ರವಿಶಾಸ್ತ್ರಿಗೆ ಕೊಹ್ಲಿ ಬೆಂಬಲ ನೀಡಿರುವುದು ಆಯ್ಕೆ ವಿಚಾರದಲ್ಲಿ ಪ್ರಭಾವ ಬೀರಿಲ್ಲ- ಕಪಿಲ್ ದೇವ್

ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಮರು ಆಯ್ಕೆಯಾಗಿರುವ ರವಿಶಾಸ್ತ್ರಿ ಆಯ್ಕೆ ವಿಚಾರದಲ್ಲಿ ಕೊಹ್ಲಿ ಪ್ರಭಾವ ಇಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.

Last Updated : Aug 17, 2019, 04:47 PM IST
ರವಿಶಾಸ್ತ್ರಿಗೆ ಕೊಹ್ಲಿ ಬೆಂಬಲ ನೀಡಿರುವುದು ಆಯ್ಕೆ ವಿಚಾರದಲ್ಲಿ ಪ್ರಭಾವ ಬೀರಿಲ್ಲ- ಕಪಿಲ್ ದೇವ್ title=

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಮರು ಆಯ್ಕೆಯಾಗಿರುವ ರವಿಶಾಸ್ತ್ರಿ ಆಯ್ಕೆ ವಿಚಾರದಲ್ಲಿ ಕೊಹ್ಲಿ ಪ್ರಭಾವ ಇಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.

ಈಗ ಎರಡು ವರ್ಷಗಳ ವರೆಗೆ ರವಿಶಾಸ್ತ್ರಿಯವರನ್ನು ಕೋಚ್ ಆಗಿ ಮರು ಆಯ್ಕೆ ಮಾಡಿದ ನಂತರ ಮಾತನಾಡಿದ ಕಪಿಲ್ ದೇವ್ 'ನಾವು ಅವರ (ಕೊಹ್ಲಿಯ) ಅಭಿಪ್ರಾಯಗಳನ್ನು ತೆಗೆದುಕೊಂಡರೆ ನಾವು ಇಡೀ ತಂಡದ ಅಭಿಪ್ರಾಯಗಳನ್ನು ಸಹ ತೆಗೆದುಕೊಳ್ಳುತ್ತಿದ್ದೆವು. ನಾವು ಯಾರನ್ನೂ ಕೇಳಿಲ್ಲ. ಅದಕ್ಕೆ ಯಾವುದೇ ಅವಕಾಶವಿಲ್ಲ" ಎಂದು ಹೇಳಿದರು.

ಕೋಚ್ ಹುದ್ದೆಗೆ ಸಂದರ್ಶನ ನೀಡಿದ ಎಲ್ಲಾ ಅಭ್ಯರ್ಥಿಗಳ ಪೈಕಿ, ರವಿಶಾಸ್ತ್ರಿ ಅವರ ದಾಖಲೆಗೆ ಯಾರು ಸರಿಸಾಟಿಯಿಲ್ಲ, ಏಕೆಂದರೆ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಟೆಸ್ಟ್ ಪಂದ್ಯಗಳಲ್ಲಿ ನಂ .1 ಶ್ರೇಯಾಂಕವನ್ನು ತಲುಪಿತು ಮತ್ತು 71ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು."ಅವರೆಲ್ಲರೂ ಅತ್ಯುತ್ತಮರು. ಕೆಲವೊಮ್ಮೆ ಶಾಸ್ತ್ರಿ ಅವರಿಗೆ ಸಂವಹನ ಕೌಶಲ್ಯ ಹೆಚ್ಚು ಎಂದು ನಾನು ಭಾವಿಸಿದೆನು, ಅವರು ವಿಭಿನ್ನವಾಗಿ ಭಾವಿಸಿರಬಹುದು ಆದರೆ ನಾವು ಅದರ ಬಗ್ಗೆ ಚರ್ಚಿಸಲಿಲ್ಲ, ಅವರ ಪ್ರಸ್ತುತಿಗಳನ್ನು ಕೇಳಿದ ನಂತರ ನಾವು ಅಂಕಗಳನ್ನು ನೀಡಿದ್ದೇವೆ' ಎಂದು ಕಪಿಲ್ ತಿಳಿಸಿದರು.

ರವಿಶಾಸ್ತ್ರಿ ಹೊರತಾಗಿ ಭಾರತದ ಮಾಜಿ ತಂಡದ ಆಟಗಾರರಾದ ರಾಬಿನ್ ಸಿಂಗ್ ಮತ್ತು ಲಾಲ್‌ಚಂದ್ ರಜಪೂತ್  ಹಾಗೂ ನ್ಯೂಜಿಲೆಂಡ್‌ನ ಮಾಜಿ ತರಬೇತುದಾರ ಮೈಕ್ ಹೆಸ್ಸನ್ ಮತ್ತು ಆಸ್ಟ್ರೇಲಿಯಾದ ಟಾಮ್ ಮೂಡಿ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಮಾಜಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತರಬೇತುದಾರ ಫಿಲ್ ಸಿಮ್ಮನ್ಸ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹೊರಬಂದರು.

Trending News