ಪಂಜಾಬ್‌ ಆಟಗಾರರಿಗೆ ಅದನ್ನು ಮಾಡಿಯೇ ಸುಸ್ತಾಗೋಯ್ತು...! ತಂಡದ ಮಾಲಕಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಹೇಳಿಕೆ ವಿಡಿಯೋ ವೈರಲ್‌

preity zinta made 120 aloo paratha: ಪಂಜಾಬ್‌ ಆಟಗಾರರ ಬೇಡಿಕೆಯಂತೆ ೧೨೦ ಪರಾಠ ತಯಾರಿಸಿ ಸುಸ್ತಾಗಿದ್ದ ಬಗ್ಗೆ ಪ್ರೀತಿ ಜಿಂಟಾ ಹೇಳಿಕೆ ನೀಡಿದ್ದಾರೆ  

Written by - Bhavishya Shetty | Last Updated : Jun 5, 2025, 03:46 PM IST
    • ಆರ್‌ಸಿಬಿ ವಿರುದ್ಧ ಸೋಲುಂಡ ಪಂಜಾಬ್ ಕಿಂಗ್ಸ್ ತಂಡ
    • ತಂಡದ ಮಾಲಕಿ ನಟಿ ಪ್ರೀತಿ ಜಿಂಟಾ ನೀಡಿರುವ ಹೇಳಿಕೆ
    • ತಮ್ಮ ಕೈಯಾರೆ ಪರಾಠಾ ತಯಾರಿಸಿ ಎಲ್ಲರಿಗೂ ನೀಡುವುದಾಗಿ ಹೇಳಿದ್ದರಂತೆ
ಪಂಜಾಬ್‌ ಆಟಗಾರರಿಗೆ ಅದನ್ನು ಮಾಡಿಯೇ ಸುಸ್ತಾಗೋಯ್ತು...! ತಂಡದ ಮಾಲಕಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಹೇಳಿಕೆ ವಿಡಿಯೋ ವೈರಲ್‌

preity zinta made 120 aloo paratha: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೊನೆ ಕ್ಷಣದಲ್ಲಿ ಸೋಲುಂಡು ೧೮ ವರ್ಷಗಳ ಕನಸನ್ನು ಹಾಗೆಯೇ ಉಳಿಸಿಕೊಂಡಿದೆ. ಆರ್‌ಸಿಬಿ ವಿರುದ್ಧ ಸೋಲುಂಡ ತಂಡ, ರನ್ನರ್‌ ಅಪ್‌ ಆಗಿ ಸೀಸನ್‌ನ್ನು ಪೂರ್ತಿಗೊಳಿಸಿದೆ. ಇನ್ನು ಈ ಸಂದರ್ಭದಲ್ಲಿ ತಂಡದ ಮಾಲಕಿ ನಟಿ ಪ್ರೀತಿ ಜಿಂಟಾ ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Add Zee News as a Preferred Source

ಇದನ್ನೂ ಓದಿ:  ದಿನದ ಈ ಹೊತ್ತಲ್ಲಿ ಇದೊಂದು ತರಕಾರಿ ತಿನ್ನುವ ಮೂಲಕ ಕೇವಲ 3 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡ ಮಹಿಳೆ!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ತಂಡ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದೆ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಗೆಲುವಿನ ನಂತರ, ತಂಡದ ಒಡತಿ ಪ್ರೀತಿ ಜಿಂಟಾ ಅವರ ವೀಡಿಯೊ ಹೊರಬಂದಿದೆ. ಇದರಲ್ಲಿ, ಅವರು ಒಮ್ಮೆ ಹೋಟೆಲ್‌ನಲ್ಲಿ ತಂಡದ ಕೆಲವು ಆಟಗಾರರೊಂದಿಗೆ ಊಟ ಮಾಡಲು ಹೋಗಿದ್ದರು. ಅಲ್ಲಿ ಆಲೂ ಪರಾಠಾ ತಿಂದು ಕೆಟ್ಟ ಅನುಭವ ಪಡೆದಿದ್ದರು. ಹೀಗಾಗಿ, ತಂಡವು ಉತ್ತಮ ಗೆಲುವು ಸಾಧಿಸಿದರೆ, ತಮ್ಮ ಕೈಯಾರೆ ಪರಾಠಾ ತಯಾರಿಸಿ ಎಲ್ಲರಿಗೂ ನೀಡುವುದಾಗಿ ಹೇಳಿದ್ದರಂತೆ

ಅಂತೆಯೇ ಕೋಲ್ಕತ್ತಾ ವಿರುದ್ಧ ಪಂಜಾಬ್‌ ಸ್ಮರಣೀಯ ಗೆಲುವು ದಾಖಲಿಸಿತ್ತು. ಈ ಬಳಿಕ ವಿಡಿಯೋವೊಂದು ಹೊರಬಂದಿದ್ದು, ಅದರಲ್ಲಿ ಪ್ರೀತಿ ಮಾತನಾಡುತ್ತಿದ್ದಾರೆ. "ಒಮ್ಮೆ ಐಪಿಎಲ್ ಸಮಯದಲ್ಲಿ ನಾನು ಆಲೂ ಪರಾಠಾ ತಿನ್ನಲು ಬಯಸಿದ್ದೆ. ಹೋಟೆಲ್‌ನಲ್ಲಿ ನಮಗೆ ತುಂಬಾ ಬೇಸರವಾಗಿತ್ತು. ಏಕೆಂದರೆ ಅವರು ತುಂಬಾ ತಣ್ಣಗಾಗಿದ್ದ ಆಹಾರ ನೀಡಿದ್ದರು. ಆಗ ಅಲ್ಲಿದ್ದ ಆಟಗಾರರು ಮತ್ತೊಮ್ಮೆ ನೀವು ನಮಗಾಗಿ ಪರಾಠಾ ಮಾಡುತ್ತೀರಾ ಎಂದು ನನ್ನನ್ನು ಕೇಳಿದರು. ನಾನು ಸರಿ ಎಂದು ಹೇಳಿದೆ, ಆದರೆ ಇದಕ್ಕಾಗಿ ನೀವೆಲ್ಲರೂ ತಂಡಕ್ಕೆ ಸ್ಮರಣೀಯ ಗೆಲುವು ನೀಡಬೇಕು ಎಂದು ಷರತ್ತು ಹಾಕಿದ್ದೆ".

ಇದನ್ನೂ ಓದಿ:  ಈ ಸ್ಟಾರ್‌ ನಟಿ ಕಮಲ್‌ ಹಾಸನ್‌ರನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ್ದರಂತೆ; ಆದ್ರೆ ಮದುವೆ ಆಗಿದಿರಲು ಕಾರಣವೇನು?

“ಇದರ ನಂತರ ತಂಡವು ಒಂದು ದೊಡ್ಡ ಗೆಲುವು ಸಾಧಿಸಿತು. ನಂತರ ನಾನು ಸರಿ ಎಂದು ಹೇಳಿ, ಎಲ್ಲರಿಗೂ ಪರಾಠಾ ತಯಾರಿಸಿದೆ. ನಾನು ತಯಾರಿಸಿದಂತೇ ಅವರು ತಿನ್ನುತ್ತಲೇ ಇದ್ದರು, ೧೨೦ ಪರಾಠ ತಯಾರಿಸಿದ್ದೆ, ನನಗೆ ಅದನ್ನು ಮಾಡಿಯೇ ಸುಸ್ತಾಗಿ ಹೋಯ್ತು. ಅಂದಿನಿಂದ ಇಲ್ಲಿಯವರೆಗೆ ಪರಾಠ ಮಾಡಿಲ್ಲ ನಾನು" ಎಂದಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News