಿತ್ತು, ಅವರು ಮೊದಲ ಬಾರಿಗೆ ದತ್ತಿ ಯೋಜನೆಯೊಂದನ್ನು ಜಾರಿಗೆ ತಂದಿದ್ದರು. ಅಂದಿನಿಂದ ಈಗ ಬಿಸಿಸಿಐ ಈ ಹಣವನ್ನು ದತ್ತಿ ಕಾರ್ಯಗಳಿಗೆ ಬಳಸಲು ನಿರ್ಧರಿಸಿದೆ ಎನ್ನಲಾಗಿದೆ. 

'ಒಕ್ಕೂಟವಾಗಿ, ನಿಯಮಿತವಾಗಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ನಡೆಸದಿರುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. ಬದಲಾಗಿ, ಈ ಮೊತ್ತವನ್ನು ಮುಖ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಾವು ನಿರ್ಧರಿಸಿದ್ದೇವೆ" ಎಂದು ವಿನೋದ್ ರೈ ಹೇಳಿದ್ದರು.