Champions Trophyಯಲ್ಲಿ 41 ರನ್ ಗೆ ಔಟ್ ಆಗಿದ್ದ ಕೊಹ್ಲಿ...! ನಿಯಮ ಗೊತ್ತಿಲ್ಲದೆ ಅವಕಾಶ ಕಳೆದುಕೊಂಡ ಪಾಕ್?

Champions Trophy: ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಆರು ವಿಕೆಟ್ಗಳ ಜಯಗಳಿಸಿತ್ತು. 

Written by - Zee Kannada News Desk | Last Updated : Feb 26, 2025, 03:53 PM IST
  • . ಈ ನಿಯಮ ಗೊತ್ತಿಲ್ಲದ ಪಾಕಿಸ್ತಾನ ಆಟಗಾರರು ಅಂಪೇರ್ ಗೆ ಮನವಿ ಮಾಡಲಿಲ್ಲ.
  • ಬೌಲನ್ನು ಬ್ಯಾಟರ್ ತಡೆ ಹಿಡಿದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.
  • ಈ ಮೂಲಕ ಕೊಹ್ಲಿ 41 ರನ್ನಿಗೆ ಔಟ್ ಆಗುತ್ತಿದ್ದರು.
Champions Trophyಯಲ್ಲಿ 41 ರನ್ ಗೆ ಔಟ್ ಆಗಿದ್ದ ಕೊಹ್ಲಿ...! ನಿಯಮ ಗೊತ್ತಿಲ್ಲದೆ ಅವಕಾಶ ಕಳೆದುಕೊಂಡ ಪಾಕ್?

ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಆರು ವಿಕೆಟ್ಗಳ ಜಯಗಳಿಸಿತ್ತು. 

Add Zee News as a Preferred Source

ಪಂದ್ಯದಲ್ಲಿ ಕೊಹ್ಲಿ 111 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸಿದ್ದರು. ಹೀಗಿರುವಾಗ 41 ರನ್ಗಳಿಗೆ ಕೊಹ್ಲಿ ಔಟ್ ಆಗಿದ್ದರು ಎನ್ನುವ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಔಟ್ ಆಗದೆ ಶತಕಗಳಿಸಿ ಆರು ವಿಕೆಟ್ಗಳ ಜಯಗಳಿಸುವಲ್ಲಿ ನೆರವಾಯಿತು. ಇದನ್ನೂ ಓದಿ:ಡಿವೋರ್ಸ್ ಬಳಿಕ ಪ್ರಖ್ಯಾತ ಕ್ರಿಕೆಟರ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್!? ಪೋಟೋ ಶೇರ್ ಮಾಡಿ ಸೀಕ್ರೆಟ್ ರಿವಿಲ್ ಮಾಡಿದ ಟೆನಿಸ್ ತಾರೆ..

242 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತ 42.3 ಓವರ್ ಗಳಲ್ಲಿ 244 ಗಳಿಸಿ ಆರು ವಿಕೆಟ್ಗಳ ಗೆಲುವು ಸಾಧಿಸಿತ್ತು. ಈ ಸಮಯದಲ್ಲಿ ಕೊಹಿಲಿ ಒಂದು ವೇಳೆ ಬೇಗ ಔಟ್ ಆಗಿದ್ದರೆ, ಭಾರತಕ್ಕೆ ಈ ಗೆಲುವು ಸಾಧ್ಯವಿರುತ್ತಿರಲಿಲ್ಲ. ಆದರೆ 18ನೇ ಓವರ್ ನಲ್ಲಿ ಶುಭ ಮನ್ ಗಿಲ್ ಔಟ್ ಆಗಿದ್ದರು. ಬಳಿಕ ಬಂದ ವಿರಾಟ್ ಕೊಹ್ಲಿ 21ನೇ ಓವರ್ ನ ಐದನೇ ಎಸೆತದಲ್ಲಿ ದೊಡ್ಡ ಎಡವಟ್ಟು ಮಾಡಿದ್ದರು. 

ಹ್ಯಾರಿಸ್ ಬೌಲಿಂಗ್ ಮಾಡುವಾಗ ಕೊಹ್ಲಿ ಬ್ಯಾಟಿಗೆ ಟಚ್ ಮಾಡಿ ಒಂದು ರನ್ ಬಾರಿಸಿದರು. ಈ ವೇಳೆ ಸ್ಟ್ರೈಕರ್ ನತ್ತ ಬಂದ ವಿರಾಟ್ ಕೊಹ್ಲಿ ಬೌಲ್ ಅನ್ನು ತಡೆಹಿಡಿದರು. ಬಿಸಿಸಿಐ ನಿಯಮಗಳ ಪ್ರಕಾರ ಬ್ಯಾಟರ್ ಚಂಡನ್ನು ಬಿಲ್ಡಿಂಗ್ ಮಾಡುವಾಗ ಅಡ್ಡಿಪಡಿಸುವಂತಿಲ್ಲ. Icc 37.4 ನಿಯಮಗಳ ಪ್ರಕಾರ ಚಂದು ಚಲನೆಯಲ್ಲಿರುವಾಗ ಫೀಲ್ಡರ್ ನ ಒಪ್ಪಿಗೆ ಇಲ್ಲದೆ ಬ್ಯಾಟ್ ಅಥವಾ ಬ್ಯಾಟರ್ ನ ಯಾವುದೇ ಭಾಗ ಚಂಡನ್ನು ಮುಟ್ಟಿದ ಬಳಿಕ ಅಥವಾ ಬೌಲನ್ನು ಬ್ಯಾಟರ್ ತಡೆ ಹಿಡಿದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. 

ಹೀಗಿರುವಾಗ ಈ ಪಂದ್ಯದಲ್ಲಿ ಕೊಹ್ಲಿ ಬೌಲ್ ಅನ್ನು ಮುಟ್ಟಿದ್ದಾರೆ. ಈ ನಿಯಮ ಗೊತ್ತಿಲ್ಲದ ಪಾಕಿಸ್ತಾನ ಆಟಗಾರರು ಅಂಪೇರ್ ಗೆ ಮನವಿ ಮಾಡಲಿಲ್ಲ. ಒಂದು ವೇಳೆ ಮನವಿ ಮಾಡಿಕೊಂಡಿದ್ದರೆ ಇದನ್ನು ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಈ ಮೂಲಕ ಕೊಹ್ಲಿ 41 ರನ್ನಿಗೆ ಔಟ್ ಆಗುತ್ತಿದ್ದರು. ಇದರಿಂದ ಪಾಕಿಸ್ತಾನ ತಂಡಕ್ಕೆ ಗೆಲುವು ಸನಿಹವಾಗುತ್ತಿತ್ತು ಆದರೆ ಪಾಕಿಸ್ತಾನ್ ಈ ನಿಯಮ ಗೊತ್ತಿಲ್ಲದೆ ಸುವರ್ಣ ಅವಕಾಶವನ್ನು ಕಳೆದುಕೊಂಡರು. ಇದನ್ನೂ ಓದಿ:ಮಹಾಶಿವರಾತ್ರಿಯ ನಂತರ ಮೀನ ರಾಶಿಯಲ್ಲಿ ಲಕ್ಷ್ಮಿ-ನಾರಾಯಣ ರಾಜಯೋಗ; ಈ 4 ರಾಶಿಗಳಿಗೆ ಆರ್ಥಿಕ ಪ್ರಗತಿ, ಅಪಾರ ಯಶಸ್ಸು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News