ಭಾರತಕ್ಕೆ ಏಷ್ಯಾಕಪ್‌ ನೀಡದ ಸಚಿವ ಮೊಹ್ಸಿನ್‌ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

ಏಷ್ಯಾಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ನಂತರ ನಖ್ವಿ ಏಷ್ಯಾಕಪ್ ಟ್ರೋಫಿಯನ್ನ ವಿಜೇತರ ಪದಕಗಳ ಜೊತೆಗೆ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗಿದ್ದ.

Written by - Puttaraj K Alur | Last Updated : Oct 5, 2025, 12:00 PM IST
  • ಭಾರತಕ್ಕೆ ಏಷ್ಯಾಕಪ್‌ ನೀಡದ ಮೊಹ್ಸಿನ್‌ ನಖ್ವಿಗೆ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ
  • ಏಷ್ಯಾಕಪ್‌ ಫೈನಲ್‌ ಬಳಿಕ ಹೋಟೆಲ್‌ಗೆ ಟ್ರೋಫಿ ಎತ್ತಿಕೊಂಡು ಹೋಗಿದ್ದ ಪಾಕಿಸ್ತಾನದ ಸಚಿವ
  • ಏಷ್ಯಾಕಪ್‌ ಟ್ರೋಫಿ ಬೇಕಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ನನ್ನ ಆಫೀಸ್‌ಗೆ ಬರುವಂತೆ ಹೇಳಿದ್ದ ನಖ್ವಿ
ಭಾರತಕ್ಕೆ ಏಷ್ಯಾಕಪ್‌ ನೀಡದ ಸಚಿವ ಮೊಹ್ಸಿನ್‌ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

Asia Cup 2025: ಭಾರತಕ್ಕೆ ಏಷ್ಯಾಕಪ್‌ ನೀಡದ ಸಚಿವ ಮೊಹ್ಸಿನ್‌ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧರಿಸಲಾಗಿದೆ. ಹೌದು, ಪಾಕಿಸ್ತಾನದ ವಿರುದ್ಧ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ಲೀಗ್‌, ಸೂಪರ್‌ 4 ಮತ್ತು ಫೈನಲ್‌ನಲ್ಲಿ ಪಾಕ್‌ಗೆ ಮಣ್ಣುಮುಕ್ಕಿಸುವ ಮೂಲಕ ಏಷ್ಯಾಕಪ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಮೈದಾನದಲ್ಲಿ ನೋ ಶೇಕ್‌ಹ್ಯಾಂಡ್‌ ನೀತಿ ಅನುಸರಿಸಿದ್ದ ಭಾರತ ತಂಡದ ಆಟಗಾರರು ಫೈನಲ್‌ ಗೆದ್ದ ಬಳಿಕ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್‌ ನಖ್ವಿ ಕೈಯಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು.

Add Zee News as a Preferred Source

ಏಷ್ಯಾಕಪ್‌ ಇಲ್ಲದೆಯೇ ಟೀಂ ಇಂಡಿಯಾದ ಆಟಗಾರರು ಸಂಭ್ರಮಿಸಿದ್ದರು. ಭಾರತ ತಂಡಕ್ಕೆ ಏಷ್ಯಾಕಪ್‌ ಟ್ರೋಫಿ ನೀಡಲು ಮೊಹ್ಸಿನ್‌ ನಖ್ವಿ ಕಾದು ಕಾದು ಸುಸ್ತಾಗಿದ್ದ. ಕೊನೆಗೆ ಆ ಟ್ರೋಫಿಯನ್ನ ತಮ್ಮ ಬಳಿಯೆ ಇಟ್ಟುಕೊಂಡು ಹೋಗಿದ್ದ. ಏಷ್ಯಾಕಪ್‌ ಟ್ರೋಫಿ ನೀಡುವಂತೆ BCCI ನಖ್ವಿಗೆ ಮನವಿ ಮಾಡಿತ್ತು. ʼನಿಮಗೆ ಏಷ್ಯಾಕಪ್‌ ಟ್ರೋಫಿ ಬೇಕಾದರೆ ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್‌ ಯದವ್ ನನ್ನ ACC ಆಫೀಸ್‌ಗೆ ಬಂದು ತೆಗೆದುಕೊಂಡು ಹೋಗಲಿʼ ಎಂದು ನಖ್ವಿ ಹೇಳಿದ್ದ. 

ಇದನ್ನೂ ಓದಿ: 'ಕಾಂತಾರ'ದ ಮುಂದೆ ಮಕಾಡೆ ಮಲಗಿದ ವರುಣ್ ಮತ್ತು ಜಾನ್ವಿ ಸಿನಿಮಾ.! ರಿಲೀಸ್‌ ಆಗಿ 3 ದಿನ ಆದ್ರೂ ಗಳಿಸಿದ್ದು ಕೇವಲ ಇಷ್ಟೇನಾ.?

ಇದೀಗ ಟೀಂ ಇಂಡಿಯಾಗೆ ಏಷ್ಯಾಕಪ್‌ ನೀಡದ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿಯನ್ನ ಗೌರವಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದ ನಂತರ ನಖ್ವಿಯ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ, ಆತನನ್ನ ಪಾಕಿಸ್ತಾನದಲ್ಲಿ ಸನ್ಮಾನಿಸಲಾಗುತ್ತಿದೆ. ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ ಯೋಜಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲಿ ನಖ್ವಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿಯನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಯಾವಾಗ ಕಾರ್ಯಕ್ರಮ? 

ಏಷ್ಯಾಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ನಂತರ ನಖ್ವಿ ಏಷ್ಯಾಕಪ್ ಟ್ರೋಫಿಯನ್ನ ವಿಜೇತರ ಪದಕಗಳ ಜೊತೆಗೆ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗಿದ್ದ. ವ್ಯಾಪಕ ಟೀಕೆ ಬಳಿಕ ಟ್ರೋಫಿ ಮತ್ತು ಪದಕಗಳನ್ನ UAE ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲಾಗಿದೆ. ಆದರೆ ಅವುಗಳನ್ನ ಯಾವಾಗ ಮತ್ತು ಹೇಗೆ ಭಾರತಕ್ಕೆ ತಲುಪಿಸಲಾಗುತ್ತದೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಅನ್ಯಧರ್ಮದ ಕಾರಣದಿಂದ ಗಂಡನ ಮನೆಯಲ್ಲಿ ಸ್ಥಾನ ಪಡೆಯದ ವಿಶ್ವಸುಂದರಿ ಈ ನಟಿ! ದುರಾದೃಷ್ಟದಿಂದ ಮರೆಯಾದ ನಿಜ ಪ್ರತಿಭೆಗೆ ಕಾಡುತ್ತಿದೆ ಕ್ಯಾನ್ಸರ್‌ ಖಾಯಿಲೆ

ಕ್ರಿಕೆಟ್ ವಲಯದಲ್ಲಿ ನಖ್ವಿಯ ನಡೆಯನ್ನ ಖಂಡಿಸಿದ್ದರೂ, ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಇಂತಹ ನಿಲುವು ತೆಗೆದುಕೊಂಡಿದ್ದಕ್ಕೆ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ ಯೋಜಿಸಲಾಗಿದ್ದು, ಅಲ್ಲಿ ನಖ್ವಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ವರದಿಯಾಗಿದೆ. ಈ ಕಾರ್ಯಕ್ರಮದ ದಿನಾಂಕವನ್ನ ಇನ್ನೂ ಅಂತಿಮಗೊಳಿಸಲಾಗಿಲ್ಲ. ನಖ್ವಿಯನ್ನ ಸನ್ಮಾನಿಸಲಾಗುವುದು ಎಂದು ಸಿಂಧ್ ಮತ್ತು ಕರಾಚಿ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗಳ ಅಧ್ಯಕ್ಷ ವಕೀಲ ಗುಲಾಮ್ ಅಬ್ಬಾಸ್ ಜಮಾಲ್ ಘೋಷಿಸಿದ್ದಾನೆ. ಭಾರತದೊಂದಿಗೆ ರಾಜಕೀಯ ಮತ್ತು ಕ್ರೀಡಾ ಬಿಕ್ಕಟ್ಟಿನ ಸಮಯದಲ್ಲಿ ನಖ್ವಿಯ ಕ್ರಮಗಳು ರಾಷ್ಟ್ರೀಯ ಹೆಮ್ಮೆಯನ್ನ ಪುನಃಸ್ಥಾಪಿಸಿವೆ ಎಂದು ಜಮಾಲ್ ಹೇಳಿದ್ದಾನೆ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News