)
ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) 2026ರ ಮಿನಿ ಆಕ್ಷನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಭಾರೀ ಮೊತ್ತವನ್ನು ನೀಡಿ ಆಟಗಾರರನ್ನು ಖರೀದಿ ಮಾಡಿತು. ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ಗೆ 25 ಕೋಟಿ ರೂ.ಗಳನ್ನು ನೀಡಿದರೆ, ಶ್ರೀಲಂಕಾದ ಬಲಿಷ್ಠ ಬೌಲರ್ ಮಥೀಶ್ ಪರಿತಣಗೆ 18 ಕೋಟಿ ರೂಪಾಯಿಗಳನ್ನು ನೀಡಿತು. ಈ ಆಕ್ಷನಲ್ಲಿ ಚೆನ್ನೈ ಫ್ರಾಂಚೈಸಿ ಇಬ್ಬರು ಯುವ ಆಟಗಾರರಿಗೆ ಸೇಮ್ ಮೊತ್ತವನ್ನು ನೀಡಿ ಖರೀದಿ ಮಾಡಿದೆ.
ರಾಜಸ್ತಾನ ಮೂಲದ ಕಾರ್ತಿಕ್ ಶರ್ಮಾ ಹಾಗೂ ಉತ್ತರ ಪ್ರದೇಶದ ಆಲ್ರೌಂಡರ್ ಪ್ರಶಾಂತ್ ವೀರ್ ಯಂಗ್ ಅಂಡ್ ಎನರ್ಜಿಕ್ಟಿಕ್ ಬ್ಯಾಟ್ಸ್ಮನ್ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಫ್ರಾಂಚೈಸಿಯು ತಲಾ 14.20 ಕೋಟಿ ರೂಪಾಯಿಗಳನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ದೇಶಿಯ ಕ್ರಿಕೆಟ್ನಲ್ಲಿ ಒಬ್ಬರು ಮತ್ತೊಬ್ಬರನ್ನು ಮೀರಿಸುವಂತೆ ಟ್ರ್ಯಾಕ್ ರೆಕಾರ್ಡ್ಗಳನ್ನು ಹೊಂದಿದ್ದಾರೆ. ಬ್ಯಾಟಿಂಗ್ನಲ್ಲಿ ಇಬ್ಬರೂ ತಂಡಕ್ಕೆ ನೆರವು ತಂದು ಕೊಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದು.
ಕಾರ್ತಿಕ್ ಶರ್ಮಾ ಪವರ್ ಫುಲ್ ಬ್ಯಾಟಿಂಗ್ ಮಾಡೋ ಯಂಗ್ ಬ್ಯಾಟ್ಸ್ಮನ್. ತಂಡ ಸೋಲುವ ಹಂತದಲ್ಲಿ ಇದ್ದರೂ ತನ್ನ ಶಕ್ತಿ ಪ್ರದರ್ಶನ ಮಾಡಿ ದೊಡ್ಡ ದೊಡ್ಡ ಹೊಡೆತಗಳಿಂದ ಪಂದ್ಯ ಗೆಲ್ಲಿಸುವಂತಹ ಛಲಗಾರನಾಗಿದ್ದಾನೆ. ಇಲ್ಲಿವರೆಗೆ ಆಡಿರುವ 12, T20 ಪಂದ್ಯಗಳಲ್ಲಿ 164 ಸ್ಟ್ರೈಕ್ ರೇಟ್ನಿಂದಿಗೆ 334 ರನ್ಗಳನ್ನು ಗಳಿಸಿದ್ದಾರೆ. ವಿಶೇಷ ಎಂದರೆ ಈ ರನ್ಗಳಲ್ಲಿ 28 ಭರ್ಜರಿ ಸಿಕ್ಸರ್ಗಳು ಸೇರಿವೆ. ಸಿಕ್ಸ್ ಸಿಡಿಸೋದರಲ್ಲಿ ಕಾರ್ತಿಕ್ ಶರ್ಮಾ ಪಂಟರ್ ಆಗಿದ್ದಾರೆ ಎನ್ನಲಾಗುತ್ತಿದೆ.
ರೆಡ್ ಬಾಲ್ ಕ್ರಿಕೆಟ್ನಲ್ಲಿ ಕಾರ್ತಿಕ್ ಶರ್ಮಾ ಪ್ರದರ್ಶನ ಅಮೋಘವಾಗಿದೆ. 2025-26ರ ರಣಜಿ ಟ್ರೋಫಿಯಲ್ಲಿ ಆಡಿರುವ ಈ ಯಂಗ್ ಅಂಡ್ ಎನರ್ಜಿಟಿಕ್ ಬ್ಯಾಟರ್ ಮೂರು ಸೆಂಚುರಿಗಳನ್ನು ಬಾರಿಸಿದ್ದಾರೆ. ರಾಜಸ್ತಾನ ತಂಡದ ಪರವಾಗಿ ದೇಶಿಯ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇಲ್ಲಿಯೂ ಕಾರ್ತಿಕ್ ಶರ್ಮಾನ ರೆಕಾರ್ಡ್ ಕಡಿಮೆ ಏನು ಇಲ್ಲ ಎನ್ನಬಹುದು. ಏಕೆಂದರೆ ಆಡಿರುವ ಎಲ್ಲ ಪಂದ್ಯಗಳ ಪೈಕಿ ಕಾರ್ತಿಕ್ ಶರ್ಮಾ 77 ಸಿಕ್ಸರ್ಗಳನ್ನು ಚಚ್ಚಿದ್ದಾರೆ. ಬೌಂಡರಿ, ಸಿಕ್ಸರ್ಗಳನ್ನು ಸುಲಭವಾಗಿ ಸಿಡಿಸೋದು ಕಾರ್ತಿಕನ ಕಯಾಲಿ ಆಗಿದೆ.