ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟಿಗ ನಾಥನ್ ಮೆಕಲಮ್ ನಿಧನ? ಎಂದು ವೈರಲ್ ಆದ ಸುದ್ದಿ!

ನ್ಯೂಜಿಲ್ಯಾಂಡ್  ತಂಡದ ಮಾಜಿ ಆಟಗಾರ ನಿಧನರಾಗಿದ್ದಾರೆ ಎನ್ನುವ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Updated: Dec 3, 2018 , 08:57 PM IST
ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟಿಗ ನಾಥನ್ ಮೆಕಲಮ್ ನಿಧನ? ಎಂದು ವೈರಲ್ ಆದ ಸುದ್ದಿ!

ನವದೆಹಲಿ: ನ್ಯೂಜಿಲ್ಯಾಂಡ್  ತಂಡದ ಮಾಜಿ ಆಟಗಾರ ನಿಧನರಾಗಿದ್ದಾರೆ ಎನ್ನುವ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ನ್ಯೂಜಿಲ್ಯಾಂಡ್ ಕ್ರಿಕೆಟ್ ಫ್ಯಾನ್ ಕ್ಲಬ್ ಹಬ್ ಎನ್ನುವ ಖಾತೆಯ ಹೆಸರಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ "ನಾಥನ್ ಲೆಸ್ಲಿ ಮ್ಯಾಕ್ಲೆಮ್ (ಸಪ್ಟೆಂಬರ್ 1, 1980 ರಂದು ಜನನ) ನ್ಯೂಜಿಲ್ಯಾಂಡ್ ತಂಡದ  ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಈ ದಿನ ಸಂಜೆ ನಿಧನವಾಗಿದ್ದಾರೆ ಎನ್ನುವ  ಈ ಸುದ್ದಿಯನ್ನು ಅವರ ಪತ್ನಿ ವೆನೆಸ್ಸಾ ತಿಳಿಸಿದ್ದಾರೆ " ಎಂದು ಪ್ರಕಟಿಸಲಾಗಿದೆ.

ಈಗ ಇದಕ್ಕೆ  ಸ್ವತಃ ನಾಥನ್ ಮ್ಯಾಕ್ಲೆಮ್ಟ್ವಿಟ್ಟರ್ ನಲ್ಲಿ "ನಾನು ಜೀವಂತವಾಗಿದ್ದೇನೆ ಮತ್ತು ಈ ಹಿಂದಿಗಿಂತಲೂ ನಾನು ಹೆಚ್ಚು ಆಕ್ಟಿವ್ ಆಗಿದ್ದೇನೆ.ಈ ಸುದ್ದಿ ಹೇಗೆ ಬಂತು ಎನ್ನುವುದೇ ತಿಳಿಯುತ್ತಿಲ್ಲ  ಇದು ಫೇಕ್ ನ್ಯೂಸ್ ..ಲವ್ ಯು ಆಲ್" ಎಂದು ಟ್ವೀಟ್ ಮಾಡಿದ್ದಾರೆ.