ನವದೆಹಲಿ: ಆರ್ .ವಿನಯ್ ಕುಮಾರ್ ಹಾಗೂ ಯೂಸುಫ್ ಪಠಾಣ್ ಅವರು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ನಿವೃತ್ತಿ ಘೋಷಿಸಿ ಟ್ವೀಟ್ ಮಾಡಿರುವ ವಿನಯ್ ಕುಮಾರ್ 'ನನ್ನ ಕರಿಯರ್ ಉದ್ದಕ್ಕೂ ಪ್ರೀತಿ ಮತ್ತು ಬೆಂಬಲ ನೀಡಿದ ವ್ಯಕ್ತಪಡಿಸಿದ ತಮಗೆ ಧನ್ಯವಾದಗಳು.ಇಂದು ನಾನು ನನ್ನ ಬೂಟ್ ಗಳನ್ನು ಕಳಚುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ ಹೇರಿದ ಬಿಸಿಸಿಐ!


'ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂ.ಎಸ್.ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮತ್ತು ರೋಹಿತ್ ಶರ್ಮಾ ಅವರ ಮಹಾನ್ ಮನಸ್ಸಿನಡಿಯಲ್ಲಿ ಆಡುವ ಮೂಲಕ ನನ್ನ ಕ್ರಿಕೆಟಿಂಗ್ ಅನುಭವವನ್ನು ಶ್ರೀಮಂತಗೊಳಿಸಿದೆ.ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್‌ನಲ್ಲಿ ಮಾರ್ಗದರ್ಶಕರಾಗಿ ಹೊಂದಲು ನಾನು ಆಶೀರ್ವದಿಸಿದ್ದೇನೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.37 ವರ್ಷದ ವಿನಯ್ ಕುಮಾರ್ ಅವರು 2010 ಮತ್ತು 2013 ರ ನಡುವೆ ಭಾರತಕ್ಕಾಗಿ 1 ಟೆಸ್ಟ್, 31 ಏಕದಿನ ಮತ್ತು 9 ಟಿ 20 ಪಂದ್ಯಗಳನ್ನು ಆಡಿದ್ದಾರೆ.


Yusuf Pathan) ಟ್ವೀಟ್ ಮಾಡಿ 'ನಾನು ಅಧಿಕೃತವಾಗಿ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುತ್ತೇನೆ. ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡ ಮತ್ತು ಇಡೀ ದೇಶಕ್ಕೆ ಎಲ್ಲ ಬೆಂಬಲ ಮತ್ತು ಪ್ರೀತಿಗಾಗಿ ನಾನು ಪೂರ್ಣ ಹೃದಯದಿಂದ ಧನ್ಯವಾದ ಹೇಳುತ್ತೇನೆ.ಭವಿಷ್ಯದಲ್ಲಿಯೂ ನೀವು ನನ್ನನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ,”ಎಂದು 38 ವರ್ಷದ ಆಲ್ರೌಂಡರ್ ಶುಕ್ರವಾರ ಪೋಸ್ಟ್ನಲ್ಲಿ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.