ಇದುವರೆಗೆ ನಡೆದ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯ ಸೋತಿರುವ ಆರ್ಸಿಬಿ ಪ್ಲೇ ಆಫ್ ತಲುಪಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಮೊದಲು 5 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಆರ್ಸಿಬಿ ನಂತರ ಮೂರೂ ಪಂದ್ಯಗಳನ್ನು ಸತತವಾಗಿ ಸೋಲುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

RCB Playoff Chances IPL 2025: ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳು ಎರಡನೇ ಬಾರಿಗೆ ಸೆಣಸಾಟ ನಡೆಸುತ್ತಿವೆ. ತವರು ನೆಲದಲ್ಲಿ ಈ ಮೊದಲು ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ದೆಹಲಿ ಗೆಲುವು ಸಾಧಿಸಿತ್ತು. ಇದೀಗ ದೆಹಲಿ ತವರು ನೆಲದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿದೆ.
ಸದ್ಯ IPL ಟೂರ್ನಿಯಲ್ಲಿ ಆರ್ಸಿಬಿ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ತವರು ನೆಲದಲ್ಲಿ ಸತತ ಮೂರು ಸೋಲು ಕಂಡಿದ್ದ ಆರ್ಸಿಬಿ ಕೊನೆಗೂ ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಆರಂಭದಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿತ್ತು. ಆಡಿದ 9 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಸೋತಿರುವ RCB ಈಗ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಈ ನಡುವೆ ಆರ್ಸಿಬಿ ಅಭಿಮಾನಿಗಳಿಗೆ ಆತಂಕ ಕೂಡ ಉಂಟಾಗಿದೆ. ತಂಡದಲ್ಲಿ ಕೆಲವು ಆಟಗಾರರು ವಿಫಲರಾಗುತ್ತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಆತಂಕವನ್ನು ಉಂಟುಮಾಡಿದೆ. ಹಾಗಾದರೆ RCB ಪ್ಲೇ ಆಫ್ ತಲುಪಲು ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಮತ್ತು ಆರ್ಸಿಬಿಯ ಮುಂದಿನ ಹಾದಿ ಹೇಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬ್ಯಾಟಿಂಗ್ನಲ್ಲಿ ವಿಫಲರಾದ RCB ಆಟಗಾರರು!!
ಆರ್ಸಿಬಿ ತಂಡದ ಕೆಲವು ಪ್ರಮುಖ ಆಟಗಾರರು ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದು, ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದುವರೆಗೆ ನಡೆದ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯ ಸೋತಿರುವ ಆರ್ಸಿಬಿ ಪ್ಲೇ ಆಫ್ ತಲುಪಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಮೊದಲು 5 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಆರ್ಸಿಬಿ ನಂತರ ಮೂರೂ ಪಂದ್ಯಗಳನ್ನು ಸತತವಾಗಿ ಸೋಲುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ಕೆಲವು ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯ.
ಪ್ಲೇ ಆಫ್ ತಲುಪಲು ಎಷ್ಟು ಪಂದ್ಯ ಗೆಲ್ಲಬೇಕು?
ಈಗಾಗಲೇ ಆರು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಲೀಗ್ ಹಂತದಲ್ಲಿ ಇನ್ನೂ 5 ಪಂದ್ಯಗಳನ್ನು ಆಡಬೇಕಿದೆ. ಈ ಐದು ಪಂದ್ಯದಲ್ಲಿ ಕನಿಷ್ಠ 3 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ಇದಷ್ಟೇ ಅಲ್ಲ ಎಲ್ಲಾ ಪಂದ್ಯದಲ್ಲಿಯೂ ಉತ್ತಮ ರನ್ರೇಟ್ ಕಾಯ್ದುಕೊಳ್ಳುವುದು ಬಹಳ ಅಗತ್ಯ. ಪಂದ್ಯ ಗೆಲ್ಲುವುದರ ಜೊತೆಗೆ ಉತ್ತಮ ರನ್ರೇಟ್ ಕಾಯ್ದುಕೊಂಡರೆ ಮಾತ್ರ ಪ್ಲೇ ಆಫ್ ತಲುಪಬಹುದಾಗಿದೆ. ಇನ್ನು ಪ್ಲೇ ಆಫ್ ತಲುಪಲು ತಂಡ 16 ಪಾಯಿಂಟ್ ಗಳಿಸಿಕೊಳ್ಳುವುದು ಅಗತ್ಯ. ಆರ್ಸಿಬಿ ಈಗಾಗಲೇ 12 ಅಂಕ ಗಳಿಸಿದೆ. ಮುಂದಿನ 5 ಪಂದ್ಯದಲ್ಲಿ 2 ಪಂದ್ಯ ಗೆದ್ದರೆ ಪ್ಲೇ ಆಫ್ ತಲುಪಬಹುದು. ಆದರೆ 16 ಅಂಕದ ಜೊತೆ ಉತ್ತಮ ರನ್ರೇಟ್ ಹೊಂದುವುದು ಕಡ್ಡಾಯ. ಈ ಕಾರಣಗಳಿಂದ ಐದು ಪಂದ್ಯದಲ್ಲಿ ಮೂರೂ ಪಂದ್ಯ ಗೆಲ್ಲಲೇಬೇಕು. ಮುಂದಿನ ಮೂರೂ ಪಂದ್ಯಗಳಲ್ಲಿ ಗೆದ್ದರೆ ಆರ್ಸಿಬಿ ಸುಲಭವಾಗಿ ಪ್ಲೇ ಆಫ್ ತಲುಪಬಹುದು.
ಆರ್ಸಿಬಿ ಜೊತೆ ಮುಂಬೈ, ಪಂಜಾಬ್ ಪೈಪೋಟಿ!
ಒಂದು ಕಡೆ ಆರ್ಸಿಬಿ ಪ್ಲೇ ಆಫ್ ತಲುಪಲು ಸಾಹಸ ಮಾಡುತ್ತಿದ್ದರೆ, ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ಪ್ಲೇ ಆಫ್ ತಲುಪಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ಮತ್ತು ಐದನೇ ಸ್ಥಾನದಲ್ಲಿರುವ ಮುಂಬೈ ಪ್ಲೇ ಆಫ್ ತಲುಪಲು ಇನ್ನೂ 3 ಪಂದ್ಯಗಳನ್ನು ವಿನ್ ಆಗಬೇಕು. ಆಡಿರುವ 9 ಪಂದ್ಯದಲ್ಲಿ 5 ಗೆಲುವು ಸಾಧಿಸಿರುವ ಪಂಜಾಬ್ 3 ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ಡ್ರಾ ಆಗಿರುವುದರಿಂದ ಒಟ್ಟು 11 ಅಂಕಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಇದಲ್ಲದೇ ಆಡಿರುವ 9 ಪಂದ್ಯದಲ್ಲಿ 5 ಪಂದ್ಯ ಗೆದ್ದು ನಾಲ್ಕು ಪಂದ್ಯಗಳನ್ನು ಸೋತಿರುವ ಮುಂಬೈ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲಕ್ಕೆ ಬರಲು ಸಾಹಸ ಮಾಡುತ್ತಿದೆ. ಗುಜರಾತ್ ಮತ್ತು ಡೆಲ್ಲಿ ಕ್ಯಾಪಿಟಲ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನದಲ್ಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.