R Devaraj Mother Death: ಟೀಂ ಇಂಡಿಯಾ ಸದ್ಯ ಚಾಂಪಿಯನ್ಸ್ ಟ್ರೋಫಿ ಆಡುತ್ತಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯ ಕಳೆದ ದಿನ ನಡೆದಿದೆ. ಈ ಪಂದ್ಯಾವಳಿಯ ಮಧ್ಯದಲ್ಲಿ, ಟೀಮ್ ಇಂಡಿಯಾದ ಪ್ರಮುಖ ಸದಸ್ಯರೊಬ್ಬರು ದುಬೈನಿಂದ ಭಾರತಕ್ಕೆ ದಿಢೀರ್ ಆಗಮಿಸಿದ್ದಾರೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕುಸಿಯುತ್ತಿದೆ ಚಿನ್ನ !ನವೆಂಬರ್ ನಂತರ ಇದೇ ಮೊದಲ ಬಾರಿಗೆ ಇಷ್ಟು ಕುಸಿತ ಕಂಡ ಬಂಗಾರ!
2025 ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಭಾರತೀಯ ತಂಡದ ವ್ಯವಸ್ಥಾಪಕ ಆರ್ ದೇವರಾಜ್ ಅವರ ತಾಯಿ ನಿಧನರಾಗಿದ್ದು, ದೇವರಾಜ್ ಪ್ರಸ್ತುತ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇವರಾಜ್ ಹೈದರಾಬಾದ್‌ಗೆ ಮರಳಿದ್ದು, ಆರ್ ದೇವರಾಜ್ ದುಬೈಗೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕ್ರಿಕ್‌ಬಜ್ ವರದಿಯ ಪ್ರಕಾರ, ಆರ್. ದೇವರಾಜ್ ದುಬೈಗೆ ಹಿಂತಿರುಗುತ್ತಾರೋ ಇಲ್ಲವೋ ಎಂಬ ಬಗ್ಗೆ ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಸಂತಾಪ ವ್ಯಕ್ತಪಡಿಸಿ ಹೇಳಿಕೆಯಲ್ಲಿ, 'ನಮ್ಮ ಕಾರ್ಯದರ್ಶಿ ದೇವರಾಜ್ ಅವರ ತಾಯಿ ಕಮಲೇಶ್ವರಿ ನಿಧನರಾಗಿದ್ದಾರೆ ಎಂದು ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರಾಜ್ ಮತ್ತು ಅವರ ಕುಟುಂಬಕ್ಕೆ ಸಂತಾಪಗಳು" ಎಂದು ತಿಳಿಸಿದೆ.
ಇದನ್ನೂ ಓದಿ: ಈ ವಸ್ತು ಹಾವುಗಳಿಗೆ ವಿಷಕ್ಕೆ ಸಮಾನ! ಇದರ ವಾಸನೆಗೆ ವಿಷ ಜಂತು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ
2025 ರ ಚಾಂಪಿಯನ್ಸ್ ಟ್ರೋಫಿಗೆ ಆರಂಭಕ್ಕೆ ಕೆಲ ದಿನಗಳ ಮೊದಲು, ಭಾರತೀಯ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರ ತಂದೆ ಕೂಡ ನಿಧನರಾಗಿದ್ದರು. ಈ ಕಾರಣದಿಂದ ಅವರು ದುಬೈನಿಂದ ದಕ್ಷಿಣ ಆಫ್ರಿಕಾಗೆ ಮರಳಬೇಕಾಯಿತು. ಆದರೂ, ಪಂದ್ಯಾವಳಿಯ ಮಧ್ಯದಲ್ಲಿ ಮೋರ್ನೆ ಮೋರ್ಕೆಲ್ ದುಬೈಗೆ ಮರಳಿದ್ದು, ಟೀಮ್ ಇಂಡಿಯಾವನ್ನು ಮತ್ತೆ ಸೇರಿಕೊಂಡರು. ಆದರೆ ತಂಡದ ವ್ಯವಸ್ಥಾಪಕ ಆರ್. ದೇವರಾಜ್ ಹಿಂತಿರುಗುತ್ತಾರೋ ಇಲ್ಲವೋ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









