'1969 ರಲ್ಲಿನ ಇಮ್ರಾನ್ ಖಾನ್' ಎಂದು ಸಚಿನ್ ಫೋಟೋ ಶೇರ್ ಮಾಡಿದ ಪಾಕ್ ಪ್ರಧಾನಿ ಸಹಾಯಕ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ 1969 ರಲ್ಲಿನ ಫೋಟೋ ಎಂದು ಅವರ ವಿಶೇಷ ಸಹಾಯಕ ಸಚಿನ್ ತೆಂಡೂಲ್ಕರ್ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

Last Updated : Jun 23, 2019, 04:17 PM IST
'1969 ರಲ್ಲಿನ ಇಮ್ರಾನ್ ಖಾನ್' ಎಂದು ಸಚಿನ್ ಫೋಟೋ ಶೇರ್ ಮಾಡಿದ ಪಾಕ್ ಪ್ರಧಾನಿ ಸಹಾಯಕ  title=
Photo courtesy: Twitter

ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ 1969 ರಲ್ಲಿನ ಫೋಟೋ ಎಂದು ಅವರ ವಿಶೇಷ ಸಹಾಯಕ ಸಚಿನ್ ತೆಂಡೂಲ್ಕರ್ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕರಾಗಿರುವ ನಯಿಮ್ ಉಲ್ ಹಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ " ಪ್ರಧಾನಿ ಇಮ್ರಾನ್ ಖಾನ್ 1969 ರಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.ಈಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಹಲವರು ಇದನ್ನು ಟ್ರೋಲ್ ಮಾಡಿದ್ದಾರೆ. ಈ ಟ್ವೀಟ್ ಈಗ 2033 ಬಾರಿ ರೀ ಟ್ವೀಟ್ ಆಗಿದ್ದು ,14,053 ಲೈಕ್ಸ್ ಗಳು ಈ ಪೋಸ್ಟ್ ಗೆ ಬಂದಿವೆ.

ಒಬ್ಬ ಟ್ವಿಟ್ಟರ್ ಬಳಕೆದಾರ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅನ್ವರ್ ಎಂದು ಹೇಳಿದ್ದಾರೆ.ಇನ್ನೊಬ್ಬ ಬಳಕೆದಾರರು ನಿರಾಶೆಗೊಂಡ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಯ ವೈರಲ್ ಫೋಟೋವನ್ನು ಪೋಸ್ಟ್ ಮಾಡಿ, ಇದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಬಾಲಿವುಡ್  ಸಲ್ಮಾನ್ ಖಾನ್ ಅವರ ಫೋಟೋವನ್ನು ಹಾಕಿ, ಇದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಎಂದು ಹೇಳಿದ್ದಾರೆ.

 

 

Trending News