)
ಕೆ.ಎಲ್ ರಾಹುಲ್ ತುಂಬಾ ಸಿಂಪಲ್ ಆಗಿರೋ ಕ್ರಿಕೆಟರ್. ಸದ್ಯ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿರುವ ಕೆ.ಎಲ್ ರಾಹುಲ್ ತಮ್ಮ ಡಯಟ್ ಪ್ಲಾನ್ ಹೇಗೆಲ್ಲಾ ಇರುತ್ತದೆ ಎಂದು ಸಂದರ್ಶನವೊಂದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಭಾರತೀಯ ಉಪಹಾರಗಳು ಎಂದರೆ ಕನ್ನಡಿಗನಿಗೆ ತುಂಬಾ ಇಷ್ಟವಂತೆ. ಪಿಜ್ಜಾ ಯಾವಾಗಲೋ ಒಮ್ಮೆ ತಿನ್ನುವುದಾಗಿ ಹೇಳಿದ್ದಾರೆ.
ಸಂದರ್ಶನವೊಂದಲ್ಲಿ ಮಾತನಾಡಿರುವ ಕೆ.ಎಲ್ ರಾಹುಲ್ ಅವರು, ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವ ಮೊದಲು ಯಾವಾಗ ಯಾವುದು ತಿನ್ನಬೇಕು ಎಂದು ಎಚ್ಚರಿಕೆಯಿಂದ ತಿಂದರೆ ಒಳ್ಳೆಯದು. ಆದಷ್ಟು ನಾನು ಸಕ್ಕರೆಯಿಂದ ದೂರ ಇರುತ್ತೇನೆ. ಆದರೆ ಸಂಪೂರ್ಣವಾಗಿ ಸಕ್ಕರೆ ದೂರ ಇಡುವುದಿಲ್ಲ. ಇದರಂತೆ ಗೋದಿಯಿಂದ ಮಾಡಿದ ಅಡುಗೆನ ಜಾಸ್ತಿ ತಿನ್ನುವುದಿಲ್ಲ. ಬೇಕಾದರೆ ಮಾತ್ರ ಆಯ್ಕೆ ಮಾಡಿಕೊಂಡು ತಿನ್ನುತ್ತೇನೆ. ದಿನದಲ್ಲಿ ಎಷ್ಟು ಕ್ಯಾಲೋರಿ ಆಹಾರ ತಿನ್ನಬೇಕೆಂದು ನನಗೆ ಗೊತ್ತಿದೆ. ಅದರಂತೆ ನಾನು ಫಾಲೋ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಳಗಿನ ಸಮಯದಲ್ಲಿ ಬ್ರೇಕ್ಫಾಸ್ಟ್ನಲ್ಲಿ ದೋಸೆ ಜೊತೆಗೆ ಎಗ್ ಭರ್ಜಿ, ಮೊಟ್ಟೆಗಳನ್ನು ತಿನ್ನುತ್ತೇನೆ. ಭಾರತದಲ್ಲಿ ಇದ್ದರೇ ಹೆಚ್ಚಾಗಿ ದೋಸೆನೇ ತಿನ್ನೋದು. ಅಂದರೆ ವಾರದಲ್ಲಿ ಏಳುದಿನಗಳ ಪೈಕಿ, ಆರು ದಿನ ದೋಸೆಯೊಂದಿಗೆ ಮೊಟ್ಟೆನ ಬ್ರೇಕ್ಫಾಸ್ಟ್ ಮಾಡುತ್ತೇನೆ. ಯಾವ ತರ ಮೊಟ್ಟೆನ ಬಳಸಿ ಆಹಾರ ತಯಾರಿಸಬಹುದೋ ಆ ರೀತಿಯಲ್ಲಿ ದಿನದಲ್ಲಿ ನಾಲ್ಕು ಮೊಟ್ಟೆಗಳನ್ನು ತಿನ್ನುತ್ತೇನೆ ಎಂದು ಕೆ.ಎಲ್ ರಾಹುಲ್ ಅವರು ಹೇಳಿದ್ದಾರೆ.
ನಾನು ವಿದೇಶದಲ್ಲಿದ್ದರೆ, ಗ್ಲುಟನ್-ಮುಕ್ತ ಟೋಸ್ಟ್ ತಿನ್ನುತ್ತೇನೆ. ಬೆಳಿಗ್ಗೆ ಬಾಳೆಹಣ್ಣುಗಳು ಸೇರಿದಂತೆ ಕೆಲವು ಹಣ್ಣುಗಳನ್ನು, ಧಾನ್ಯಗಳನ್ನು ಸೇವಿಸುತ್ತೇನೆ. ಪ್ರೋಟೀನ್ಗಳೊಂದಿಗೆ ಪ್ರೋಟೀನ್ ಮಿಕ್ಸ್ ಅನ್ನು ಮೊದಲಿನಿಂದಲೂ ತಿನ್ನುತ್ತ ಬರುತ್ತಿದ್ದೇನೆ. ಜಗತ್ತಿನಲ್ಲಿ ನಾನು ಎಲ್ಲೇ ಇದ್ದರೂ ಮಧ್ಯಹ್ನಾದ ಊಟ ಮಾತ್ರ ಭಾರತೀಯ ಶೈಲಿಯಲ್ಲಿ ಇರೋದನ್ನು ತಿನ್ನುತ್ತೇನೆ. ಇದರಿಂದ ನಿತ್ಯ ನನ್ನ ಬೆಳಗಿನ ಉಪಹಾರ ತುಂಬಾ ಸರಳವಾಗಿ ಇರುತ್ತದೆ ಎಂದು ಹೇಳಿದ್ದಾರೆ.