ಎಂ.ಎಸ್.ಧೋನಿಗೆ 10 ಓವರ್‌ ಬ್ಯಾಟಿಂಗ್‌ ಮಾಡಲು ಆಗಲ್ಲ: ಚೆನ್ನೈ ಕೋಚ್‌ ಹೇಳಿಕೆ

MS Dhoni: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಅನ್‌ಕ್ಯಾಪ್ಡ್‌ ರೂಲ್ಸ್ ಪ್ರಕಾರ ಧೋನಿಯನ್ನು 4 ಕೋಟಿ ರೂ. ನೀಡಿ ರೀಟೈನ್ ಮಾಡಿಕೊಂಡಿದೆ.

Written by - Puttaraj K Alur | Last Updated : Apr 1, 2025, 08:06 PM IST
  • ಎಂ.ಎಸ್.ಧೊನಿ ನಿವೃತ್ತಿಯಾಗಬೇಕು ಅನ್ನೋ ಅಭಿಪ್ರಾಯಗಳು ಕೇಳಿಬರುತ್ತಿವೆ
  • ಧೋನಿ 10 ಓವರ್‌ ಬ್ಯಾಟ್‌ ಮಾಡಲು ಸಾಧ್ಯವಿಲ್ಲವೆಂದ ಚೆನ್ನೈ ತಂಡದ ಕೋಚ್‌
  • ಸ್ಟೀಫನ್‌ ಫ್ಲೆಮಿಂಗ್‌ ಶಾಕಿಂಗ್‌ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆ
ಎಂ.ಎಸ್.ಧೋನಿಗೆ 10 ಓವರ್‌ ಬ್ಯಾಟಿಂಗ್‌ ಮಾಡಲು ಆಗಲ್ಲ: ಚೆನ್ನೈ ಕೋಚ್‌ ಹೇಳಿಕೆ

Indian Premier League 2025: ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಲ್ಲಿ ಮುಂದುವರಿಯುವ ಬದಲು ನಿವೃತ್ತಿಯಾಗಬೇಕು ಅನ್ನೋ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಧಾನ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಈ ಹೇಳಿಕೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Add Zee News as a Preferred Source

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವು ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ಲೆಮಿಂಗ್‌, ʼನಿವೃತ್ತಿಯ ಸಮಯ ಹತ್ತಿರ ಬಂದಿದೆ ಎಂಬುದು ಧೋನಿಗೂ ಗೊತ್ತಿದೆ. ಮೊದಲಿನಂತೆ ಅವರು ಮೈದಾನದಲ್ಲಿ ಓಡಾಡಲು ಆಗುತ್ತಿಲ್ಲ. ನಿರಂತರವಾಗಿ ಓಡಾಡುತ್ತಾ ಅವರು 10 ಓವರ್‌ ಬ್ಯಾಟ್‌ ಮಾಡಲು ಸಾಧ್ಯವಿಲ್ಲʼವೆಂದು ಹೇಳಿದ್ದಾರೆ.

ಇದನ್ನೂ ಓದಿ: ಕಾವ್ಯ ಮಾರನ್‌ ಅಲ್ಲ... IPL ನಲ್ಲಿ ಸಂಚಲನ ಸೃಷ್ಟಿಸಿದ ಈ ಮಿಸ್ಟ್ರಿ ಗರ್ಲ್‌ ಯಾರು ಗೊತ್ತಾ... ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದವರು ಇವ್ರೇ!

ಯಾವ ದಿನದಂದು ತಂಡಕ್ಕೆ ಎಷ್ಟು ಕೊಡುಗೆ ನೀಡಬಹುದು ಎನ್ನುವುದನ್ನು ಧೋನಿಯೇ ನಿರ್ಧರಿಸುತ್ತಾರೆ ಅಂತಾ ಫ್ಲೆಮಿಂಗ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. 

ಧೋನಿ ಕೂಡಲೇ ನಿವೃತ್ತಿ ಘೋಷಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟರೆ, ಅವರು ವಿಕೆಟ್‌ ಕೀಪಿಂಗ್‌ ಮತ್ತು ತಂಡ ನಿರ್ವಹಣೆಯಲ್ಲಿ ಕೊಡುಗೆ ನೀಡುತ್ತಿದ್ದು, ಇನ್ನಷ್ಟು ದಿನ ಮುಂದುವರಿಸಲು ಸಮಸ್ಯೆ ಇಲ್ಲವೆಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಇದೇ ಕೊನೆ ಪಂದ್ಯ... "ಇದು ಅದ್ಭುತ ಭಾವನೆ" ಎನ್ನುತ್ತಾ ನಿವೃತ್ತಿ ಘೋಷಿಸುವ ದಿನಾಂಕ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ

2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಧೋನಿ, ಐಪಿಎಲ್‌ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಅನ್‌ಕ್ಯಾಪ್ಡ್‌ ರೂಲ್ಸ್ ಪ್ರಕಾರ ಧೋನಿಯನ್ನು 4 ಕೋಟಿ ರೂ. ನೀಡಿ ರೀಟೈನ್ ಮಾಡಿಕೊಂಡಿದೆ. ನಾಯಕನಾಗಿ 5 ಟ್ರೋಫಿ ಗೆದ್ದಿರುವ ಧೋನಿ, ಆಟಗಾರನಾಗಿ ಇನ್ನೊಂದು ಟ್ರೋಫಿ ಗೆಲ್ಲಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಶುಭ ಹಾರೈಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News