ಕನ್ನಡ ನಾಡಿನಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ನ್ಯೂಜಿಲೆಂಡ್ ದೇಶದಲ್ಲಿ ಸರ್ವೇಯರ್ ಜನರಲ್ ಆಗಿ ಹಾಗೂ ಕ್ರಿಕೆಟರ್ ಆಗಿ ಮಿಂಚಿ ಮರೆಯಾದ ಒಬ್ಬ ಮಹಾನ್ ವ್ಯಕ್ತಿಯ ರೋಚಕ ಕಥನವನ್ನುಈಗ ನಾವು ಹೇಳಲು ಹೊರಟಿದ್ದೇವೆ. ಈ ವ್ಯಕ್ತಿಯ ಬಗ್ಗೆ ನೀವು ಇದುವರೆಗೂ ಕೇಳಿರದೆ ಇರಬಹುದು, ಆದರೆ ಈ ವ್ಯಕ್ತಿ ಮಾಡಿರುವ ಸಾಧನೆಯನ್ನು ಕೇಳಿದರೆ ನಿಮಗೆ ನಿಜಕ್ಕೂ ರೋಮಾಂಚನವಾಗುತ್ತದೆ.
ಅಷ್ಟಕ್ಕೂ ಆ ವ್ಯಕ್ತಿ ಯಾರು?
ಹೌದು, ಈಗ ನಾವು ನಿಮಗೆ ಹೇಳಲು ಹೊರಟಿರುವ ವ್ಯಕ್ತಿ ಬೇರೆ ಯಾರು ಅಲ್ಲ, ಜಾನ್ ವಿಲಿಯಂ ಆಲ್ಮನ್ ಮಾರ್ಚಂಟ್..! ಈ ವ್ಯಕ್ತಿ ನಮ್ಮ ಕನ್ನಡ ನಾಡಿನ ಇಂದಿನ ಬೆಳಗಾವಿಯಲ್ಲಿ 9 ಅಕ್ಟೋಬರ್ 1841 ರಂದು 4 ನೇ ಕಿಂಗ್ಸ್ ಓನ್ ರೆಜಿಮೆಂಟ್‌ನಲ್ಲಿ ಶಸ್ತ್ರಚಿಕಿತ್ಸಕರಾಗಿದ್ದ ಡಾ. ಆಲ್ಮನ್ ಅವರಿಗೆ ಜನಿಸಿದವರು. ಆದರೆ ಅವರು ತಮ್ಮ ತಂದೆಯ ಮರಣದ ನಂತರ ತಮ್ಮ ಮಲತಂದೆಯ ಹೆಸರನ್ನು ಅಳವಡಿಸಿಕೊಂಡರು.ತಮ್ಮ ವಿದ್ಯಾಭ್ಯಾಸವನ್ನು ಹ್ಯಾಂಪ್‌ಶೈರ್‌ನ ಕ್ವೀನ್‌ವುಡ್ ಕಾಲೇಜಿನಲ್ಲಿ ಮುಗಿಸಿ ನಂತರ ಕೆಲ ಕಾಲ ಬ್ರೆಜಿಲ್‌ನಲ್ಲಿ ರೈಲ್ವೆ ನಿರ್ಮಾಣ ಕೆಲಸದಲ್ಲಿ ತಮ್ಮ ಮಲತಂದೆಯವರಿಗೆ ಸಹಾಯ ಮಾಡಿದರು. ಇದಾದ ನಂತರ ಮರ್ಚಂಟ್ 1863 ರಲ್ಲಿ ನ್ಯೂಜಿಲೆಂಡ್‌ನ ಇನ್ವರ್‌ಕಾರ್ಗಿಲ್‌ಗೆ ತೆರಳಿ ಸರ್ವೇಯರ್ ಅಧ್ಯಯನ ಕೈಗೊಂಡರು, 1865 ರಲ್ಲಿ ಭೂ ಮತ್ತು ಸರ್ವೇ ಇಲಾಖೆಗೆ ಸೇರಿ ನೆಲ್ಸನ್ ಜಿಲ್ಲೆಯ ಚಿನ್ನದ ಕ್ಷೇತ್ರಗಳ ಗಡಿಗಳನ್ನು ಸಮೀಕ್ಷೆಗಳನ್ನು ಕೈಗೊಂಡರು.1875 ರಲ್ಲಿ ಅವರು ಸ್ಥಳೀಯ ಭೂ ಕಾಯಿದೆಗಳ ಅಡಿಯಲ್ಲಿ ಸರ್ವೇಗಳ ಉಪ ನಿರೀಕ್ಷಕರಾದರು ಮತ್ತು 1876 ರಲ್ಲಿ ನ್ಯೂಜಿಲೆಂಡ್‌ನ ಮೊದಲ ಜಿಯೋಡೆಸಿಕಲ್ ಸರ್ವೇಯರ್ ಆಗಿ ಕಾರ್ಯ ನಿರ್ವಹಿಸಿದರು. 1879 ರಲ್ಲಿ ಅವರನ್ನು ವೆಲ್ಲಿಂಗ್ಟನ್ ಜಿಲ್ಲೆಯ ಮುಖ್ಯ ಸರ್ವೇಯರ್ ಆಗಿ, 1884 ರಲ್ಲಿ ಕ್ರೌನ್ ಲ್ಯಾಂಡ್ಸ್ ಆಯುಕ್ತರಾಗಿ ಮತ್ತು 1902 ರಲ್ಲಿ ನ್ಯೂಜಿಲೆಂಡ್‌ನ ಸರ್ವೇಯರ್-ಜನರಲ್ ಆಗಿ ನೇಮಿಸಲಾಯಿತು. ತಮ್ಮ ಸುದೀರ್ಘ ಸೇವೆಯ ನಂತರ 1906 ರಲ್ಲಿ ನಿವೃತ್ತರಾದರು.ವಿಶೇಷವೆಂದರೆ ಅವರು ನಿವೃತ್ತರಾಗುವವರೆಗೂ ದೃಶ್ಯ ಸಂರಕ್ಷಣಾ ಆಯೋಗದಲ್ಲಿಯೂ ಸೇವೆ ಸಲ್ಲಿಸಿದರು.
ಕ್ರಿಕೆಟ್ ವೃತ್ತಿಜೀವನ:
ಕೇವಲ ಸರ್ವೇಯರ್ ಕೆಲಸಕ್ಕೆ ಸಿಮೀತವಾಗದ ಜಾನ್ ಮರ್ಚೆಂಟ್ ಅವರು ಕ್ರಿಕೆಟ್ ನಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ.ಅದರಲ್ಲಿ ಪ್ರಮುಖವಾಗಿ. ಇನ್ವರ್‌ಕಾರ್ಗಿಲ್‌ನಲ್ಲಿ ವಾಸಿಸುತ್ತಿದ್ದಾಗ ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಜಾನ್ ವಿಲಿಯಂ ಆಲ್ಮನ್ ಮಾರ್ಚಂಟ್ ಪಾತ್ರರಾದರು. ಅವರು 1864 ರಲ್ಲಿ ಇನ್ವರ್‌ಕಾರ್ಗಿಲ್‌ನಲ್ಲಿ ನಡೆದ ಟೌನ್ ವರ್ಸಸ್ ಕಂಟ್ರಿ ಪಂದ್ಯದಲ್ಲಿ 117 ರನ್ ಗಳಿಸಿದರು.ಆಲ್ ರೌಂಡರ್ ಆಗಿ ಅವರು ತಮ್ಮ ಸ್ಲಿಪ್ ಫೀಲ್ಡಿಂಗ್‌ಲ್ಲಿ ಹೆಸರು ಮಾಡಿದ್ದರು.1873-74ರಲ್ಲಿ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ ವೆಲ್ಲಿಂಗ್ಟನ್‌ನ ನಾಯಕತ್ವ ವಹಿಸಿದ್ದರು. ಮೊದಲನೆಯದರಲ್ಲಿ, ಅವರು ಆಕ್ಲೆಂಡ್ ವಿರುದ್ಧದ ಅಲ್ಪ ಅಂತರದ ಸೋಲಿನಲ್ಲಿ ಆರು ವಿಕೆಟ್‌ಗಳು ಮತ್ತು ಎರಡು ಕ್ಯಾಚ್‌ಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು.ಎರಡನೆಯದರಲ್ಲಿ ಅವರು ಪ್ರತಿ ಇನ್ನಿಂಗ್ಸ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದರು, ಅವರ ಬೌಲಿಂಗ್‌ನಲ್ಲಿ ಎರಡು ವಿಕೆಟ್‌ಗಳು ಮತ್ತು ನೆಲ್ಸನ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್‌ಗಳನ್ನು ಗಳಿಸಿ ಮಹತ್ವದ ಪಾತ್ರವನ್ನು ವಹಿಸಿದ್ದರು.ಅಚ್ಚರಿ ಎನ್ನುವಂತೆ ಈ ಪಂದ್ಯ ಟೈ ಆಗಿತ್ತು. ಈ ಎರಡು ಪ್ರಥಮ ದರ್ಜೆ ಪಂದ್ಯಗಳ ನಡುವೆ, ಅವರು ಜನವರಿ 1874 ರಲ್ಲಿ ಹಾಕ್ಸ್ ಬೇ ವಿರುದ್ಧದ ಒಂದು ದಿನದ, ಎರಡು ಇನ್ನಿಂಗ್ಸ್ ಪಂದ್ಯದಲ್ಲಿ ವೆಲ್ಲಿಂಗ್ಟನ್ ಪರ ಆಡಿದರು ; ಹಾಕ್ಸ್ ಬೇ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 21 ರನ್‌ಗಳಿಗೆ 9 ವಿಕೆಟ್‌ಗಳನ್ನು ಪಡೆದರು ಮತ್ತು ಮೂರು ಕ್ಯಾಚ್‌ಗಳನ್ನು ಪಡೆದರು.
ನ್ಯೂಜಿಲೆಂಡ್ ನಲ್ಲಿರುವ ಜೌಗು ಪ್ರದೇಶಗಳನ್ನು ಕ್ರಿಕೆಟ್ ಮೈದಾನವಾಗಿ ಪರಿವರ್ತಿಸುವಲ್ಲಿ ಮರ್ಚಂಟ್ ಪಾತ್ರವನ್ನು ವಹಿಸಿದರು.ಅವರು ಸರ್ವೇ ಕೆಲಸಗಳನ್ನು ಮತ್ತು ಮಣ್ಣಿನ ಸೇರ್ಪಡೆ ಮತ್ತು ನಿಯೋಜನೆಯನ್ನು ಮೇಲ್ವಿಚಾರಣೆ ಮಾಡಿದರು.
ವೈವಾಹಿಕ ಜೀವನ:
ಮರ್ಚಂಟ್ 1868 ರ ಜೂನ್ 10 ರಂದು ವೆಲ್ಲಿಂಗ್ಟನ್‌ನ ಟೆ ಆರೋದಲ್ಲಿರುವ ಸೇಂಟ್ ಪೀಟರ್ಸ್ ಚರ್ಚ್‌ನಲ್ಲಿ ಮಾರಿಯಾ ಎಲಿಸ್ ರೈಟ್ ಅವರನ್ನು ವಿವಾಹವಾದರು.ಅವರಿಗೆ ಐದು ಗಂಡು ಮಕ್ಕಳು ಮತ್ತು ಆರು ಹೆಣ್ಣು ಮಕ್ಕಳಿದ್ದರು, ಅವರಲ್ಲಿ ಒಬ್ಬರು ಮಾರಿಯಾ ಎಲಿಸ್ ಆಲ್ಮನ್ ಮಾರ್ಚಂಟ್ ಎನ್ನುವವರು ಶಾಲಾ ಪ್ರಾಂಶುಪಾಲರಾಗಿ ಹೆಸರು ಮಾಡಿದವರು. ಸರ್ವೇಯರ್ ಆಗಿರುವುದಷ್ಟೇ ಅಲ್ಲದೆ ಅತ್ಯುತ್ತಮ ಕ್ರಿಕೆಟಿಗನಾಗಿ ಖ್ಯಾತಿ ಪಡೆದಿದ್ದ ಜಾನ್ ವಿಲಿಯಂ ಆಲ್ಮನ್ ಮಾರ್ಚಂಟ್ ಅವರು ಡಿಸೆಂಬರ್ 22, 1920 ರಂದು ವೆಲ್ಲಿಂಗ್ಟನ್‌ನ ಬೋವೆನ್ ಸ್ಟ್ರೀಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.









