ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್‌ ಕಿತ್ತ ವಿಶ್ವದ ಮೊದಲ ಕ್ರಿಕೆಟಿಗ ಯಾರು ಗೊತ್ತಾ? ಈ ಆಟಗಾರ ಐಪಿಎಲ್‌ ಆಡ್ಬೇಕು ಅಂತಾ ಹನಿಮೂನನ್ನೇ ಕ್ಯಾನ್ಸಲ್‌ ಮಾಡಿದ್ನಂತೆ!

Kamindu Mendis bowling with both hands: ಕೆಲವೊಮ್ಮೆ ಎಡಗೈಯಿಂದ, ಇನ್ನೂ ಕೆಲವೊಮ್ಮೆ ಬಲಗೈಯಿಂದ ಬೌಲಿಂಗ್ ಮಾಡಿದ ಕಮಿಂದು, ಒಂದು ವಿಕೆಟ್ ಕೂಡ ಪಡೆದಿದ್ದಾರೆ. ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Apr 4, 2025, 05:21 PM IST
    • ತಮ್ಮ ಮೊದಲ ಪಂದ್ಯದಲ್ಲೇ ವಿಭಿನ್ನವಾಗಿ ಛಾಪು ಮೂಡಿಸಿದ ಮೆಂಡಿಸ್
    • ಎರಡೂ ಕೈಗಳಿಂದ ಬೌಲಿಂಗ್ ಮಾಡಿದ ಕಮಿಂದು
    • ಕಳೆದ ತಿಂಗಳು ತನ್ನ ಗೆಳತಿ ನಿಶಾನಿ ಎಂಬವರನ್ನು ಮದುವೆಯಾಗಿದ್ದ ಮೆಂಡಿಸ್
ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್‌ ಕಿತ್ತ ವಿಶ್ವದ ಮೊದಲ ಕ್ರಿಕೆಟಿಗ ಯಾರು ಗೊತ್ತಾ? ಈ ಆಟಗಾರ ಐಪಿಎಲ್‌ ಆಡ್ಬೇಕು ಅಂತಾ ಹನಿಮೂನನ್ನೇ ಕ್ಯಾನ್ಸಲ್‌ ಮಾಡಿದ್ನಂತೆ!
Kamindu Mendis

Kamindu Mendis bowling with both hands: ಶ್ರೀಲಂಕಾದ ಆಲ್‌ರೌಂಡರ್ ಕಮಿಂದು ಮೆಂಡಿಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹೈದರಾಬಾದ್ ಪಂದ್ಯ ಈ ಪಂದ್ಯದಲ್ಲಿ ಸೋಲುಂಡರೂ, ಮೆಂಡಿಸ್ ಮಾತ್ರ ತಮ್ಮ ಮೊದಲ ಪಂದ್ಯದಲ್ಲೇ ವಿಭಿನ್ನವಾಗಿ ಛಾಪು ಮೂಡಿಸಿದ್ದಾರೆ.

Add Zee News as a Preferred Source

ಇದನ್ನೂ ಓದಿ: ತಾಯಿಯ ಒತ್ತಾಯದ ಮೇರೆಗೆ ಸಹ ನಟಿಯ ಮೇಲೆ ಪ್ರೀತಿ.. ಇಬ್ಬರನ್ನು ಮದುವೆಯಾಗಿ ಇಂದು ಸಿಂಗಲ್‌ ಆಗಿ ಜೀವನ ಸಾಗಿಸುತ್ತಿರುವ ಈ ನಟ ಸೌತ್‌ ಇಂಡಸ್ಟ್ರಿಯ ಸೂಪರ್‌ಸ್ಟಾರ್‌

ಕೆಲವೊಮ್ಮೆ ಎಡಗೈಯಿಂದ, ಇನ್ನೂ ಕೆಲವೊಮ್ಮೆ ಬಲಗೈಯಿಂದ ಬೌಲಿಂಗ್ ಮಾಡಿದ ಕಮಿಂದು, ಒಂದು ವಿಕೆಟ್ ಕೂಡ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಅದ್ಭುತ 27 ರನ್‌ಗಳನ್ನು ಗಳಿಸಿದ್ದಾರೆ. ಅಂದಹಾಗೆ ಮೆಂಡಿಸ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಮಿಂದು ಮೆಂಡಿಸ್ ಕಳೆದ ತಿಂಗಳು ಮಾರ್ಚ್ 3 ರಂದು ತನ್ನ ಗೆಳತಿ ನಿಶಾನಿ ಎಂಬವರನ್ನು ಮದುವೆಯಾಗಿದ್ದರು. ಆ ಬಗ್ಗೆ ಸುಂದರವಾದ ಸಂದೇಶ ಬರೆದುಕೊಂಡಿದ್ದ ಮೆಂಡಿಸ್‌, "ಇಂದು ನಾನು ನನ್ನ ಆತ್ಮ ಸಂಗಾತಿಯನ್ನು ಮದುವೆಯಾಗುತ್ತಿದ್ದೇನೆ. ನನ್ನ ಹೃದಯವನ್ನು ಅರ್ಥಮಾಡಿಕೊಳ್ಳುವ, ನನ್ನ ಕನಸುಗಳನ್ನು ಬೆಂಬಲಿಸುವ ಮತ್ತು ನನ್ನನ್ನು ಅತಿಯಾಗಿ ಪ್ರೀತಿಸುವವಳು' ಎಂದು ಬರೆದಿದ್ದರು.

ಇದೀಗ ಮೆಂಡಿಸ್‌ ಅವರ ಹೇಳಿಕೆಯನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಅವರ ಪತ್ನಿ ನಿಶಾನಿ. ಪತಿ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವಂತೆ ಹನಿಮೂನ್ ಅನ್ನು ಮುಂದೂಡಿರುವುದು, ಅವರು ತಮ್ಮ ಪತಿ ಮೆಂಡಿಸ್ ಅವರನ್ನು ಎಷ್ಟು ಬೆಂಬಲಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ, ಪಿಂಚಣಿ, ಭತ್ಯೆಗಳಲ್ಲಿ ಹೆಚ್ಚಳ !ಈ ತಿಂಗಳಿನಿಂದಲೇ ಎಲ್ಲವೂ ಜಾರಿ

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಕಮಿಂದು ಮೆಂಡಿಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 75 ಲಕ್ಷ ರೂ.ಗೆ ಖರೀದಿಸಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News