PBKS vs RCB Final: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ 2025ರ ಅಂತಿಮ ಪಂದ್ಯವು ಜೂನ್ 3ರ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಅಭಿಮಾನಿಗಳು ಹೊಸ ಚಾಂಪಿಯನ್ ತಂಡವನ್ನು ನೋಡಲಿದ್ದಾರೆ. ಮಳೆ ಅಡ್ಡಿಯಿಂದ ತಡವಾಗಿ ಆರಂಭವಾಗಿದ್ದ ಕ್ವಾಲಿಫೈಯರ್ -2ರಲ್ಲಿ ಮುಂಬೈ ಇಂಡಿಯನ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂಜಾಬ್ ಕಿಂಗ್ಸ್ ಫೈನಲ್‌ಗೆ ತಲುಪಿತು. ಈ ಪಂದ್ಯವು ಸುಮಾರು ಎರಡು ಗಂಟೆ 15 ನಿಮಿಷಗಳ ವಿಳಂಬದೊಂದಿಗೆ ಪ್ರಾರಂಭವಾಯಿತು. ಈ ಕಾರಣಕ್ಕೆ ಇದೀಗ ಅಭಿಮಾನಿಗಳು ಫೈನಲ್ ಬಗ್ಗೆ ಹವಾಮಾನದ ಬಗ್ಗೆಯೂ ಚಿಂತಿಸಲು ಪ್ರಾರಂಭಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಹವಾಮಾನ ಹದಗೆಡುತ್ತದೆಯೇ?
ಕ್ವಾಲಿಫೈಯರ್ -2ರಂತೆಯೇ ಐಪಿಎಲ್‌ನ ಫೈನಲ್ ಪಂದ್ಯವೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಜೂನ್ 3ರಂದು ಅಲ್ಲಿನ ಹವಾಮಾನ ಹೇಗಿರುತ್ತದೆ? ಮಳೆಯು ಪ್ರಶಸ್ತಿ ಪಂದ್ಯದ ಮೋಜನ್ನು ಹಾಳು ಮಾಡುತ್ತದೆಯೇ ಅಂತಾ ಅಭಿಮಾನಿಗಳು ಟೆನ್ಶನ್ ಆಗಿದ್ದಾರೆ. ಉಭಯ ತಂಡಗಳ ಅಭಿಮಾನಿಗಳ ಕಣ್ಣುಗಳು ಈಗ ಅಹಮದಾಬಾದ್‌ನ ಆಕಾಶದ ಮೇಲೆ ನೆಟ್ಟಿವೆ. ಐಪಿಎಲ್ ಫೈನಲ್‌ನಲ್ಲಿ ಹವಾಮಾನ ಸ್ಥಿತಿ ಹೇಗಿರುತ್ತದೆ ಎಂದು ತಿಳಿಯಿರಿ....
ಬೆಳಗಿನ ಹವಾಮಾನ
ಅಹಮದಾಬಾದ್‌ನಲ್ಲಿ ಬೆಳಗ್ಗೆ ಹಾಟ್ ಮತ್ತು ಮೋಡ ಕವಿದ ವಾತಾವರಣವಿರುತ್ತದೆ. ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಳೆಯಾಗುವ ಸಾಧ್ಯತೆ 62% ಇದೆ. ಮಧ್ಯಾಹ್ನದ ವೇಳೆಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಸುಮಾರು 1.1 ಮಿ.ಮೀ. ನೀರು ಬೀಳುವ ನಿರೀಕ್ಷೆಯಿದೆ.
ಮಧ್ಯಾಹ್ನದ ಹವಾಮಾನ
ಮಧ್ಯಾಹ್ನದ ವೇಳೆ ಹವಾಮಾನವು ಬಿಸಿಯಾಗಿರುತ್ತದೆ ಮತ್ತು ಸ್ವಲ್ಪ ಆರ್ದ್ರತೆಯಿಂದ ಕೂಡಿರುತ್ತದೆ. ತಾಪಮಾನವು 38 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಆಕಾಶದಲ್ಲಿ ಸ್ವಲ್ಪ ಬಿಸಿಲು ಇರಬಹುದು, ಆದರೆ ಕೆಲವು ಸ್ಥಳಗಳಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಶೇ.62ರಷ್ಟು ಇದ್ದು, ಸುಮಾರು 1.1 ಮಿಮೀ ನೀರು ಬೀಳುತ್ತದೆ. ಅಂದರೆ ತುಂತುರು ಮಳೆಯಾಗಬಹುದು.
ಸಂಜೆಯ ಹವಾಮಾನ
ಅಹಮದಾಬಾದ್‌ನಲ್ಲಿ ಸಂಜೆ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆಕಾಶವು ಮೋಡ ಕವಿದಿರುತ್ತದೆ ಮತ್ತು ಹಗುರ ಮಳೆಯಾಗುವ ಸಾಧ್ಯತೆಯಿದೆ. ಸಂಜೆ ಮಳೆಯಾಗುವ ಸಾಧ್ಯತೆ ಕೇವಲ 5% ಮಾತ್ರ. ಹೀಗಾಗಿ ಪಂದ್ಯವು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವ ಭರವಸೆಯಿದೆ.
ಇದನ್ನೂ ಓದಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಹೊಸ ಗರ್ಲ್‌ಫ್ರೆಂಡ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿಖರ್ ಧವನ್
ಉಭಯ ತಂಡಗಳ ಸ್ಕ್ವಾಡ್ ಈ ರೀತಿ ಇದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಸ್ವಸ್ತಿಕ್ ಚಿಕಾರಾ, ಜಿತೇಶ್ ಶರ್ಮಾ, ಫಿಲ್ ಸಾಲ್ಟ್, ಮನೋಜ್ ಭಾಂಡಗೆ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ದಾರ್ ಸಲಾಂ, ಸುಯಾಶ್ ಶರ್ಮಾ, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಮಯಾಂಕ್ ಅಗರ್ವಾಲ್, ಬ್ಲೆಸಿಂಗ್ ಮುಜರಾಬಾನಿ, ಟಿಮ್ ಸೀಫರ್ಟ್.
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಹರ್ನೂರ್ ಸಿಂಗ್, ಮುಶೀರ್ ಖಾನ್, ಪಯ್ಲಾ ಅವಿನಾಶ್, ಪ್ರಭ್‌ಸಿಮ್ರಾನ್ ಸಿಂಗ್, ವಿಷ್ಣು ವಿನೋದ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋನಿಸ್, ಪ್ರವೀಣ್ ದುಬೆ, ಪ್ರಿಯಾಂಶ್ ಆರ್ಯ, ಅಜ್ಮತುಲ್ಲಾ ಉಮರ್ಜಾಯ್, ಆರನ್ ಹಾರ್ಡಿ, ಹರ್‌ಪ್ರೀತ್ ಬ್ರಾರ್, ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್, ಕುಲದೀಪ್ ಸೇನ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಿಚೆಲ್ ಓವನ್, ಕೈಲ್ ಜೇಮಿಸನ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









