RCB vs CSK: ಆರ್ಸಿಬಿ ಪರ ಆರಂಭಿಕರಾಗಿ ಕಣ್ಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ತಂಡಕ್ಕೆ ಸ್ಫೋಟಕ ಆರಂಭವನ್ನು ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 97 ರನ್ಗಳ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

RCB vs CSK, IPL 2025: ರೊಮಾರಿಯೊ ಶೆಫರ್ಡ್, ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ಅವರ ಅಬ್ಬರ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ನ 52ನೇ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಕೊನೆಯಲ್ಲಿ ಅದ್ಭುತ ಬೌಲಿಂಗ್ ಮೂಲಕ ಯಶ್ ದಯಾಳ್ ವಿರೋಚಿತ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ರೊಮಾರಿಯೊ ಶೆಫರ್ಡ್, ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತವನ್ನು ಪೇರಿಸಿತು. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ ಆರ್ಸಿಬಿ 213 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಅದ್ಭುತವಾಗಿ ಆಟವಾಡಿತಾದರೂ ಕೇವಲ 2 ರನ್ಗಳಿಂದ ವಿರೋಚಿತ ಸೋಲು ಕಂಡಿತು. ಧೋನಿ ಪಡೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್ಸಿಬಿ ಪರ ಆರಂಭಿಕರಾಗಿ ಕಣ್ಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ತಂಡಕ್ಕೆ ಸ್ಫೋಟಕ ಆರಂಭವನ್ನು ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 97 ರನ್ಗಳ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಸ್ಫೋಟಕ ಆಟವಾಡಿದ ಜಾಕೋಬ್ ಕೇವಲ 33 ಎಸೆತಗಳಲ್ಲಿ 8 ಬೌಂಡಿ ಮತ್ತು 2 ಸಿಕ್ಸರ್ ಇದ್ದ 55 ರನ್ ಗಳಿಸಿ ಔಟಾದರು. ಐಪಿಎಲ್ ಟೂರ್ನಿಯಲ್ಲಿ 55ನೇ ಅರ್ಧಶತಕ ಗಳಿಸಿದ ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಇದ್ದ 62 ರನ್ ಗಳಿಸಿ ಔಟಾದರು. ನಂತರ ಬಂದ ದೇವದತ್ ಪಡಿಕ್ಕಲ್ (17) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ರಜತ್ ಪಾಟೀದಾರ್ (11) ಕೂಡ ಬಹುಬೇಗನೆ ವಿಕೆಟ್ ಒಪ್ಪಿಸಿದರು.
ಶೆಫರ್ಡ್ ಅಬ್ಬರದ ಬ್ಯಾಟಿಂಗ್!!
ಡೆತ್ ಓವರ್ಗಳಲ್ಲಿ ಶೆಫರ್ಡ್ ಬಾರಿಸಿದ ಅಮೋಘ ಸಿಕ್ಸರ್ಗಳ ನೆರವಿನಿಂದ ಆರ್ಸಿಬಿ ತಂಡವು ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಸ್ಫೋಟಕ ಆಟವಾಡಿದ ಶೆಫರ್ಡ್ ಐಪಿಎಲ್ ಇತಿಹಾಸದಲ್ಲೇ 2ನೇ ಅತಿವೇಗದ ಅರ್ಧಶತಕ ಗಳಿಸಿದರು. ಶೆಫರ್ಡ್ ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಇದ್ದ 53 ರನ್ ಗಳಿಸಿ ಮಿಂಚಿದರು. ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ಗೆ ಚೆನ್ನೈ ಬೌಲರ್ಗಳು ಬಸವಳಿದು ಹೋದರು. ಚೆನ್ನೈ ಪರ ಮಥೀಶ ಪತಿರಾನ 3 ವಿಕೆಟ್ ಪಡೆದು ಮಿಂಚಿದರು.
The going got tough and the boys got tougher!
We complete a double over CSK in this IPL? pic.twitter.com/1hn9VQ0G6r
— Royal Challengers Bengaluru (@RCBTweets) May 3, 2025
ವ್ಯರ್ಥವಾದ ಆಯುಷ್ & ಜಡೇಜಾ ಅದ್ಭುತ ಆಟ!!
ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಪರ ಆಯುಷ್ ಮ್ಹಾತ್ರೆ ಮತ್ತು ರವೀಂದ್ರ ಜಡೇಜಾ ಅದ್ಭುತ ಆಟವಾಡಿದರು. ಈ ಜೋಡಿ ೩ನೇ ವಿಕೆಟ್ಗೆ 114 ರನ್ಗಳ ಅದ್ಭುತ ಜೊತೆಯಾಟವಾಡಿತು. ಆಯುಷ್ 48 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಇದ್ದ 94 ರನ್ ಗಳಿಸಿ ಔಟಾದರು. ಜಡೇಜಾ ಕೊನೆವರೆಗೂ ಕ್ರೀಸ್ನಲ್ಲಿ ನಿಲ್ಲುವ ಮೂಲಕ ತಂಡಕ್ಕೆ ಗೆಲುವು ತಂದುಕೊಡಲು ಹೋರಾಡಿದರೂ ಪ್ರಯೋಜನವಾಗಲಿಲ್ಲ. 45 ಎಸೆತಗಳಲ್ಲಿ ಜಡೇಜಾ 8 ಬೌಂಡರಿ ಮತ್ತು 2 ಸಿಕ್ಸರ್ ಇದ್ದ 77 ರನ್ ಗಳಿಸಿ ಔಟಾಗದೆ ಉಳಿದರು.
ಯಶ್ ದಯಾಳ್ ಅದ್ಭುತ ಬೌಲಿಂಗ್!!
ಕೊನೆಯ ಓವರ್ನಲ್ಲಿ ಚೆನ್ನೈ ಗೆಲುವಿಗೆ 15 ರನ್ಗಳ ಅಗತ್ಯವಿತ್ತು. ಈ ಓವರ್ನಲ್ಲಿ ಯಶ್ ದಯಾಳ್ಗೆ ತಂಡಕ್ಕೆ ಗೆಲುವು ತಂದುಕೊಡುವ ಒತ್ತಡವಿತ್ತು. ಇದೇ ಒತ್ತಡದಲ್ಲಿಯೇ ಬೌಲಿಂಗ್ ಮಾಡಿದ ಅವರು ಮೊದಲ ಎರಡು ಎಸೆತದಲ್ಲಿ ಸಿಂಗಲ್ ರನ್ ಬಿಟ್ಟುಕೊಟ್ಟರು. 3ನೇ ಎಸೆತದಲ್ಲಿ ಧೋನಿ ಅವರನ್ನ ಯಶ್ LBWಗೆ ಬಲೆಗೆ ಕೆಡವಿದರು. ಈ ವೇಳೆ ಕೊನೆಯ 3 ಎಸೆತಗಳಲ್ಲಿ ಚೆನ್ನೈಗೆ 13 ರನ್ಗಳ ಅಗತ್ಯವಿತ್ತು. ಧೋನಿ ಬಳಿಕ ಬಂದ ಶಿವಂ ದುಬೆ, ಯಶ್ ಎಸೆದ ಫುಲ್ ಟಾಸ್ ಬೌಲ್ಅನ್ನ ಸಿಕ್ಸರ್ಗೆ ಅಟ್ಟಿದರು. ಇದಲ್ಲದೇ ನೋಬಾಲ್ ರಿವಿವ್ಯೂ ಕೂಡ ತೆಗೆದುಕೊಂಡರು. ಇದರಿಂದ ಆರ್ಸಿಬಿ ಬಹುತೇಕ ಸೋಲಿನ ಸುಳಿಗೆ ಸಿಲುಕಿತ್ತು. ನೋಬಾಲ್ ಸಿಕ್ಸ್ ಆಗಿದ್ದರಿಂದ ಚೆನ್ನೈಗೆ 3 ಎಸೆತಗಳಲ್ಲಿ ಕೇವಲ 6 ರನ್ಗಳ ಅಗತ್ಯವಿತ್ತು.
ಈ ಸಂದರ್ಭದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಯಶ್ ದಯಾಳ್ ಜಡೇಜಾ ಮತ್ತು ದುಬೆರನ್ನ ಕಟ್ಟಿಹಾಕಿದರು. 19.4 ಓವರ್ನಲ್ಲಿ ದುಬೆ ಸಿಂಗಲ್ ರನ್ ಗಳಿಸಿದರೆ, 19.5 ಓವರ್ನಲ್ಲಿ ಜಡೇಜಾ ಸಿಂಗಲ್ ರನ್ ಗಳಿಸಿ ದುಬೆಗೆ ಮತ್ತೆ ಸ್ಟ್ರೈಕ್ ನೀಡಿದರು. ಕೊನೆಯ ಎಸೆತದಲ್ಲಿ ದುಬೆ ಸಿಂಗಲ್ ರನ್ ಗಳಿಸಲಷ್ಟೇ ಶಕ್ತರಾದರು. ಪರಿಣಾಮ ಆರ್ಸಿಬಿ 2 ರನ್ಗಳ ರೋಚಕ ಗೆಲುವು ಸಾಧಿಸಲು ಸಾಧ್ಯವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.