ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸರ್‌ಗೆ ಹೊಡೆಸಿಕೊಳ್ಳದ ದಿಗ್ಗಜ ಬೌಲರ್‌ ಯಾರು ಗೊತ್ತಾ?

ಕ್ರಿಕೆಟ್‌ನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಈ ಕ್ರೀಡಾ ಜಗತ್ತಿನಲ್ಲಿ ಸಿಕ್ಸರ್‌ ಹೊಡೆಸಿಕೊಳ್ಳದ ಬೌಲರ್‌ಗಳಿದ್ದಾರೆ ಎಂದರೆ ನಿಮಗೆ ನಂಬಲು ಸಾಧ್ಯವೇ? ಸಾಧ್ಯವಿಲ್ಲದಿದ್ದರೂ ಇದು ನಿಜ. ಕ್ರಿಕೆಟ್ ಇತಿಹಾಸದಲ್ಲಿ 5 ಲೆಜೆಂಡರಿ ಬೌಲರ್‌ಗಳಿದ್ದಾರೆ. ಅವರ ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಕೂಡ ಹೊಡೆಯಲು ಆಗಿಲ್ಲ. ಒಂದೇ ಒಂದು ಸಿಕ್ಸರ್ ಹೊಡೆಸಿಕೊಳ್ಳದ ಆ 5 ಬೌಲರ್‌ಗಳು ಯಾರೆಂದು ತಿಳಿಯೋಣ.

Written by - Bhavishya Shetty | Last Updated : Mar 23, 2025, 09:21 AM IST
    • ಡಾ ಜಗತ್ತಿನಲ್ಲಿ ಸಿಕ್ಸರ್‌ ಹೊಡೆಸಿಕೊಳ್ಳದ ಬೌಲರ್‌ಗಳಿದ್ದಾರೆ
    • ಅವರ ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಕೂಡ ಹೊಡೆಯಲು ಆಗಿಲ್ಲ.
    • ಒಂದೇ ಒಂದು ಸಿಕ್ಸರ್ ಹೊಡೆಸಿಕೊಳ್ಳದ ಆ 5 ಬೌಲರ್‌ಗಳು ಯಾರೆಂದು ತಿಳಿಯೋಣ
ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸರ್‌ಗೆ ಹೊಡೆಸಿಕೊಳ್ಳದ ದಿಗ್ಗಜ ಬೌಲರ್‌ ಯಾರು ಗೊತ್ತಾ?
Cricket records

Cricket records: ಕ್ರಿಕೆಟ್‌ನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಈ ಕ್ರೀಡಾ ಜಗತ್ತಿನಲ್ಲಿ ಸಿಕ್ಸರ್‌ ಹೊಡೆಸಿಕೊಳ್ಳದ ಬೌಲರ್‌ಗಳಿದ್ದಾರೆ ಎಂದರೆ ನಿಮಗೆ ನಂಬಲು ಸಾಧ್ಯವೇ? ಸಾಧ್ಯವಿಲ್ಲದಿದ್ದರೂ ಇದು ನಿಜ. ಕ್ರಿಕೆಟ್ ಇತಿಹಾಸದಲ್ಲಿ 5 ಲೆಜೆಂಡರಿ ಬೌಲರ್‌ಗಳಿದ್ದಾರೆ. ಅವರ ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಕೂಡ ಹೊಡೆಯಲು ಆಗಿಲ್ಲ. ಒಂದೇ ಒಂದು ಸಿಕ್ಸರ್ ಹೊಡೆಸಿಕೊಳ್ಳದ ಆ 5 ಬೌಲರ್‌ಗಳು ಯಾರೆಂದು ತಿಳಿಯೋಣ.

ಇದನ್ನೂ ಓದಿ:  ಒಬ್ಬ ವ್ಯಕ್ತಿಯ ಕಿಡ್ನಿ ಫೈಲ್ಯೂರ್‌ ಆಗಿ ಕೆಲಸ ಮಾಡೋದನ್ನು ನಿಲ್ಲಿಸಿದ್ರೆ ಎಷ್ಟು ಸಮಯ ಬದುಕುಳಿಯಬಹುದು?

ಡೆರೆಕ್ ಪ್ರಿಂಗಲ್ (ಇಂಗ್ಲೆಂಡ್):
ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಡೆರೆಕ್ ಪ್ರಿಂಗಲ್ ಅವರನ್ನು ಯಾರು ತಾನೇ ಮರೆಯಲು ಸಾಧ್ಯ? ಕೀನ್ಯಾದಲ್ಲಿ ಜನಿಸಿದ ಡೆರೆಕ್ ಬ್ಯಾಟ್ಸ್‌ಮನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಮಧ್ಯಮ ವೇಗಿಯಾಗಿಯೂ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಅವರು ಇಂಗ್ಲೆಂಡ್ ಪರ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 5,287 ಎಸೆತಗಳನ್ನು ಎಸೆದು 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಯಾವುದೇ ಬ್ಯಾಟ್ಸ್‌ಮನ್ ಆಗಲಿ, ಇವರ ಬೌಲಿಂಗ್‌ನಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ.

ಮುದಾಸರ್ ನಜರ್ (ಪಾಕಿಸ್ತಾನ):
1976 ರಿಂದ 1989ರವರೆಗೆ ಪಾಕಿಸ್ತಾನ ಪರ ಆಡಿದ್ದ ಮುದಾಸರ್ ನಜರ್ 76 ಟೆಸ್ಟ್ ಮತ್ತು 112 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇಷ್ಟೇ ಅಲ್ಲ, ಟೆಸ್ಟ್ ಬಗ್ಗೆ ಮಾತನಾಡಿದರೆ, ಮುದಾಸರ್ ನಜರ್ ಒಬ್ಬ ಬೌಲರ್ ಆಗಿ 5867 ಎಸೆತಗಳನ್ನು ಎಸೆದಿದ್ದಾರೆ. ಆದರೆ ಯಾವುದೇ ಬ್ಯಾಟ್ಸ್‌ಮನ್ ಅವರ ಬೌಲಿಂಗ್‌ನಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಯಲು ಸಾಧ್ಯವಾಗಲಿಲ್ಲ.

ಮೊಹಮ್ಮದ್ ಹುಸೇನ್ (ಪಾಕಿಸ್ತಾನ):
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಹುಸೇನ್ 1952-1953ರ ಭಾರತ ಪ್ರವಾಸದ ಸಮಯದಲ್ಲಿ ಮನ್ನಣೆ ಪಡೆದರು. ಹುಸೇನ್ ಪಾಕಿಸ್ತಾನ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 5910 ಎಸೆತಗಳನ್ನು ಎಸೆದು 68 ವಿಕೆಟ್‌ಗಳನ್ನು ಪಡೆದಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಸಿಕ್ಸರ್ ಬಿಟ್ಟುಕೊಟ್ಟಿಲ್ಲ.

ಕೀತ್ ಮಿಲ್ಲರ್ (ಆಸ್ಟ್ರೇಲಿಯಾ):
ಆಸ್ಟ್ರೇಲಿಯಾ ಪರ 55 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೀತ್ ಮಿಲ್ಲರ್ ತಮ್ಮ ವೃತ್ತಿಜೀವನದಲ್ಲಿ 170 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 10,461 ಎಸೆತಗಳನ್ನು ಎಸೆದಿದ್ದರು. ಆದರೆ ಯಾವುದೇ ಬ್ಯಾಟ್ಸ್‌ಮನ್ ಸಿಕ್ಸರ್ ಹೊಡೆಯಬಹುದಾದ ಒಂದೇ ಒಂದು ಚೆಂಡನ್ನು ಎಸೆದಿಲ್ಲ.

ಇದನ್ನೂ ಓದಿ:  ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆ ಹೊಂದಿದ್ದೀರಾ? ಹಾಗಿದ್ರೆ ಹುಷಾರ್ ದಂಡ ಬೀಳಬಹುದು..

ನೀಲ್ ಹಾಕ್ (ಆಸ್ಟ್ರೇಲಿಯಾ):
ಆಸ್ಟ್ರೇಲಿಯಾದ ಮಾಜಿ ಆಟಗಾರ ನೀಲ್ ಹೆವೆಕ್ 1963 ರಲ್ಲಿ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 145 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 6 ಸಾವಿರದ 987 ಎಸೆತಗಳನ್ನು ಎಸೆದಿದ್ದಾರೆ. ಯಾವುದೇ ಬ್ಯಾಟ್ಸ್‌ಮನ್ ಅವರ ಎಸೆತಗಳಲ್ಲಿ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News