Rohit Sharma Video: ರೋಹಿತ್‌ ಶರ್ಮಾಗೆ ಪಾಕಿಸ್ತಾನದವರಿಂದ ಅವಮಾನ! ಕೆರಳಿ ಕೆಂಡವಾದ ಟೀಂ ಇಂಡಿಯಾ ಅಭಿಮಾನಿಗಳು

Rohit Sharma Video: ಪಾಕಿಸ್ತಾನ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಅವಮಾನಿಸಿದೆ. ಅವರನ್ನು ಅನುಕರಿಸುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿ ಟೀಂ ಇಂಡಿಯಾ ಅಭಿಮಾನಿಗಳು ಕೆಂಡಾ ಮಂಡಲವಾಗುವಂತೆ ಮಾಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ಮುಂದೆ ಓದಿ...  

Written by - Zee Kannada News Desk | Last Updated : Mar 22, 2025, 10:58 AM IST
  • ಪಾಕಿಸ್ತಾನ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಅವಮಾನಿಸಿದೆ.
  • ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ರೋಹಿತ್ ಶರ್ಮಾ ಅವರ ಧ್ವನಿಮುದ್ರಿಕೆಯೊಂದಿಗೆ ವೀಡಿಯೊವನ್ನು ಬಿಡುಗಡೆ ಮಾಡಿದೆ.
  • ವಿಡಿಯೋ ನೋಡಿದ ನಂತರ ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರವಾಗಿ ಕೋಪಗೊಂಡಿದ್ದಾರೆ.
Rohit Sharma Video: ರೋಹಿತ್‌ ಶರ್ಮಾಗೆ ಪಾಕಿಸ್ತಾನದವರಿಂದ ಅವಮಾನ! ಕೆರಳಿ ಕೆಂಡವಾದ ಟೀಂ ಇಂಡಿಯಾ ಅಭಿಮಾನಿಗಳು

Rohit Sharma Video: ಪಾಕಿಸ್ತಾನ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಅವಮಾನಿಸಿದೆ. ಅವರನ್ನು ಅನುಕರಿಸುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿ ಟೀಂ ಇಂಡಿಯಾ ಅಭಿಮಾನಿಗಳು ಕೆಂಡಾ ಮಂಡಲವಾಗುವಂತೆ ಮಾಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ಮುಂದೆ ಓದಿ...

ಐಪಿಎಲ್ ಗೆ ಟಾಂಗ್‌ ಕೊಡಲು ಪಾಕಿಸ್ತಾನ  ಪಿಎಸ್ಎಲ್ ಅನ್ನು ಆಯೋಜಿಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈ ಸೀಸನ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ, ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ರೋಹಿತ್ ಶರ್ಮಾ ಅವರ ಧ್ವನಿಮುದ್ರಿಕೆಯೊಂದಿಗೆ ವೀಡಿಯೊವನ್ನು ಬಿಡುಗಡೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಮಾಡಿದ ಹೇಳಿಕೆಗಳನ್ನು ಇತ್ತೀಚಿನ ಮ್ಯಾಸ್ಕಾಟ್ ವೀಡಿಯೊದ ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ. ಈ ವಿಡಿಯೋ ಈಗ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ವಿಡಿಯೋ ನೋಡಿದ ನಂತರ ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರವಾಗಿ ಕೋಪಗೊಂಡಿದ್ದಾರೆ.

ಈ ಮುಂಚೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಇಂಗ್ಲಿಷ್ ಮಾತನಾಡುವ ರೀತಿಯನ್ನು ಅನುಕರಿಸಿ ಅವರನ್ನು ಹೀಯಾಳಿಸಿದ್ದರು. "ನೀವು ನಿಮ್ಮ ನಾಯಕನನ್ನು ಈ ರೀತಿ ಅವಮಾನಿಸುತ್ತೀರಾ?"  ಎಂದು ಪಾಕಿಸ್ತಾನಿ ಅಭಿಮಾನಿಗಳು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದರು. ಆದರೆ ಈಗ, ಇನ್ನೊಂದು ತಂಡದ ನಾಯಕನನ್ನು ಅವಮಾನಿಸಿ, ಪಾಕಿಸ್ತಾನ ಮೌನವಾಗಿರುವುದನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದು ತುಂಬಾ ನಾಚಿಕೆಗೇಡಿನ ಕೃತ್ಯ. ಯಶಸ್ವಿ ನಾಯಕನ ದೇಹವನ್ನು ಅವಮಾನಿಸುವುದು ಸೂಕ್ತವಲ್ಲ ಎಂಬ ಕಾಮೆಂಟ್‌ಗಳು ಬರುತ್ತಿವೆ. ಅವರು ವೀಡಿಯೊವನ್ನು ಕೂಡಲೇ ತೆಗೆದು ಹಾಕಬೇಕು, ಪಾಕಿಸ್ತಾನದವರು ರೋಹಿತ್‌ ಶರ್ಮಾ ಅವರ ಬಳಿ ಕ್ಷಮೆ ಕೇಳಬೇಕು ಎಂಬ ಕೂಗು ಸದ್ಯ ಸಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
 

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News