ಆರ್ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟಿರುವ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗನೊಬ್ಬ ಮಾರ್ಗ ಮಧ್ಯೆಯೇ ರೈಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ಕ್ರಿಕೆಟ್ ಜಗತ್ತಿಗೆ ಅತ್ಯಂತ ಕೆಟ್ಟ ದಿನ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಮತ್ತೊಂದೆಡೆ ಮಥುರಾ ಜಂಕ್ಷನ್ ನಲ್ಲಿ ಪಂಜಾಬ್ ಕ್ರಿಕೆಟಿಗ ಪ್ರಾಣ ಕಳೆದುಕೊಂಡಿದ್ದಾರೆ. ಲುಧಿಯಾನದಿಂದ ಗ್ವಾಲಿಯರ್ಗೆ ಪ್ರಯಾಣಿಸುತ್ತಿದ್ದ ಕ್ರಿಕೆಟಿಗ ಮಾರ್ಗ ಮಧ್ಯೆ ರೈಲಿನಲ್ಲಿಯೇ ಮೃತಪಟ್ಟಿದ್ದಾರೆ.
ಲುಧಿಯಾನದಿಂದ ಗ್ವಾಲಿಯರ್ಗೆ ತೆರಳುವಾಗ ಸಾವು :
ಛತ್ತೀಸ್ಗಢ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ 38 ವರ್ಷದ ದಿವ್ಯಾಂಗ್ ವೀಲ್ಚೇರ್ ಕ್ರಿಕೆಟಿಗ ವಿಕ್ರಮ್ ಸಿಂಗ್, ಮಥುರಾ ಜಂಕ್ಷನ್ ತಲುಪುವ ಮೊದಲೇ ಅಸು ನೀಗಿದ್ದಾರೆ. ಅವರು ಲೂಧಿಯಾನದಿಂದ ಗ್ವಾಲಿಯರ್ಗೆ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದರು. ವಿಕ್ರಮ್ ರೈಲಿನ ದಿವ್ಯಾಂಗ್ ಕೋಚ್ನಲ್ಲಿ (ವಿಕಲಚೇತನರಿಗೆ ಮೀಸಲಿಡಲಾಗಿರುವ ಬೋಗಿ ) ಪ್ರಯಾಣಿಸುತ್ತಿದ್ದರು. ಸಾಯುವ ಮೊದಲು ಅವರು ರೈಲ್ವೆ ಸಹಾಯವಾಣಿಯ ಮೂಲಕ ತಲೆನೋವು ಮತ್ತು ಅಸ್ವಸ್ಥತೆಯ ಬಗ್ಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ದೂರು ದಾಖಲಿಸಿದರೂ ಸಿಗದ ಸಹಾಯ :
ಬುಧವಾರ ಬೆಳಿಗ್ಗೆ 139 ಸಹಾಯವಾಣಿಗೆ ದೂರು ನೀಡಿ ಮೂರೂವರೆ ಗಂಟೆಗಳಾದರೂ ರೈಲ್ವೆ ಅಧಿಕಾರಿಗಳು ಯಾವುದೇ ಸಹಾಯವನ್ನು ನೀಡಲಿಲ್ಲ ಎಂದು ವಿಕ್ರಮ್ ಜೊತೆ ಪ್ರಯಾಣಿಸುತ್ತಿದ್ದ ಇತರ ಆಟಗಾರರು ಆರೋಪಿಸಿದ್ದಾರೆ. ಮಥುರಾದಲ್ಲಿ ವೈದ್ಯರ ವ್ಯವಸ್ಥೆ ಆಗಿತ್ತಾದರೂ ಅದಾಗಲೇ ವಿಕ್ರಮ್ ಪ್ರಾಣ ಕಳೆದುಕೊಂಡಿದ್ದರು.
ಗ್ವಾಲಿಯರ್ನಲ್ಲಿ ನಡೆಯಬೇಕಿತ್ತು ಪಂದ್ಯ :
ಪಂಜಾಬ್ ವೀಲ್ಚೇರ್ ಕ್ರಿಕೆಟ್ ತಂಡದ ಐವರು ಆಟಗಾರರು ಮಂಗಳವಾರ ತಡರಾತ್ರಿ ಲುಧಿಯಾನದಿಂದ ಛತ್ತೀಸ್ಗಢ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಗುರುವಾರ ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವರು ಗ್ವಾಲಿಯರ್ಗೆ ತೆರಳುತ್ತಿದ್ದರು. ಬುಧವಾರ ಬೆಳಿಗ್ಗೆ, ರೈಲು ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದ ಮೂಲಕ ಹಾದುಹೋದಾಗ, ವಿಕ್ರಮ್ ಸಿಂಗ್ ತಲೆನೋವು ಮತ್ತು ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಕ್ಷಣ ಅವರ ಸಹ ಆಟಗಾರರು ವೈದ್ಯಕೀಯ ಸಹಾಯಕ್ಕಾಗಿ 139 ಸಹಾಯವಾಣಿಗೆ ಕರೆ ಮಾಡಿದರು. ಆದರೆ ಮಾರ್ಗದಲ್ಲಿ ಸಿಗ್ನಲ್ ಕಾರಣ ರೈಲು ಅಲ್ಲಲ್ಲಿ ನಿಲ್ಲುತ್ತಿದ್ದು, ಮಥುರಾ ಜಂಕ್ಷನ್ ತಲುಪಲು ಮೂರುವರೆ ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.
ಮಾಹಿತಿ ನೀಡಿದ ರೈಲ್ವೆ :
ಮದದ್ ಪೋರ್ಟಲ್ನಲ್ಲಿ ದೂರು ನೀಡಲಾಗಿದ್ದು, ಮಥುರಾ ಜಂಕ್ಷನ್ನಲ್ಲಿ ವೈದ್ಯರನ್ನು ಕರೆಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ನಿಲ್ದಾಣ ತಲುಪುವ ಮೊದಲೇ ವಿಕ್ರಮ್ ಸಾವನ್ನಪ್ಪಿದ್ದರು. ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಸ್ತಿ ಶ್ರೀವಾಸ್ತವ ಮಾತನಾಡಿ, "24/7 ಕಾರ್ಯನಿರ್ವಹಿಸುವ ರೈಲ್ ಮದದ್ ಪೋರ್ಟಲ್ನಲ್ಲಿ ದೂರು ದಾಖಲಾಗಿದೆ. ಪ್ರಯಾಣಿಕರಿಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ