ʼಮುಖ ತೋರಿಸೋಕು ಲಾಯಕ್‌ ಇಲ್ಲದವನು ವಿರಾಟ್‌ ಕೊಹ್ಲಿ ʼ.. ಕಿಂಗ್‌ ಕುರಿತು ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಪ್ರೀತಿ ಜಿಂಟಾ! ಅಸಲಿಗೆ ಆಗಿದ್ದೇನು?

Preity zinta on Virat Kohli : ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕಿ, ನಟಿ ಪ್ರೀತಿ ಜಿಂಟಾ ಪ್ರಸ್ತುತ ವಿರಾಟ್‌ ಕೊಹ್ಲಿ ಹೆಸರನ್ನು ಬಳಸಿಕೊಂಡು ಬೈದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಅಲ್ಲದೆ, ಪ್ರೀತಿ ವಿರುದ್ಧ ಕಿಂಗ್‌ ಕೊಹ್ಲಿ ಫ್ಯಾನ್ಸ್‌ ಟಾಕ್‌ & ಕಾಮೆಂಟ್‌ ವಾರ್‌ ಶುರು ಮಾಡಿದ್ದಾರೆ.. ಅಸಲಿಗೆ ಆಗಿದ್ದಾರೂ ಏನು..? ಇಲ್ಲಿದೆ ವಿವರ..

Written by - Krishna N K | Last Updated : Feb 28, 2025, 08:21 PM IST
    • ನಟಿ ಪ್ರೀತಿ ಜಿಂಟಾ ಪ್ರಸ್ತುತ ವಿರಾಟ್‌ ಕೊಹ್ಲಿ ಹೆಸರನ್ನು ಬಳಸಿಕೊಂಡು ಬೈದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
    • ಪ್ರೀತಿ ವಿರುದ್ಧ ಕಿಂಗ್‌ ಕೊಹ್ಲಿ ಫ್ಯಾನ್ಸ್‌ ಟಾಕ್‌ & ಕಾಮೆಂಟ್‌ ವಾರ್‌ ಶುರು ಮಾಡಿದ್ದಾರೆ..
    • ಬಾಲಿವುಡ್ ನಟಿ ಮತ್ತು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕಿ ಪ್ರೀತಿ ಜಿಂಟಾ
ʼಮುಖ ತೋರಿಸೋಕು ಲಾಯಕ್‌ ಇಲ್ಲದವನು ವಿರಾಟ್‌ ಕೊಹ್ಲಿ ʼ.. ಕಿಂಗ್‌ ಕುರಿತು ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಪ್ರೀತಿ ಜಿಂಟಾ! ಅಸಲಿಗೆ ಆಗಿದ್ದೇನು?

Preity Zinta comment on Virat : ಬಾಲಿವುಡ್ ನಟಿ ಮತ್ತು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕಿ ಪ್ರೀತಿ ಜಿಂಟಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌, ಎಕ್ಸ್‌ ಖಾತೆ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ... ಪೋಸ್ಟ್‌ ಒಂದಕ್ಕೆ ಉತ್ತರಿಸುವಾಗ ಪ್ರೀತಿ ಜಿಂಟಾ ಸಮತೋಲನ ಕಳೆದುಕೊಂಡು ವಿವಾದಕ್ಕೆ ಕಾರಣವಾಗಿದ್ದಾರೆ.. 

Add Zee News as a Preferred Source

ಪ್ರೀತಿ ಜಿಂಟಾ ಪೋಸ್ಟ್‌ಗೆ ಉತ್ತರಿಸುವಾಗ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿದ್ದಾರೆ. ಪ್ರೀತಿ ಮತ್ತು ಸಂಬಂಧಗಳಿಂದ ತುಂಬಿರುವ ಜೀವನದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ.' ನನಗೆ ಭಾರತ ತುಂಬಾ ನೆನಪಾಗುತ್ತದೆ ಅಂತ ವಿದೇಶದಲ್ಲಿರುವ ನಟಿ ತಾಯ್ನಾಡನ್ನು ನೆನೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.. ಈ ಬಗ್ಗೆ ಒಬ್ಬ ಬಳಕೆದಾರರು ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದರು. ನಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡಿದರು.

ಇದನ್ನೂ ಓದಿ: ಕೋಟಿಗಟ್ಟಲೆ ಬೆಲೆಬಾಳುವ ಬಂಗಲೆಯನ್ನು ಬಾಡಿಗೆಗೆ ನೀಡಿದ ಹಿಟ್‌ಮ್ಯಾನ್ ! ಪ್ರತಿ ತಿಂಗಳು ಬರೀ ಬಾಡಿಗೆಯಿಂದ ರೋಹಿತ್ ಶರ್ಮಾ ಸಂಪಾದಿಸುವ ಮೊತ್ತ ಎಷ್ಟು ಗೊತ್ತಾ?

ಟ್ರೋಲ್‌ ಪೇಜ್‌ನ ಪ್ರೊಫೈಲ್‌ನಲ್ಲಿ ವಿರಾಟ್ ಕೊಹ್ಲಿಯ ಫೋಟೋ ಇತ್ತು. ಇದಕ್ಕೆ ಪ್ರೀತಿ ಜಿಂಟಾ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿ.. "ಮುಖ ತೋರಿಸಲು ಅರ್ಹನಲ್ಲದವನು ವಿರಾಟ್ ಕೊಹ್ಲಿ ಫೋಟೋ ಬಳಸುತ್ತಿದ್ದಾನೆ." ಇಂತಹವರಿಗೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟಿಗನ ಹೆಸರು ತೆಗೆದುಕೊಂಡ ನಂತರ ಅವರ ಆಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.

ಇನ್ನು ನಟಿ ಕಾಮೆಂಟ್‌ ಹಾಕುತ್ತಲೇ ಟ್ರೋಲ್‌ ಪೇಜ್‌ ಫೋಟೋವನ್ನು ಬದಲಾಯಿಸಿತು.. ಆದರೆ ಪ್ರೀತಿ ಜಿಂಟಾ ಅವರ ಹೇಳಿಕೆ ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ.. ಟ್ರೋಲ್‌ಗಳಿಗೆ ಉತ್ತರಿಸುವಾಗ ವಿರಾಟ್ ಕೊಹ್ಲಿ ಹೆಸರನ್ನೇಕೆ ಬಳಸಿದಿರಿ ಅಂತ ಪ್ರಶ್ನೆ ಕೇಳುತ್ತಿದ್ದಾರೆ.. ಅಲ್ಲದೆ, ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕು ಅಂತ ನೀತಿ ಪಾಠ ಹೇಳುತ್ತಿದ್ದಾರೆ.. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತೆ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News