close

News WrapGet Handpicked Stories from our editors directly to your mailbox

ಸಂಜಯ್ ಮಂಜ್ರೆಕರ್ ನ್ನು ರವಿಂದ್ರ ಜಡೇಜಾ ತರಾಟೆ ತೆಗೆದುಕೊಂಡಿದ್ದೇಕೆ..?

ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರ ವಿರುದ್ಧ ಈಗ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Updated: Jul 3, 2019 , 08:15 PM IST
ಸಂಜಯ್ ಮಂಜ್ರೆಕರ್ ನ್ನು ರವಿಂದ್ರ ಜಡೇಜಾ ತರಾಟೆ ತೆಗೆದುಕೊಂಡಿದ್ದೇಕೆ..?

ನವದೆಹಲಿ: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರ ವಿರುದ್ಧ ಈಗ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಿಂತ ಮುಂಚಿತವಾಗಿ, ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಂಡವು ಜಡೇಜಾ ಅವರನ್ನು ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಸಬಹುದೆಂದು ಎಂದು ಹೇಳಿದ್ದರು. ಇದಕ್ಕೆ ಸಂಜಯ ಮಂಜ್ರೆಕರ್ "50 ಓವರ್ ಗಳ ಪಂದ್ಯದಲ್ಲಿ ಚೂರು ಚೂರಾಗಿರುವ ಆಟಗಾರನ ದೊಡ್ಡ ಅಭಿಮಾನಿ ನಾನಲ್ಲ, ಟೆಸ್ಟ್ ಪಂದ್ಯದಲ್ಲಿ ಅವರು ಉತ್ತಮ ಬೌಲರ್, ಆದರೆ ಅವರು 50 ಓವರ್ ಗಳ ಪಂದ್ಯಕ್ಕೆ ಸೂಕ್ತ ಬ್ಯಾಟ್ಸ್ ಮನ್ ಹಾಗೂ ಸ್ಪೀನ್  ಬೌಲರ್ ಅಲ್ಲ ' ಎಂದು ಹೇಳಿಕೆ ನೀಡಿದ್ದರು.

ಈಗ ಮಂಜ್ರೆಕರ್ ಹೇಳಿಕೆ ಕೆಂಡಾ ಮಂಡಲವಾಗಿರುವ ರವೀಂದ್ರ ಜಡೇಜಾ, ಸಾಧನೆ ಮಾಡಿರುವ ಜನರನ್ನು ಗೌರವಿಸುವುದು ಕಲಿವಂತೆ ಟ್ವೀಟರ್ ನಲ್ಲಿ ಕೇಳಿಕೊಂಡಿದ್ದಾರೆ. ''ಇನ್ನೂ ನಾನು ನೀವು ಆಡಿದ ಪಂದ್ಯಗಳ ಎರಡು ಪಟ್ಟು ಹೆಚ್ಚು ಆಡಿದ್ದೇನೆ ಮತ್ತು ನಾನು ಇನ್ನೂ ಆಡುತ್ತಿದ್ದೇನೆ. ಆದ್ದರಿಂದ ಸಾಧನೆ ಮಾಡಿದ ಜನರನ್ನು ಗೌರವಿಸಲು ಕಲಿಯಿರಿ. ನಿಮ್ಮ ಮೌಖಿಕ ಅತಿಸಾರವನ್ನು ನಾನು ಕೇಳಿದ್ದೇನೆ ಸಂಜಯ ಮಂಜ್ರೆಕರ್ 'ಎಂದು ಟ್ವೀಟ್ ಮಾಡಿದ್ದಾರೆ