RCB vs GT: ಬೆಂಗಳೂರು Vs ಗುಜರಾತ್ ಯಾರು ಗೆಲ್ಲುತ್ತಾರೆ? ಉಭಯ ತಂಡಗಳ ಬಲಾಬಲ ಹೇಗಿದೆ?

RCB vs GT Team Prediction: ರಜತ್ ಪಾಟಿದಾರ್ ನೇತೃತ್ವದ ತಂಡವು ಈ ಋತುವಿನಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗಗಳಲ್ಲಿಯೂ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.

Written by - Puttaraj K Alur | Last Updated : Apr 2, 2025, 04:29 PM IST
  • ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಮುಖಾಮುಖಿ
  • ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್‌ ಪಂದ್ಯ
  • ಉಭಯ ತಂಡಗಳ ಪೈಕಿ ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?
RCB vs GT: ಬೆಂಗಳೂರು Vs ಗುಜರಾತ್ ಯಾರು ಗೆಲ್ಲುತ್ತಾರೆ? ಉಭಯ ತಂಡಗಳ ಬಲಾಬಲ ಹೇಗಿದೆ?

RCB vs GT: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಅಂದರೆ ಇಂದು (ಏಪ್ರಿಲ್ 2) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಮೈದಾನದಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಇಲ್ಲಿಯವರೆಗೆ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಈ ಋತುವಿನಲ್ಲಿ ಆರ್‌ಸಿಬಿ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಜಯ ಸಾಧಿಸಿದೆ. ಆರ್‌ಸಿಬಿಗೆ ಇದು ತವರಿನಲ್ಲಿ ಮೊದಲ ಪಂದ್ಯವಾಗಿದ್ದು, ಅಭಿಮಾನಿಗಳ ಮುಂದೆ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿರುತ್ತಾರೆ. ರಜತ್ ಪಾಟಿದಾರ್ ನೇತೃತ್ವದ ತಂಡವು ಈ ಋತುವಿನಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗಗಳಲ್ಲಿಯೂ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.

Add Zee News as a Preferred Source

ಗುಜರಾತ್‌ಗೆ ಋತುವಿನ ಆರಂಭವು ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ. ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ತವರಿನಲ್ಲಿ ನಡೆದ ಪಂದ್ಯದಲ್ಲಿ 11 ರನ್‌ಗಳಿಂದ ಸೋಲನ್ನು ಅನುಭವಿಸಿದರು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 243 ರನ್ ಗಳಿಸಿತ್ತು, ಇದರಲ್ಲಿ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ ಮತ್ತು ಶಶಾಂಕ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್ ಕೂಡ ರನ್ ಚೇಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು, ಆದರೆ ಇಡೀ ತಂಡವು 232 ರನ್‌ಗಳಿಗೆ ಆಲೌಟ್ ಆಗಿ ಅಂತಿಮವಾಗಿ ಪಂದ್ಯವನ್ನು 11 ರನ್‌ಗಳಿಂದ ಸೋಲು ಕಂಡಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 196 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು ಕೇವಲ 160 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಗುಜರಾತ್ ಈ ಪಂದ್ಯವನ್ನು 36 ರನ್‌ಗಳಿಂದ ಗೆದ್ದುಕೊಂಡಿತು.

ಇದನ್ನೂ ಓದಿ: ಐಪಿಎಲ್‌ ಟಿಕೆಟ್‌ಗಳ ಮೇಲೆ ಶೇ.70ರಷ್ಟು ತೆರಿಗೆ? ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೈರಲ್!!

RCB vs GT: ಎರಡೂ ತಂಡಗಳ ಮುಖಾಮುಖಿ ದಾಖಲೆ

ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆಯ ಬಗ್ಗೆ ಹೇಳುವುದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ಪಂದ್ಯಗಳಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದೆ. ಬೆಂಗಳೂರು ತಂಡವು ಗುಜರಾತ್ ವಿರುದ್ಧ 3 ಪಂದ್ಯಗಳನ್ನು ಗೆದ್ದಿದ್ದರೆ, 2 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳನ್ನು ನೋಡಿದರೆ, ಎರಡೂ ತಂಡಗಳು ಇಲ್ಲಿ ಒಟ್ಟು 2 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿವೆ.

RCB vs GT: ಎರಡೂ ತಂಡಗಳ ಸಂಭಾವ್ಯ ಆಡುವ XI

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

ಇಂಪ್ಯಾಕ್ಟ್ ಪ್ಲೇಯರ್ : ಸುಯಶ್ ಶರ್ಮಾ

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್.ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಬಾಡಿಗೆ ಮನೆ.. ಕಡು ಬಡತನ.. ಕೋಟಿ ಕೋಟಿ ಕೊಟ್ಟು ಐಪಿಎಲ್‌ ತಂಡಕ್ಕೆ ಕರೆತರುವ ಮೂಲಕ ಪ್ರತಿಭಾನ್ವಿತ ಆಟಗಾರನ ಲಕ್‌ ಬದಲಿಸಿದ ಪ್ರೀತಿ ಜಿಂಟಾ!

ಇಂಪ್ಯಾಕ್ಟ್ ಪ್ಲೇಯರ್: ಮಹಿಪಾಲ್ ಲೊಮ್ರೋರ್

ಈ ಪಂದ್ಯವನ್ನು ಯಾರು ಗೆಲ್ಲಬಹುದು?

ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಬೆಂಗಳೂರು ಮತ್ತು ಗುಜರಾತ್ ನಡುವೆ ಕಠಿಣ ಸ್ಪರ್ಧೆ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯವನ್ನು ಯಾವ ತಂಡ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಅಂಕಿಅಂಶಗಳನ್ನು ನೋಡಿದರೆ, ಆರ್‌ಸಿಬಿ ಇಲ್ಲಿ ಮೇಲುಗೈ ಸಾಧಿಸಿರುವಂತೆ ತೋರುತ್ತದೆ. ಈ ಋತುವಿನಲ್ಲಿ ಆರ್‌ಸಿಬಿ ತಂಡವು ಉತ್ತಮ ಫಾರ್ಮ್‌ನಲ್ಲಿದ್ದು, ಇದು ತಂಡಕ್ಕೆ ತವರಿನಲ್ಲಿ ಮೊದಲ ಪಂದ್ಯವಾಗಿದೆ. ಆದ್ದರಿಂದ ರಜತ್ ಪಾಟಿದಾರ್ ತಂಡವು ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಅದರಂತೆ ಗುಜರಾತ್ ತಂಡದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಅನೇಕ ಆಟಗಾರರು ಇದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರೀ ಸೆಣಸಾಟದ ನಿರೀಕ್ಷೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News