ನ್ಯೂ ಚಂಡೀಗಡ: ನ್ಯೂ ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು 51 ರನ್‌ಗಳಿಂದ ಸೋಲಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.ಇದೆ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 213 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.ದಕ್ಷಿಣ ಆಫ್ರಿಕಾದ ಪರವಾಗಿ ಕ್ವಿಂಟನ್ ಡಿ ಕಾಕ್ 90 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಮೂಲಕ ಅವರು ಟೀಮ್ ಇಂಡಿಯಾದ ವಿರುದ್ಧ ಐದನೇ ಟಿ 20 ಅರ್ಧಶತಕವನ್ನು ಗಳಿಸಿದರು.ಡೊನೊವನ್ ಫೆರೇರಾ ಮತ್ತು ಡೇವಿಡ್ ಮಿಲ್ಲರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಚುರುಕಾದ ಇನ್ನಿಂಗ್ಸ್ ಆಡಿದರು.
A dominant display from the Proteas helped them level the T20I series against India 💪#INDvSA 📝: https://t.co/osh6nRSftJ pic.twitter.com/l1EZdwVi8B
— ICC (@ICC) December 11, 2025
ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಮ್ ಇಂಡಿಯಾ ಮೊದಲ ಓವರ್‌ನಿಂದಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಅಂತಿಮವಾಗಿ 19.1 ಓವರ್‌ಗಳಲ್ಲಿ ಕೇವಲ 162 ರನ್‌ಗಳಿಗೆ ಸರ್ವಪತನವನ್ನು ಖಂಡಿತು.ಟೀಮ್ ಇಂಡಿಯಾದ ಪರವಾಗಿ ತಿಲಕ್ ವರ್ಮಾ ಮಾತ್ರ 34 ಎಸೆತಗಳಲ್ಲಿ 62 ರನ್ ಗಳಿಸುವ ಮೂಲಕ ಭಾರತೀಯ ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿದ್ದರು.ಆದರೆ ಉಳಿದ ಯಾವ ಆಟಗಾರನು ಸಹಿತ ಅವರಿಗೆ ನಿರೀಕ್ಷಿತ ಸಾಥ್ ನೀಡದೆ ನಿರಾಸೆ ಮೂಡಿಸಿದರು.
ಇನ್ನೊಂದೆಡೆಗೆ ದಕ್ಷಿಣ ಆಫ್ರಿಕಾದ ಪರವಾಗಿ ಒಟ್ನಿಯಲ್ ಬಾರ್ಟ್‌ಮನ್ 4 ವಿಕೆಟ್‌ಗಳನ್ನು ಕಬಳಿಸಿಸುವ ಮೂಲಕ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲಬನ್ನು ಮುರಿದರು.ಭಾರತ ತನ್ನ ಕೊನೆಯ ಐದು ವಿಕೆಟ್‌ಗಳನ್ನು ಕೇವಲ ಒಂಬತ್ತು ರನ್‌ಗಳಿಗೆ ಕಳೆದುಕೊಂಡಿತು, ಇದರಿಂದ ಈಗ ಸರಣಿ 1-1 ರಿಂದ ಸಮಗೊಂಡಿದೆ. ಮುಂದಿನ ಪಂದ್ಯ ಡಿಸೆಂಬರ್ 14 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.
ನ್ಯೂ ಚಂಡೀಗಢದ ಮುಲ್ಲನ್‌ಪುರ ಪ್ರದೇಶದಲ್ಲಿ ನಿರ್ಮಿಸಲಾದ ಈ ನೂತನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡಗಳ ನಡುವೆ ಈ ಮೈದಾನದಲ್ಲಿ ಇದುವರೆಗೆ ಕೇವಲ ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಲಾಗಿದೆ. ಆದಾಗ್ಯೂ, ಕಳೆದ ಎರಡು ಐಪಿಎಲ್ ಋತುಗಳಲ್ಲಿ ಪಂಜಾಬ್ ಕಿಂಗ್ಸ್ ಇಲ್ಲಿ ತಮ್ಮ ಪಂದ್ಯಗಳನ್ನು ಆಡಿತ್ತು.









