"ಮೊಹಮ್ಮದ್‌ ಸಿರಾಜ್‌ ವಿಲನ್‌..."- 2ನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದ್ದರೂ ಸ್ಟಾರ್‌ ಬೌಲರ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಹೀಗಂದಿದ್ದೇಕೆ?

Sunil Gavaskar statement on Siraj: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಸಿರಾಜ್ ಅವರಿಗೆ ಸನ್ನೆ ಮಾಡಿ ಏನನ್ನೋ ಹೇಳಿದ್ದರು. ಇದನ್ನು ಟೀಂ ಇಂಡಿಯಾದ ಅನುಭವಿ ಸುನಿಲ್‌ ಗವಾಸ್ಕರ್‌, "ಇದರ ಅಗತ್ಯವಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

Written by - Bhavishya Shetty | Last Updated : Dec 7, 2024, 07:40 PM IST
    • ಟ್ರಾವಿಸ್ ಹೆಡ್‌ಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದ್ದರು
    • ಈ ಸಂದರ್ಭದಲ್ಲಿ ಹೆಡ್‌ ಅವರನ್ನು ಸಿರಾಜ್‌ ನಿಂದಿಸಿದ್ದರು ಎನ್ನಲಾಗಿದೆ.
    • ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
"ಮೊಹಮ್ಮದ್‌ ಸಿರಾಜ್‌ ವಿಲನ್‌..."- 2ನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದ್ದರೂ ಸ್ಟಾರ್‌ ಬೌಲರ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಹೀಗಂದಿದ್ದೇಕೆ? title=
Sunil Gavaskar

Sunil Gavaskar statement on Mohammad Siraj: ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್‌ನಲ್ಲಿ ಶನಿವಾರ ತಲಾ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಕಂಬ್ಯಾಕ್‌ ಮಾಡಿದ್ದಾರೆ. ಭಾರತಕ್ಕೆ ಅಪಾಯವನ್ನೊಡ್ಡುತ್ತಿದ್ದ ಟ್ರಾವಿಸ್ ಹೆಡ್‌ಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಹೆಡ್‌ ಅವರನ್ನು ಸಿರಾಜ್‌ ನಿಂದಿಸಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಒಂದಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಈ ಎರಡು ಕಾಯಿಲೆ ಇದ್ದವರು ಯಾವತ್ತೂ ಹಸಿರು ಬಟಾಣಿ ಸೇವಿಸಬೇಡಿ...!

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಸಿರಾಜ್ ಅವರಿಗೆ ಸನ್ನೆ ಮಾಡಿ ಏನನ್ನೋ ಹೇಳಿದ್ದರು. ಇದನ್ನು ಟೀಂ ಇಂಡಿಯಾದ ಅನುಭವಿ ಸುನಿಲ್‌ ಗವಾಸ್ಕರ್‌, "ಇದರ ಅಗತ್ಯವಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಟ್ರಾವಿಸ್ ಹೆಡ್ 141 ಎಸೆತಗಳನ್ನು ಎದುರಿಸಿ 140 ರನ್ ಗಳಿಸಿದ್ದರು. ಹೆಡ್ ಔಟಾದ ನಂತರ, ಸಿರಾಜ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗೆ  ಏನೋ ಹೇಳಿದ್ದರು. ಅದಕ್ಕೆ ಹೆಡ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆದರೆ, ಅಡಿಲೇಡ್‌ನಲ್ಲಿದ್ದ ಸ್ಥಳೀಯ ಅಭಿಮಾನಿಗಳು ಈ ಚಕಮಕಿಯನ್ನು ಇಷ್ಟಪಡದೆ, ಸಿರಾಜ್‌ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ತಂದೆ ಇಲ್ಲ, ಕುಟುಂಬದ ಪ್ರೀತಿಯೂ ಸಿಕ್ಕಿಲ್ಲ! ಎಲ್ಲಾ ಇದ್ದೂ ಅನಾಥರಂತೆ ಬೆಳೆದ ಈತ ಇಂದು ಟೀಂ ಇಂಡಿಯಾದ ಬಲಗೈ ಬಂಟ... ಭಾರತ ಟಿ-20 ವಿಶ್ವಕಪ್ ಗೆದ್ಧಿದೇ ಈತನಿಂದ

ಸುನಿಲ್ ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್‌ಗೆ ಪ್ರತಿಕ್ರಿಯಿಸಿದ್ದು, "ಈ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ, ಇದರ ಅಗತ್ಯವಿರಲಿಲ್ಲ ಎಂದು ಹೇಳುತ್ತೇನೆ. ಆ ವ್ಯಕ್ತಿ (ಟ್ರಾವಿಸ್‌ ಹೆಡ್) 140‌ ರನ್‌ ಗಳಿಸಿದ್ದಾರೆ. 140 ರನ್ ಗಳಿಸಿ ಪೆವಿಲಿಯನ್‌ಗೆ ಹೋಗುವಾಗ ಹೀಗೆ ಸೂಚಿಸುತ್ತಿದ್ದಾರೆ. ಟ್ರಾವಿಸ್ ಹೆಡ್ ಲೋಕಲ್ ಹೀರೋ ಆಗಿದ್ದು, 100 ರನ್ ಗಳಿಸಿ ಚಪ್ಪಾಳೆ ತಟ್ಟಿದ್ದರೆ ಸಿರಾಜ್ ಇಡೀ ಪ್ರೇಕ್ಷಕರಿಗೆ ಹೀರೋ ಆಗುತ್ತಿದ್ದರು. ಆದರೆ ವಿದಾಯ ಹೇಳುವ ಬದಲು ಹೀಗೆ ಮಾಡಿ ವಿಲನ್ ಆದರು. ಆ ವ್ಯಕ್ತಿ 140 ರನ್ ಗಳಿಸಿದ್ದಾನೆ. ಅವನು ಒಂದು ಅಥವಾ ಎರಡು ರನ್‌ಗಳಿಗೆ ಔಟಾದರೆ, ನೀವು ಅವನನ್ನು ತಮಾಷೆ ಮಾಡಿ ಕಳುಹಿಸಬಹುದಿತ್ತು" ಎಂದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News