Mohammed Rizwan : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 3ನೇ ಟೆಸ್ಟ್‌ ಪಂದ್ಯವನ್ನು ಆಸಿಸ್ ತಂಡವು ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 3-0 ಅಂತರಗಳಿಂದ ವಶಮಾಡಿಕೊಂಡಿದೆ. ಈ ಸರಣಿಯ ಮೂರು ಪಂದ್ಯಗಳನ್ನು ಸೋಲುವ ಮೂಲಕ ಪಾಕ್‌ ತಂಡವು ಸರಣಿಯುದ್ದಕ್ಕು ತನ್ನ ಅಸಮರ್ಥ ಪ್ರದರ್ಶನವನ್ನು ಎತ್ತಿತೋರಿತು. 


COMMERCIAL BREAK
SCROLL TO CONTINUE READING

ಈ ಪಿಂಕ್‌ ಬಾಲ್‌ ಟೆಸ್ಟ್‌ ಸರಣಿಯನ್ನು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ  ಸಲುವಾಗಿ ಮ್ಯಾಕ್‌ ಗ್ರಾತ್‌ ಫೌಂಡೇಶನ್‌ ಆಯೋಜಿಸಿತ್ತು. 2008 ರಲ್ಲಿ ಮ್ಯಾಕ್‌ ಗ್ರಾತ್‌ರವರ ಪತ್ನಿ ಜೇನ್‌ ಅವರು ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಆ ನಿಟ್ಟಿನಲ್ಲಿ ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಟೆಸ್ಟ್‌ ಸರಣಿಯನ್ನು ಆಯೋಜಿಸುತ್ತ ಬಂದಿದೆ.


ಇದನ್ನೂ ಓದಿ-IND vs ENG: ಇಂಗ್ಲೆಂಡ್ ತಂಡದ ಜೊತೆ ಭಾರತಕ್ಕೆ ಬರುವ ಅಡುಗೆ ಭಟ್ಟ ಯಾರು ಗೊತ್ತೇ!?


ಸಿಡ್ನಿಯಲ್ಲಿ ನಡೆದ ಪಂದ್ಯವು ನಿನ್ನೆ(ಶನಿವಾರ) ಅಂತ್ಯಗೊಂಡಿತು. ಪಂದ್ಯದ ಮುಗಿದ ನಂತರ ಎಲ್ಲ ಆಟಗಾರರು ಮ್ಯಾಕ್‌ ಗ್ರಾತ್‌ ಕುಟುಂಬದ ಮಹಿಳೆಯರೊಂದಿಗೆ ಹಸ್ತಲಾಘ ಮಾಡಲು ಮುಂದಾದರು. ಆದರೆ ಪಾಕ್‌ ಆಟಗಾರ ಮೊಹಮದ್‌ ರಿಜ್ವಾನ್‌ ಮಾತ್ರ ಹಸ್ತಲಾಘ ಮಾಡಲು ನಿರಾಕರಿಸಿದರು. 


ಪಾಕ್‌ ವಿಕೆಟ್‌ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಮ್ಯಾಕ್‌ ಗ್ರಾತ್‌ ಕುಟುಂಬದ ಮಹಿಳೆಯರೊಂದಿಗೆ ಹಸ್ತಲಾಘವನ್ನು ಮಾಡುವ ಬದಲಿಗೆ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿದರು. ಅದಕ್ಕೆ ತಕ್ಕಂತೆ ಆ ಮಹಿಳೆಯರು ಕೂಡ ಕೈ ಜೋಡಿಸಿ ವಂದನೆ ಸಲ್ಲಿಸಿದರು. 


ಇದನ್ನೂ ಓದಿ-ನಾನು ನೋಡಿದ ಅತ್ಯಂತ ಕೆಟ್ಟ ತಂಡ ಪಾಕಿಸ್ತಾನ! ಗಿಲ್‌ ಕ್ರಿಸ್ಟ್


ರಿಜ್ವಾನ್‌ ಮಹಿಳೆಯರಿಗೆ ಗೌರವ ಸೂಚಕ ರೀತಿಯಲ್ಲಿ ತಮ್ಮ ಕೃತ್ಙತೆಗಳನ್ನು ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ತಮ್ಮ ಸೌಜನ್ಯತೆ ಹಾಗೂ  ಸಂಕೃತಿಯನ್ನು ಎತ್ತಿ ಸಾರಿದರು. ಈ ವೀಡಿಯೋ ಈ ಎಲ್ಲಡೆ ವೈರಲ್‌ ಆಗಿದ್ದು ಹೆಚ್ಚು ಸುದ್ದಿ ಮಾಡುತಿದೆ. 


ಸಡ್ನಿಯಲ್ಲಿ ನಡೆದ ಕಡೆಯ ಪಂದ್ಯದಲ್ಲಿ ಪಾಕ್‌ ತಂಡವು ಮತ್ತೊಮ್ಮೆ ತನ್ನ ಕಳಪೆ ಪ್ರದರ್ಶನವನ್ನು ತೋರಿಸಿದರು. ಆದರೆ ರಿಜ್ವಾನ್‌ ಮಾತ್ರ ಎಂದಿನಂತೆ ತಮ್ಮ ಏಕಾಂಗಿ ಹೋರಾಟವನ್ನು ನಡೆಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 130 ರ ಗುರಿ ನೀಡಲು ಮಾತ್ರ ಸಾಧ್ಯವಾಯಿತು. ಕನಿಷ್ಠ ಗುರಿ ಬೆನ್ನಟ್ಟಿದ ಆಸಿಸ್‌ 8 ವಿಕೆಟ್‌ಗಳಿಂದ ಜಯಗಳಿಸಿಕೊಂಡಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ