)
Team India cricketers who committed suicide: ಕ್ರಿಕೆಟ್ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅನೇಕ ಆಟಗಾರರಿದ್ದಾರೆ. ಹಾಗೇ ಸಂಪಾದಿಸಿದ ಹಣವನ್ನೆಲ್ಲಾ ಹೂಡಿಕೆ ಮಾಡಿ ಒಳ್ಳೆಯ ರೀತಿಯಲ್ಲಿ ವ್ಯಯಿಸುತ್ತಾರೆ. ಆದರೆ ಕೆಲವೊಂದಷ್ಟು ಕ್ರಿಕೆಟಿಗರು ಸಂಪಾದನೆಯನ್ನು ಅನಾವಶ್ಯಕವಾಗಿ ವ್ಯಯಿಸಿ ಕೊನೆಗೆ ಕಠಿಣ ದಾರಿಯನ್ನು ಹಿಡಿದಿರುವುದನ್ನು ಕಾಣಬಹುದು. ಅಂತಹ ಕ್ರಿಕೆಟಿಗರಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೂಡ ಒಬ್ಬರು.
ಗ್ರಹಾಂ ಥೋರ್ಪ್: ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ಗ್ರಹಾಂ ಥೋರ್ಪ್ ಆಗಸ್ಟ್ 5, 2024 ರಂದು ನಿಧನರಾದರು. ಸಾವಿನ ನಂತರ, ಗ್ರಹಾಂ ಥೋರ್ಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಬಹಿರಂಗಪಡಿಸಿದರು. ಮಾಜಿ ಕ್ರಿಕೆಟಿಗ ಕಳೆದ ಕೆಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡುಕೊಂಡಿದ್ದಾರೆ ಎಂದು ಅಮಂಡಾ ಹೇಳಿದರು.
ಡೇವಿಡ್ ಬೈರ್ಸ್ಟೋವ್: ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಗ್ರಹಾಂ ಥೋರ್ಪ್ ಮೊದಲು, ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಅವರ ತಂದೆ ಡೇವಿಡ್ ಬೈರ್ಸ್ಟೋವ್ ಕೂಡ ತಮ್ಮ ಪ್ರಾಣ ಕಳೆದುಕೊಂಡರು. 1998 ರಲ್ಲಿ, ಡೇವಿಡ್ ಬೈರ್ಸ್ಟೋವ್ ಕೇವಲ 46 ನೇ ವಯಸ್ಸಿನಲ್ಲಿ ಯಾರ್ಕ್ಷೈರ್ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರು. ಜಾನಿ ಬೈರ್ಸ್ಟೋವ್ ಆಗ ತುಂಬಾ ಚಿಕ್ಕವರಾಗಿದ್ದು, ಕೇವಲ 8 ವರ್ಷ ವಯಸ್ಸಿನವರಾಗಿದ್ದರು. ಡೇವಿಡ್ ಇಂಗ್ಲೆಂಡ್ ಪರ 4 ಟೆಸ್ಟ್ ಮತ್ತು 21 ಏಕದಿನ ಪಂದ್ಯಗಳನ್ನು ಆಡಿದ್ದರು.
ಆಬ್ರೆ ಫಾಕ್ನರ್: ದಕ್ಷಿಣ ಆಫ್ರಿಕಾದ ಆಬ್ರೆ ಫಾಕ್ನರ್ ಆಟದಿಂದ ನಿವೃತ್ತರಾದ ನಂತರ ಕ್ರಿಕೆಟ್ ಶಾಲೆಯನ್ನು ತೆರೆದರು. ಆದರೆ ಅದನ್ನು ಚೆನ್ನಾಗಿ ನಡೆಸಲು ಸಾಧ್ಯವಾಗಲಿಲ್ಲ. ಅವರು ಬಯಸಿದ ಯಶಸ್ಸನ್ನು ಪಡೆಯಲಿಲ್ಲ. ಮಾನಸಿಕ ತೊಂದರೆಯಿಂದಾಗಿ, ಆಬ್ರೆ ಫಾಕ್ನರ್ ಸೆಪ್ಟೆಂಬರ್ 10, 1930 ರಂದು ತಮ್ಮ ಕ್ರಿಕೆಟ್ ಶಾಲೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಮಹಾನ್ ಆಟಗಾರ ದಕ್ಷಿಣ ಆಫ್ರಿಕಾ ಪರ ಒಟ್ಟು 25 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಜಿಮ್ ಬರ್ಕ್: ಆಸ್ಟ್ರೇಲಿಯನ್ ಕ್ರಿಕೆಟ್ ತಂಡಕ್ಕಾಗಿ 24 ಟೆಸ್ಟ್ ಪಂದ್ಯಗಳನ್ನು ಆಡಿದ ಜಿಮ್ ಬರ್ಕ್, 54 ನೇ ವಯಸ್ಸಿನಲ್ಲಿ ಸಾವನ್ನು ಅಪ್ಪಿಕೊಂಡರು. ಮಾಜಿ ಆಸ್ಟ್ರೇಲಿಯನ್ ಆಟಗಾರನ ಸಾವಿನ ಸುದ್ದಿ ಹೊರಬಂದ ನಂತರ, ಅವರಿಗೆ ಸಂಬಂಧಿಸಿದ ಅನೇಕ ವಿಷಯಗಳು ಸಹ ಕೇಳಿಬಂದವು. ಜಿಮ್ ಜೂಜಾಟದಲ್ಲಿ ಸುಮಾರು 1.5 ಲಕ್ಷ ಡಾಲರ್ಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಯಿತು. ಹಣದ ಸಮಸ್ಯೆಯಲ್ಲಿ ಸಿಲುಕಿದ ನಂತರ, ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಹೆರಾಲ್ಡ್ ಗಿಂಬ್ಲೆಟ್: ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಹೆಸರು ಮಾಡಿದ್ದ ಹೆರಾಲ್ಡ್ ಗಿಂಬ್ಲೆಟ್ ಕೂಡ ಆತ್ಮಹತ್ಯೆ ಮಾಡಿಕೊಂಡರು. ಇಂಗ್ಲಿಷ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಹೆರಾಲ್ಡ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 23,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು 49 ಶತಕಗಳನ್ನು ಗಳಿಸಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಬಲವಾದ ದಾಖಲೆಯನ್ನು ಹೊಂದಿದ್ದ ಹೆರಾಲ್ಡ್, ಆದರೆ ಇಂಗ್ಲೆಂಡ್ ಪರ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಖಿನ್ನತೆಯಿಂದ ಬಳಲುತ್ತಿದ್ದ ಈ ಆಟಗಾರ 1978 ರಲ್ಲಿ ಮಾದಕವಸ್ತು ಮಿತಿಮೀರಿದ ಸೇವನೆಯಿಂದ ನಿಧನರಾದರು.
ವಿ.ಬಿ. ಚಂದ್ರಶೇಖರ್: ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ರಾಷ್ಟ್ರೀಯ ಆಯ್ಕೆದಾರ ವಿ.ಬಿ. ಚಂದ್ರಶೇಖರ್ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಚಂದ್ರಶೇಖರ್ ಗುರುವಾರ ಸಂಜೆ ಸಾಲದ ಹೊರೆಯಿಂದ ನಗರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.