)
IND vs PAK Asia Cup 2025: ಭಾನುವಾರ ನಡೆದ ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯದ ವೇಳೆ ಪಾಕಿಸ್ತಾನಿ ಆಟಗಾರರ ವರ್ತನೆಗಳು ಅವರ ನಾಚಿಗೇಡಿನ ಬುದ್ಧಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿವೆ. ಅಂತಹ ಕಿರಾತಕ ಆಟಗಾರರಲ್ಲಿ ಹ್ಯಾರಿಸ್ ರೌಫ್ ಕೂಡ ಒಬ್ಬ. ತನ್ನೆಲ್ಲಾ ಮಿತಿಗಳನ್ನು ಮೀರಿದ್ದ ಆತನಿಗೆ ಇದೀಗ ಕಠಿಣ ಕ್ರಮದ ಭಯ ಎದುರಾಗಿದೆ.
ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು "ಕೊಹ್ಲಿ, ಕೊಹ್ಲಿ!" ಎಂದು ಘೋಷಣೆ ಕೂಗುತ್ತಿದ್ದಾಗ ರೌಫ್, ತನ್ನ ಕೈಗಳಿಂದ ಸನ್ನೆ ಮಾಡಿ, ನಂತರ ವಿಮಾನವನ್ನು ಹೊಡೆದುರುಳಿಸಿ, "6-0, 6-0" ಎಂದು ಸೂಚಿಸುವ ಸನ್ನೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರೌಫ್ ಅವರ ಕ್ರಮವನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.
6-0 ಎಂದರೇನು?
ಇದನ್ನು ಪಾಕಿಸ್ತಾನಿಯರ ಕನಸು ಅಥವಾ ಕಟ್ಟುಕಥೆ ಎಂದು ಕರೆದರೂ ತಪ್ಪಾಗಲ್ಲ. ಪಾಕಿಸ್ತಾನ ಸೇನೆಯು ಆಪರೇಷನ್ ಸಿಂಧೂರ್ ಸಮಯದಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ತನ್ನದೇ ಜನರಿಗೆ ಸುಳ್ಳು ಹೇಳಿಕೊಂದು ಸುತ್ತಾಡುತ್ತಿದೆ. ಆದರೆ ಪಾಕಿಸ್ತಾನ ಅಂತಹ ಕೆಲಸ ಮಾಡೇಇಲ್ಲ. ಇದರ ಜಿತೆಗೆ ಸಾಹಿಬ್ಜಾದಾ ಫರ್ಹಾನ್ ಗುಂಡು ಹಾರಿಸುವಂತೆ ಬ್ಯಾಟ್ನ್ನು ಪ್ರದರ್ಶಿಸಿ ಸಂಭ್ರಮಾಚರಣೆ ಮಾಡಿರುವುದು ಇದೀಗ ಕೆಂಗಣ್ಣಿಗೆ ಗುರಿಯಾಗಿದೆ.
ಹ್ಯಾರಿಸ್ ರೌಫ್ ಪಾಕಿಸ್ತಾನದ ಪರ ಅತ್ಯಂತ ಮಿತವ್ಯಯದ ಬೌಲರ್ ಆಗಿದ್ದು, ತನ್ನ 4 ಓವರ್ ಸ್ಪೆಲ್ನಲ್ಲಿ 26 ರನ್ಗಳಿಗೆ 2 ವಿಕೆಟ್ಗಳನ್ನು ಕಬಳಿಸಿದ್ದನು. ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಕೂಡ ಆತನ ಬೌಲಿಂಗ್ ಸಮಯದಲ್ಲಿ ಎದುರಿಸಿದ್ದರು.
ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಪಾಕಿಸ್ತಾನಿ ಆಟಗಾರರು "6-0" ಎಂದು ಕೂಗುವ ಮೂಲಕ ಭಾರತೀಯ ಪತ್ರಕರ್ತರನ್ನು ಕೀಟಲೆ ಮಾಡಲು ಪ್ರಯತ್ನಿಸುತ್ತಿದ್ದರು. ಆ ದಿನ ಮೊಹ್ಸಿನ್ ನಖ್ವಿ ಕೂಡ ಪಾಕಿಸ್ತಾನ ತಂಡವನ್ನು ಭೇಟಿಯಾಗಿದ್ದರು. ಇನ್ನು ಭಾರತ vs ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಹ್ಯಾರಿಸ್ ರೌಫ್ ಭಾರತೀಯ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದಲ್ಲದೆ, ವಿಮಾನ ಅಪಘಾತಕ್ಕೀಡಾಗಿದ್ದ ವಿಚಾರಕ್ಕೆ ಸಂಬಂಧಿಸಿ ಕೈಗಳಿಂದ ಸನ್ನೆ ಮಾಡುತ್ತಿದ್ದದ್ದು ಕೂಡ ಕಂಡುಬಂದಿತ್ತು. ಈ ವಿಚಾರ ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಂತಹ ದುರ್ಘಟನೆಯನ್ನು ಅಣಕಿಸಿದ ಕಾರಣಕ್ಕೆ ರೌಫ್ ವಿರುದ್ಧ ಭಾರೀ ವಿರೋಧ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ, ಆತನನ್ನು ಪಂದ್ಯಗಳಿಂದ ಬ್ಯಾನ್ ಮಾಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಭಾರತಕ್ಕೆ ಭರ್ಜರಿ ಜಯ:
ಹ್ಯಾರಿಸ್ ರೌಫ್, ಸಾಹಿಬ್ಜಾದಾ ಫರ್ಹಾನ್ ಮತ್ತು ಇತರ ಪಾಕಿಸ್ತಾನಿ ಆಟಗಾರರು ಈ ಆಟಗಳ ಮೇಲೆ ಮಾತ್ರ ಗಮನಹರಿಸಿದ್ದರು. ಭಾರತೀಯ ಆಟಗಾರರು ಪಂದ್ಯವನ್ನು ಗೆದ್ದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 171 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಪಾಕಿಸ್ತಾನಿ ಬೌಲರ್ಗಳನ್ನು ಸೋಲಿಸಿದರು. ಅಭಿಷೇಕ್ 74 ಮತ್ತು ಗಿಲ್ 47 ರನ್ ಗಳಿಸಿ ಮೊದಲ ವಿಕೆಟ್ಗೆ 105 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಈ ಗೆಲುವಿನೊಂದಿಗೆ, ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ 2025 ಸೂಪರ್ 4 ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ ಮತ್ತು ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.
Indians chanting KOHLI KOHLI after seeing Haris Rauf ???#INDvPAK #AsiaCup2025 pic.twitter.com/zL7cRbopQM
— Vinesh Prabhu (@vlp1994) September 21, 2025
Idiot of Haris Rauf to be posturing 6-0 on the field to Indian fans, that only looks good when you’re winning not when you’re getting smashed, stop embarrassing yourself & rest of the country
— Osama. (@ashaqeens) September 21, 2025