)
National Shooting Competition: ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾನಡ್ಕ ಧನ್ವಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯ ವತಿಯಿಂದ ಚೆನೈನಲ್ಲಿ ಕಳೆದ ಅ.2ರಿಂದ ನ.4 ರವರೆಗೆ ನಡೆದ 27ನೇ ರಾಷ್ಟ್ರೀಯ ಕುಮಾರ್ ಸುರೇಂದರ್ ಇಂಟರ್ ಸ್ಕೂಲ್ ಚಾಂಪಿಯನ್ಶೀಪ್ ಸ್ಪರ್ಧೆ ನಡೆಯುತ್ತಿದ್ದು, ಈ ಚಾಂಪಿಯನ್ಶಿಪ್ನಲ್ಲಿ ಕಾನಡ್ಕ ಧನ್ವಿ 10 ಮೀ. ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಸಬ್ ಯೂತ್ ಮಹಿಳೆಯ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಪಡೆಯುವ ಮೂಲಕ ಕೊಡಗು ಮಾತ್ರವಲ್ಲದೆ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಈ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರದ ನಾನಾ ಕಡೆಗಳಿಂದ 2000ಕ್ಕೂ ಹೆಚ್ಚು ಯುವ ಶೂಟರ್ಗಳು ಸ್ಪರ್ಧಿಸಿದ್ದು, ಅದರಲ್ಲಿ ಕಾನಡ್ಕ ಧನ್ವಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾಳೆ.
ಕಾನಡ್ಕ ಧನ್ವಿ ಮೂಲತಃ ಮರಗೋಡಿನ ಕೃಷಿಕ ಕಾನಡ್ಕ ಅನೀಶ್ ಮತ್ತು ಆಶೀತ ಪುತ್ರಿಯಾಗಿದ್ದು, ಸದ್ಯ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಶೂಟಿಂಗ್ ತರಬೇತುದಾರ ಶರಣೇಂದ್ರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.