ಕನ್ನಡಿಗ ಮಾಯಂಕ್ ಅಗರವಾಲ್ ದ್ವಿಶತಕದ ಅಬ್ಬರ, ಸುಸ್ಥಿತಿಯಲ್ಲಿ ಭಾರತ

ಇಂದೋರ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್ ಅಗರ್ವಾಲ್ ತಮ್ಮ ಭರ್ಜರಿ ದ್ವಿಶತಕದ ಮೂಲಕ ಮಿಂಚಿದರು. ಆ ಮೂಲಕ ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

Updated: Nov 16, 2019 , 11:04 AM IST
ಕನ್ನಡಿಗ ಮಾಯಂಕ್ ಅಗರವಾಲ್ ದ್ವಿಶತಕದ ಅಬ್ಬರ, ಸುಸ್ಥಿತಿಯಲ್ಲಿ ಭಾರತ
Photo courtesy: AFP

ನವದೆಹಲಿ: ಇಂದೋರ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್ ಅಗರ್ವಾಲ್ ತಮ್ಮ ಭರ್ಜರಿ ದ್ವಿಶತಕದ ಮೂಲಕ ಮಿಂಚಿದರು. ಆ ಮೂಲಕ ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ದ್ವಿಶತಕ( 243) ಗಳಿಸಿದ ಸಾಧನೆ ಮಾಡಿದ್ದಾರೆ.

ಈ ಮೈಲಿಗಲ್ಲು ತಲುಪಿದ ನಂತರ ಮಾಯಾಂಕ್ ಅಗರ್ವಾಲ್, ಡ್ರೆಸ್ಸಿಂಗ್ ಕೋಣೆಯ ಕಡೆಗೆ ಸನ್ನೆ ಮಾಡಿ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಸೂಚಿಸಿದರು, ಅಗರ್ವಾಲ್ ಮೂರು ಅಂಕಿಗಳನ್ನು ತಲುಪಿದಾಗ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಕೇಳಿಕೊಂಡಿದ್ದರು. 2 ನೇ ದಿನದ ಊಟದ ವೇಳೆ ನಂತರ ಅಗರ್ವಾಲ್ ತನ್ನ ಮೂರನೇ ಟೆಸ್ಟ್ ಶತಕದ ಸಂಭ್ರಮವನ್ನು ಆಚರಿಸುತ್ತಿದ್ದಾಗ ಡ್ರೆಸ್ಸಿಂಗ್ ಕೊಠಡಿಯಿಂದ ವಿರಾಟ್ ಕೊಹ್ಲಿ ತನ್ನ ಆರಂಭಿಕ ಆಟಗಾರನಿಗೆ ಡಬಲ್ ಸೆಂಚುರಿಗಳಿಸಲು ಸೂಚಿಸಿದ್ದರು.

 
 
 
 

 
 
 
 
 
 
 
 
 

You asked for it you got it 😎😎 Skipper asking for more 😁😁 300 possible? 🤔 #TeamIndia #INDvBAN @paytm

A post shared by Team India (@indiancricketteam) on

ಈಗ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಮಾಯಾಂಕ್  ಅಗರ್ವಾಲ್ ಶತಕ ಸಂಭ್ರಮದ ವೀಡಿಯೊವನ್ನು ಪೋಸ್ಟ್ ಮಾಡಿದೆ. ಭಾರತ ತಂಡ ಎರಡನೇ ದಿನದಾಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 493 ರನ್ ಗಳಿಸಿದೆ. ಕ್ರಿಸ್ ನಲ್ಲಿ ರವಿಂದ್ರ ಜಡೇಜಾ(60) ಹಾಗೂ ಉಮೇಶ್ ಯಾದವ್(25) ಆಡುತ್ತಿದ್ದಾರೆ. ಬಾಂಗ್ಲಾದೇಶ ತಂಡವು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ಸರ್ವಪತನವನ್ನು ಕಂಡಿತ್ತು. ಈಗ ಭಾರತ 343 ರನ್ ಗಳ ಮುನ್ನಡೆಯನ್ನು ಗಳಿಸಿದೆ.