ಟೀಮ್ ಇಂಡಿಯಾಕೆ ಇನ್ನೋದು ಬಿಗ್ ಶಾಕ್ ! ಟೆಸ್ಟ್ ಸರಣಿಯಿಂದ ಹೊರಗುಳಿದ `ಇಶಾನ್ ಕಿಶನ್`
Ishan Kishan : ಮಂಗಳವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಆರಂಭಗೊಳ್ಳಿದೆ. ರುತುರಾಜ್ ಗಾಯಕ್ವಾಡ್ ಇಂಜೂರಿ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ಧಾರೆ. ಭಾರತದ ವಿಕೇಟ್ ಕೀಪರ್ ಇಶಾನ್ ಕಿಶನ್ ಕೂಡ ನಿರಂತರ ಪ್ರಾಯಾಣದಿಂದ ಆಯಾಸಗೊಂಡಿದ್ದು ತಂಡದಿಂದ ಹೊರಗುಳಿದಿದ್ಧಾರೆ.
Ind vs SA 1st Test : ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದೇ ಡಿಸೆಂಬರ್ 26ರಿಂದ ಮೊದಲ ಪಂದ್ಯವು ಸೆಂಚೂರಿಯನ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ವಿರಾಟ್ ಕೊಹ್ಲಿ ಪಂದ್ಯ ಆರಂಭಕ್ಕೂ ಮುನ್ನ ಕೌಟುಂಬಿಕ ಸಮಸ್ಯೆಯಿಂದಾಗಿ ಮನೆಗೆ ತೆರುಳಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇಬದಲಿ ಆಟಗಾರರಾಗಿದ್ದ ರುತುರಾಜ್ ಗಾಯಕ್ವಾಡ್ ಕೂಡ ಬೆರಳಗೆ ಗಾಯ ಮಾಡಿಕೊಂಡು ಪಂದ್ಯದಿಂದ ಹೊರಗುಳಿದಿದ್ದಾರೆ.
ಇದನ್ನು ಓದಿ-ಟೆಸ್ಟ್ ಪಂದ್ಯಕ್ಕೂ ಮುನ್ನ ತವರಿಗೆ ಮರಳಿದ "ವಿರಾಟ್ ಕೋಹ್ಲಿ"
ಇದರ ಜೊತೆಗೆ ಟೀಮ್ ಇಂಡಿಯಾಕೆ ಇನ್ನೊಂದು ಆಘಾತ ಎದುರಾಗಿದೆ. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ಆಯ್ಕೆಯಾಗಿದ್ದ ಇಶಾನ್ ಕಿಶನ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ಧಾರೆ. ವಿರಾಟ್ ಕೊಹ್ಲಿ ಪಂದ್ಯ ಆರಂಭಕ್ಕೂ ಮುನ್ನ ಹಿಂದಿರುಗಲಿದ್ಧಾರೆ. ಆದರೆ ಇಶಾನ್ ಕಿಸನ್ ಈ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಭಾರತದ ಪರ ಅನೇಕ ಪಂದ್ಯಗಳನ್ನು ಆಡಿದ್ದ ಕಿಶನ್ ನಿರಂತರ ಪ್ರಯಾಣ ಬೆಳೆಸಿದ್ದರು. ಇದರಿಂದ ಉಂಟಾಗಿದ್ದ ಮಾನಸಿಕ ಆಯಾಸಕ್ಕೆ ವಿಶ್ರಾಂತಿ ತೆಗೆದುಕೊಳ್ಳುವ ಸಲುವಾಗಿನ ಭಾರತದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ಗಳ ಸರಣಿಗಳಿಂದ ಹೊರಗುಳಿಯಲಿದ್ದಾರೆ.
ಇದನ್ನು ಓದಿ-ಏಕದಿನ ಕ್ರಿಕೆಟ್ನಲ್ಲಿ ಈ ವರ್ಷ ಅತಿ ಹೆಚ್ಚು ಅರ್ಧಶತಕ ಗಳಿಸಿದವರು ಯಾರು?
ಕಿಶನ್ ಕಳೆದ ಒಂದು ವರ್ಷದಿಂದ ತಡೆರಹಿತವಾಗಿ ಪ್ರಯಾಣಿಸುತ್ತಿದ್ದ ಕಾರಣ ಕ್ರಿಕೆಟ್ನಿಂದ ವಿರಾಮವನ್ನು ಕೋರಿದರು.ಅವರ ಮನವಿಗೆ ಭಾರಿತಿಯ ಕ್ರಿಕೇಟ್ ಮ್ಯಾನೇಜ್ಮೆಂಟ್ ಒಪ್ಪಿಗೆ ಸೂಚಿಸಿದೆ. ಇಶಾನ್ ಕಿಶನ್ ಭಾರತ ಮತ್ತು ದ.ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ಧಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.ಇನ್ನು ಇಶಾನ್ ಕಿಶನ್ ಜನವರಿ 2024 ರಿಂದ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳಲಿದ್ಧಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.