LSG vs RCB: ರಿಷಭ್‌ ಪಂತ್‌ ಭರ್ಜರಿ ಶತಕ; ಆರ್‌ಸಿಬಿಗೆ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿದ ಲಕ್ನೋ!!

Lucknow Super Giants vs Royal Challengers Bengaluru: ನಾಯಕ ರಿಷಭ್‌ ಪಂತ್‌ ಮತ್ತು ಮಿಚೆಲ್ ಮಾರ್ಷ್ 2ನೇ ವಿಕೆಟ್‌ 152 ರನ್‌ಗಳ ಅಮೋಘ ಜೊತೆಯಾಟವಾಡಿದ್ದು, ಆರ್‌ಸಿಬಿ ಗೆಲುವಿಗೆ ಲಕ್ನೋ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿದೆ. 

Written by - Puttaraj K Alur | Last Updated : May 27, 2025, 09:35 PM IST
  • ಲೀಗ್‌ನ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರಿಷಭ್‌ ಪಂತ್‌
  • ಆರ್‌ಸಿಬಿ ವಿರುದ್ಧ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿದ ಲಕ್ನೋ
  • ಲಕ್ನೋ ವಿರುದ್ಧ ಗೆದ್ದು ಕ್ವಾಲಿಫೈಯರ್‌ಗೆ ಎಂಟ್ರಿ ಕೊಡುತ್ತಾ ರೆಡ್‌ ಆರ್ಮಿ?
LSG vs RCB: ರಿಷಭ್‌ ಪಂತ್‌ ಭರ್ಜರಿ ಶತಕ; ಆರ್‌ಸಿಬಿಗೆ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿದ ಲಕ್ನೋ!!

LSG vs RCB, IPL 2025: 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯ ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್‌ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 227 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿದೆ.

Add Zee News as a Preferred Source

ನಾಯಕನ ಆಟ ಪ್ರದರ್ಶಿಸಿದ ರಿಷಭ್ ಪಂತ್!!

ಈ ಲೀಗ್‌ನಲ್ಲಿ ಅಷ್ಟೇನೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಲಕ್ನೋ ತಂಡ ಕ್ಯಾಪ್ಟನ್‌ ರಿಷಭ್‌ ಪಂತ್‌ ಲೀಗ್‌ನ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆರ್‌ಸಿಬಿಯ ಬೌಲರ್‌ಗಳನ್ನ ಮನಬಂದಂತೆ ಬೆಂಡೆತ್ತಿದ ಪಂತ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಮಿಚೆಲ್ ಮಾರ್ಷ್ ಕೂಡ ಸ್ಫೋಟಕ ಆಟವಾಡಿ ತಂಡವು ಬೃಹತ್‌ ಮೊತ್ತ ಪೇರಿಸಲು ನೆರವಾದರು. ಈ ಜೋಡಿ 2ನೇ ವಿಕೆಟ್‌ 152 ರನ್‌ಗಳ ಅಮೋಘ ಜೊತೆಯಾಟವಾಡಿತು. ಹೀಗಾಗಿ ಆರ್‌ಸಿಬಿಗೆ ಲಕ್ನೋ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿದೆ.

ನಾಯಕನ ಆಟ ಪ್ರದರ್ಶಿಸಿದ ಪಂತ್‌  61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ ಇದ್ದ ಅಜೇಯ 118 ರನ್‌ ಗಳಿಸಿ ಮಿಂಚಿದರು. ಮಾರ್ಷ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ ಇದ್ದ 67 ರನ್‌ ಗಳಿಸಿದರು. ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್, ನುವಾನ್ ತುಷಾರ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್‌ ಪಡೆದರು.
ಇದನ್ನೂ ಓದಿ: ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ಗುಡ್‌ ನ್ಯೂಸ್‌ ನೀಡಿದ ಸಾರಾ ತೆಂಡಲ್ಕೂರ್‌! ಸಚಿನ್‌ ಪುತ್ರಿಯ ಪೋಸ್ಟ್‌ ನೋಡಿ ಅಭಿಮಾನಿಗಳು ಫುಲ್‌ ಖುಷ್..‌

ಜಯ ಸಾಧಿಸುವುದು ಆರ್‌ಸಿಬಿಗೆ ಅನಿವಾರ್ಯ!

ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಈಗಾಗಲೇ ಫ್ಲೇಅಫ್‌ ಪ್ರವೇಶಿಸಿದೆ. ಆದರೆ ಈ ಲೀಗ್‌ನಲ್ಲಿ ರೆಡ್‌ ಆರ್ಮಿ ಕ್ವಾಲಿಫೈಯರ್‌ ಪಂದ್ಯ ಆಡುವತ್ತ ಚಿತ್ತ ನೆಟ್ಟಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಯ ಸಾಧಿಸುವುದು ಆರ್‌ಸಿಬಿಗೆ ಅನಿವಾರ್ಯವಾಗಿದೆ. ಸದ್ಯ ಆರ್‌ಸಿಬಿ ಖಾತೆಯಲ್ಲಿ 17 ಅಂಕಗಳಿದ್ದು, ಈ ಪಂದ್ಯ ಗೆದ್ದಲ್ಲಿ 19 ಅಂಕಗಳು ಆಗುತ್ತವೆ. ಇದರಿಂದ ಆರ್‌ಸಿಬಿ ಮೊದಲೆರಡು ಸ್ಥಾನಕ್ಕಾಗಿ ಪೈಪೋಟಿ ನಡೆಸಬಹುದು. ಹೀಗಾಗಿ ಆರ್‌ಸಿಬಿ ಲೀಗ್‌ ಹಂತದ ಈ ಕೊನೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಎರಡೂ ತಂಡಗಳ ಸ್ಕ್ವಾಡ್‌ ಈ ರೀತಿ ಇದೆ:

ಲಕ್ನೋ ಸೂಪರ್‌ ಜೈಂಟ್ಸ್: ರಿಷಭ್ ಪಂತ್ (ವಿಕೆಟ್‌ ಕೀಪರ್ & ನಾಯಕ), ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ಬ್ರೀಟ್ಜ್ಕೆ, ಆಯುಷ್ ಬಡೋನಿ, ಅಬ್ದುಲ್ ಸಮದ್, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ರಾಠಿ, ಅವೇಶ್ ಖಾನ್, ವಿಲಿಯಂ ಓ'ರೂರ್ಕ್.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು: ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್ & ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್‌ ಅಗರ್‌ವಾಲ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌,  ರೊಮಾರಿಯೊ ಶೆಫರ್ಡ್‌, ನುವಾನ್ ತುಷಾರ, ಯಶ್‌ ದಯಾಳ್‌, ಭುವನೇಶ್ವರ್ ಕುಮಾರ್, ಕೃನಾಲ್‌ ಪಾಂಡ್ಯ, ಸುಯೇಶ್ ಶರ್ಮಾ.

ಇದನ್ನೂ ಓದಿ: IPL 2025: ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಅಗ್ರಸ್ಥಾನಕ್ಕೇರಿದ RCB: ಹೊಸ ದಾಖಲೆ ಬರೆದ ರೆಡ್‌ ಆರ್ಮಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News