Sam Curran girlfriend isabella symonds willmott: ಇಂಗ್ಲೆಂಡ್ನ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರ್ರನ್ 2023ರ ಮಿನಿ ಹರಾಜಿನ ನಂತರ IPL ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂದೆನಿಸಿಕೊಂಡರು. ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿಗೆ ಖರೀದಿಸಿತು. ಇವರು ಸಾಮಾನ್ಯವಾಗಿ ಕ್ರೀಡೆಯ ಜೊತೆಗೆ ತಮ್ಮ ಪ್ರೀತಿಯ ವಿಚಾರದಲ್ಲಿ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ಅವರ ಮನದನ್ನೆಯ ಫೋಟೋಸ್ ಸಖತ್ ವೈರಲ್ ಆಗಿದೆ
Ricky Ponting Delhi Capitals: ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನ ಮುಖ್ಯ ಕೋಚ್ ಇತರ ತಂಡಗಳ ಅನೇಕ ಆರಂಭಿಕರು ತಮ್ಮ ತಂಡಕ್ಕಿಂತ ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ ಪೃಥ್ವಿ ಶಾ ಅವರನ್ನು ಅಂತಿಮವಾಗಿ ಕೈಬಿಡಲಾಗಿದೆ.
PBKS vs LSG, IPL 2023: ಐಪಿಎಲ್ ನಲ್ಲಿ ಇದುವರೆಗೆ 38 ಪಂದ್ಯಗಳು ಮಾತ್ರ ನಡೆದಿವೆ. ಈ 38 ಪಂದ್ಯಗಳಲ್ಲಿ ತಂಡಗಳು 20 ಬಾರಿ 200+ ಅಂಕಗಳನ್ನು ಗಳಿಸಿವೆ. ಈ ಹಿಂದೆ 18 ಬಾರಿ ನಡೆದಿತ್ತು. 2022 ರಲ್ಲಿ, ಒಂದು ಋತುವಿನಲ್ಲಿ ತಂಡಗಳು 18 ಬಾರಿ 200+ ಸ್ಕೋರ್ಗಳನ್ನು ಗಳಿಸಿದ್ದವು.
IPL 2023: ಮಂಡಿರಜ್ಜು ಗಾಯದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ (SRH) ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ IPL 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ವತಃ ಸನ್ ರೈಸರ್ಸ್ ಹೈದರಾಬಾದ್ ತಂಡವೇ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
Virat Kohli World Record: ಆರ್ ಸಿ ಬಿಯ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಈ ಮೂಲಕ ವಿರಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3015 ರನ್ ಗಳಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಕೊಹ್ಲಿ ಬಿಟ್ಟರೆ ಬೇರಾವುದೇ ಆಟಗಾರ ಅಥವಾ ಒಂದೇ ಮೈದಾನದಲ್ಲಿ ಇದುವರೆಗೆ ಅತೀ ಹೆಚ್ಚು ರನ್ ಕಲೆ ಹಾಕಿಲ್ಲ
RR vs CSK Playing 11: ಸತತ 3 ಗೆಲುವುಗಳು ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ವರವಾಗಿ ಕಾಣಿಸಿಕೊಂಡಿದೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್’ನಲ್ಲಿ ಹಿಡಿತ ಸಾಧಿಸಿರುವ ಚೆನ್ನೈ ಇಂದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಸತತ ಎರಡು ಪಂದ್ಯಗಳಲ್ಲಿನ ಸೋಲಿನೊಂದಿಗೆ, ರಾಜಸ್ಥಾನವು ತಮ್ಮ ತಂಡದ ಅಭಿಯಾನವನ್ನು ಮರಳಿ ಟ್ರ್ಯಾಕ್ ಗೆ ತರಲು ಕಾಯುತ್ತಿದೆ.
Virat Kohli Statement on RCB Match: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನೀಡಿದ್ದ 201 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆರ್ ಸಿ ಬಿ ತಂಡ ಕೊಹ್ಲಿ (37 ಎಸೆತಗಳಲ್ಲಿ 54 ರನ್, 6 ಬೌಂಡರಿ) ಅರ್ಧಶತಕದ ಹೊರತಾಗಿ ಎಂಟು ವಿಕೆಟ್ ನಷ್ಟಕ್ಕೆ ಕೇವಲ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇವರಲ್ಲದೆ ಮಹಿಪಾಲ್ ಲೊಮ್ರೋರ್ (34) ಮತ್ತು ದಿನೇಶ್ ಕಾರ್ತಿಕ್ (22) ಮಾತ್ರ 20 ರನ್ ಗಡಿ ದಾಟಲು ಸಾಧ್ಯವಾಯಿತು.
RCB vs KKR highlights: ಜೇಸನ್ ರಾಯ್ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿ ತಂಡಕ್ಕೆ ಬಿರುಸಿನ ಆರಂಭ ನೀಡಿದರೆ, ರಾಣಾ 21 ಎಸೆತಗಳಲ್ಲಿ 48 ರನ್ ಕಲೆ ಹಾಕಿ ಡೆತ್ ಓವರ್’ನಲ್ಲಿ ತಂಡವು ಬೃಹತ್ ಮೊತ್ತ ಕಲೆ ಹಾಕುವಂತೆ ಮಾಡಿದರು. ಇದರಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿವೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 21 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.
Virat Kohli Captaincy: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 2023 ಪಂದ್ಯದಲ್ಲಿ RCB ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಕೋಲ್ಕತ್ತಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಏತನ್ಮಧ್ಯೆ, ಪ್ರಸಕ್ತ ಋತುವಿನಲ್ಲಿ ವಿರಾಟ್ ಕೊಹ್ಲಿ ಎಲ್ಲಿಯವರೆಗೆ RCB ಕ್ಯಾಪ್ಟನ್ ಆಗಿರ್ತಾರೆ ಎಂದು ಹೇಳಿದ್ದಾರೆ.
IPL Cricketer: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಈ ಕ್ರಿಕೆಟಿಗ ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೆಚ್ಚಿನ ಬೌಲರ್ ಜೊತೆಗೆ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಅವರು ಇಂದು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ
Arjun Tendulkar Six Video: ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು, ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಪ್ರಚಂಡ ಸಿಕ್ಸರ್ ಬಾರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
Mumbai Indians, IPL 2023: ರೋಹಿತ್ ಶರ್ಮಾ ತಮ್ಮ ಮಾರಕ ಅಸ್ತ್ರ ಎಂದು ನಂಬಿಕೆ ಇಟ್ಟಿದ್ದ, ಈ ಆಟಗಾರನ ಕಳಪೆ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡವನ್ನೇ ಮುಳುಗಿಸುತವಂತೆ ಮಾಡಿದೆ. ಈ ಆಟಗಾರನ ಫ್ಲಾಪ್ ಶೋನಿಂದಾಗಿ ಮುಂಬೈ ಇಂಡಿಯನ್ಸ್ ಐಪಿಎಲ್ 2023 ರಲ್ಲಿ ನಿರಾಶಾದಾಯಕ ಸೋಲನ್ನು ಎದುರಿಸುತ್ತಿದೆ.
IPL 2023 Slow Over Rate Rule: ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ನಿಭಾಯಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಆದರೆ ಈ ಸಮಯದಲ್ಲಿ ಅವರು ದೊಡ್ಡ ತಪ್ಪು ಮಾಡಿದ್ದು, ಇದರಿಂದಾಗಿ ನಿಷೇಧದ ಭೀತಿಯೂ ಕಾಡುವಂತಾಗಿದೆ.
IPL 2023: ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಪರ ವಾಷಿಂಗ್ಟನ್ ಸುಂದರ್ ಮತ್ತು ಮಾರ್ಕೊ ಯಾನ್ಸೆನ್ ಕ್ರೀಸ್’ನಲ್ಲಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ವೇಗದ ಬೌಲರ್ ಮುಖೇಶ್ ಕುಮಾರ್ ಪಂದ್ಯದ ಕೊನೆಯ ಓವರ್ ಮಾಡಲು ಬಂದರು. ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮುಖೇಶ್ ಕುಮಾರ್ ಕೊನೆಯ ಓವರ್’ನಲ್ಲಿ ಕೇವಲ 5 ರನ್ ನೀಡಿ ತಂಡಕ್ಕೆ ಜಯ ತಂದುಕೊಟ್ಟರು. ಡೆಲ್ಲಿ ಕ್ಯಾಪಿಟಲ್ಸ್ 7 ರನ್’ಗಳಿಂದ ಸನ್’ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿತು
Virat Kohli-Anushka Sharma: ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್’ನಲ್ಲಿ ರುಚಿಕರವಾದ ಬ್ರೇಕ್’ಫಾಸ್ಟ್ ಕೂಡ ಸೇವನೆ ಮಾಡಿದ್ದರು ಈ ದಂಪತಿ. ಈ ಬಳಿಕ ಅನುಷ್ಕಾ ಮತ್ತು ವಿರಾಟ್ ದಾರಿಯಲ್ಲಿ ಬರುತ್ತಾ ಕಾರ್ನರ್ ಹೌಸ್’ನಿಂದ ಐಸ್ ಕ್ರೀಂ ಖರೀದಿಸಿ ಸೇವಿಸಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
IPL 2023: ಸೋಮವಾರ ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ಹಳೆಯ ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹಠಾತ್ ತಮ್ಮ ಹಳೆಯ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರ ಪಾದಗಳನ್ನು ಮುಟ್ಟಿದ್ದಾರೆ.
IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ಎಸೆತಗಳಲ್ಲಿ 77 ರನ್ ಗಳಿಸಿದ ಮ್ಯಾಚ್ ವಿನ್ನಿಂಗ್ ಆಟಗಾರ ಬೇರಾರೂ ಅಲ್ಲ ಅವರೇ ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಕ್ಸ್ವೆಲ್ ತಮ್ಮ ಇನ್ನಿಂಗ್ಸ್’ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್’ಗಳನ್ನು ಬಾರಿಸಿದ್ದಲ್ಲದೆ, ಫಾಫ್ ಡು ಪ್ಲೆಸಿಸ್ (39 ಎಸೆತಗಳಲ್ಲಿ 62 ರನ್) ಅವರೊಂದಿಗೆ ಮೂರನೇ ವಿಕೆಟ್’ಗೆ 127 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.