ನವದೆಹಲಿ: ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಿಡ್ಡಿಂಗ್‌ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಟಾಮ್ ಮೂಡಿ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ತೆಗೆದುಕೊಂಡ ನಿರ್ಧಾರಗಳು ಅದ್ಭುತ. ಈ ಆಟಗಾರರ ಜೊತೆಗೆ ಆರ್‌ಸಿಬಿ ತಂಡವು 2023ರ ಐಪಿಎಲ್‌ನ ಫೈನಲ್‌ನಲ್ಲಿ ಆಡಲಿದೆ ಅಂತಾ ಟಾಮ್ ಮೂಡಿ ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಡಿ.23ರಂದು ಕೊಚ್ಚಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ 7 ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸೋನು ಯಾದವ್, ಅವಿನಾಶ್ ಸಿಂಗ್, ರಜನ್ ಕುಮಾರ್, ಮನೋಜ್ ಭಾಂಡಗೆ, ವಿಲ್ ಜಾಕ್ಸ್ ಹಿಮಾಂಶು ಶರ್ಮಾ ಮತ್ತು ರೀಸ್ ಟೋಪ್ಲೆ ಅವರನ್ನು ಆರ್‌ಸಿಬಿ ಖರೀದಿಸಿದೆ. ಆರ್‌ಸಿಬಿ ಫ್ರಾಂಚೈಸಿ ತೆಗೆದುಕೊಂಡಿರುವ ನಿರ್ಧಾಕ್ಕೆ ನಾನು ಮೆಚ್ಚುಗೆ ಸೂಚಿಸುತ್ತೇನೆ ಅಂತಾ ಟಾಮ್ ಮೂಡಿ ಹೇಳಿದ್ದಾರೆ.


ಇದನ್ನೂ ಓದಿ: IPL Mini Auction 2023: ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರು ಇವರೇ ನೋಡಿ


‘ಅತ್ಯುತ್ತಮ ಹರಾಜಿನ ಕಾರಣ ಆರ್‌ಸಿಬಿ ತಂಡವನ್ನು ಬಹುಶಃ ಫೈನಲ್‌ನಲ್ಲಿ ನಾನು ನೋಡಬಹುದು. ಈ ಆಟಗಾರರಿಗೆ ಹೆಚ್ಚಿನ ಹಣ ನೀಡಿ ಖರೀದಿಸಿಲ್ಲ. ಆದರೆ, ಆರ್‌ಸಿಬಿಯವರು ಬಹಳ ಚಾಣಾಕ್ಷತನದಿಂದ ತಮ್ಮ ಹಣವನ್ನು ಉತ್ತಮ ಆಟಗಾರರ ಮೇಲೆ ವ್ಯಯಿಸಿದ್ದಾರೆ’ ಎಂದು ಮೂಡಿ ಹೇಳಿದ್ದಾರೆ.   


ವಿಲ್ ಜಾಕ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್‌ಸಿಬಿಯ ನಿರ್ಧಾರಕ್ಕೆ ಟಾಮ್ ಮೂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲದ ದೃಷ್ಟಿಯಿಂದ ಇದು ಅದ್ಭುತ ನಿರ್ಧಾರವೆಂದಿರುವ ಮೂಡಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಜಾಕ್ಸ್ ಸಮರ್ಥವಾದ ಬದಲಿ ಆಟಗಾರನಾಗಲಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.  ಜ್ಯಾಕ್ಸ್ 1.50 ಕೋಟಿ ರೂ. ಮೂಲಬೆಲೆಗೆ ನೋಂದಾಯಿಸಿಕೊಂಡಿದ್ದರು. ಆದರೆ ಆರ್‌ಸಿಬಿ ಅವರಿಗೆ 3.2 ಕೋಟಿ ರೂ. ನೀಡಿ ಖರೀದಿಸಿದೆ.   


ಇದನ್ನೂ ಓದಿಪಾಕ್ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಶಾಹಿದ್ ಆಫ್ರಿದಿ ನೇಮಕ...!


ಇದಲ್ಲದೆ ಸೋನು ಯಾದವ್(20 ಲಕ್ಷ ರೂ.), ಅವಿನಾಶ್ ಸಿಂಗ್(60 ಲಕ್ಷ ರೂ.), ರಜನ್ ಕುಮಾರ್(70 ಲಕ್ಷ ರೂ.), ಮನೋಜ್ ಭಾಂಡಗೆ(20 ಲಕ್ಷ ರೂ.), ಹಿಮಾಂಶು ಶರ್ಮಾ(20 ಲಕ್ಷ ರೂ.) ಮತ್ತು ರೀಸ್ ಟೋಪ್ಲೆ(1.9 ಕೋಟಿ ರೂ.) ನೀಡಿ ಆರ್‍ಸಿಬಿ ಖರೀದಿ ಮಾಡಿದೆ.   


ಆರ್‌ಸಿಬಿ ತಂಡದ ಸ್ಕ್ವಾಡ್ ಹೀಗಿದೆ ನೋಡಿ


ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.