ಎಲ್ಲವೂ ಆಕೆಗಾಗಿ... ಯುಜ್ವೇಂದ್ರ ಚಹಲ್ - ಧನಶ್ರೀ ವರ್ಮಾ ಡಿವೋರ್ಸ್‌ಗೆ ಇದುವೇ ಅಸಲಿ ಕಾರಣ!

Yuzvendra Chahal Dhanashree Verma divorce reason: ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಕಾರಣ ಏನೆಂಬುದು ಇದೀಗ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Mar 26, 2025, 03:25 PM IST
  • ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್
  • ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ
  • ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಕಾರಣ
ಎಲ್ಲವೂ ಆಕೆಗಾಗಿ... ಯುಜ್ವೇಂದ್ರ ಚಹಲ್ - ಧನಶ್ರೀ ವರ್ಮಾ ಡಿವೋರ್ಸ್‌ಗೆ ಇದುವೇ ಅಸಲಿ ಕಾರಣ!

Yuzvendra Chahal Dhanashree Verma divorce reason: ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಇತ್ತೀಚೆಗೆ ಧನಶ್ರೀ ವರ್ಮಾ ಅವರಿಗೆ ವಿಚ್ಛೇದನ ನೀಡಿದ್ದು ಗೊತ್ತೇ ಇದೆ. ಪ್ರಸ್ತುತ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಚಹಲ್ ಆಡುತ್ತಿದ್ದಾರೆ. 

Add Zee News as a Preferred Source

ಚಹಲ್ ಮತ್ತು ಧನಶ್ರೀ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುತ್ತಿರುವುದಾಗಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆದರೆ ಅವರ ವಿಚ್ಛೇದನದ ಹಿಂದೆ ಬಲವಾದ ಕಾರಣವಿದೆ ಎನ್ನಲಾಗುತ್ತಿದೆ. 

ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ 2020 ರಲ್ಲಿ ವಿವಾಹವಾದರು. ಅಂದಿನಿಂದ ಧನಶ್ರೀ ತನ್ನ ಪತಿ ಜೊತೆ ಅತ್ತೆ ಮತ್ತು ಮಾವನೊಂದಿಗೆ ಹರಿಯಾಣದಲ್ಲಿರುವ ಚಹಲ್ ಅವರ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಕ್ರೀಡಾ ಲೋಕದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 1450 ಕೋಟಿ ಜೀವನಾಂಶ ಕೊಟ್ಟಿರುವ ಸ್ಟಾರ್‌ ಆಟಗಾರ !

ನೃತ್ಯ ಕಾರ್ಯಕ್ರಮಗಳು ಮತ್ತು ಇತರ ತುರ್ತು ಕೆಲಸಗಳ ಸಮಯದಲ್ಲಿ ಅವಳು ಹರಿಯಾಣದಿಂದ ಮುಂಬೈಗೆ ಪ್ರಯಾಣಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಧನಶ್ರೀ ಮುಂಬೈನಲ್ಲೇ ಮನೆ ಮಾಡುವಂತೆ ಯುಜ್ವೇಂದ್ರ ಚಹಲ್ ಅವರನ್ನು ಕೇಳಿದ್ದರಂತೆ.

ಆದರೆ ಚಹಲ್ ಅದಕ್ಕೆ ಒಪ್ಪಲಿಲ್ಲ. ತನ್ನ ತಂದೆ ತಾಯಿ ಜೊತೆ ಹರಿಯಾಣದಲ್ಲಿಯೇ ಇರಲು ಬಯಸುವುದಾಗಿ ಹೇಳಿದರಂತೆ. ಈ ವಿಷಯ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂಬ ಸಂಗತಿ ಇದೀಗ ವೈರಲ್‌ ಆಗಿದೆ. 

ಯುಜ್ವೇಂದ್ರ ಚಹಲ್ ಹರಿಯಾಣದಲ್ಲಿಯೇ ಇರಬೇಕೆಂದು ಒತ್ತಾಯಿಸಿದರು. ಆದರೆ ಧನಶ್ರೀ ಅವರು ಮುಂಬೈನಲ್ಲಿ ನೆಲೆಸಬೇಕೆಂದು ಒತ್ತಾಯಿಸಿದರು. ಇಬ್ಬರೂ ಒಪ್ಪಲು ಒಬ್ಬರ ನಿರ್ಧಾರವನ್ನು ಇನ್ನೊಬ್ಬರು ಒಪ್ಪಲು ಸಾಧ್ಯವಾಗದ ಕಾರಣ ವಿಚ್ಛೇದನ ಪಡೆಯಲು ನಿರ್ಧರಿಸಿದರು ಎನ್ನಲಾಗುತ್ತಿದೆ. ತಾಯಿಗಾಗಿ ಪತ್ನಿಯನ್ನೇ ಬಿಡಲು ಚಹಲ್‌ ನಿರ್ಧರಿಸಿದರು ಎನ್ನಲಾಗುತ್ತಿದೆ. 

ಈ ಕಾರಣಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಅವರಿಗೆ ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ನೀಡಿತು. ಆದರೆ,ಅವರು ಹೈಕೋರ್ಟ್‌ನ ಮೊರೆ ಹೋಗಿ ತಕ್ಷಣದ ವಿಚ್ಛೇದನ ಬಯಸುವುದಾಗಿ ಹೇಳಿದ್ರು.

ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆಂದೂ ಕೋರ್ಟ್‌ಗೆ ಹೇಳಿದರು. ಇದರೊಂದಿಗೆ ಹೈಕೋರ್ಟ್ ಅವರಿಗೆ ವಿಚ್ಛೇದನವನ್ನು ನೀಡಿತು. ಆದರೆ ಧನಶ್ರೀ, ಚಹಲ್ ಅಥವಾ ಅವರ ಕುಟುಂಬ ಸದಸ್ಯರು ಈ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದಾರೆ ಎಂದು ವಿಚ್ಛೇದನ ಅರ್ಜಿಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ ಬಿಡುಗಡೆ: ಸ್ಮೃತಿ ಮಂಧಾನ, ಕನ್ನಡತಿ ಶ್ರೇಯಾಂಕಾಗೆ ಅವಕಾಶ... ಇವರ ವೇತನ ಎಷ್ಟು ಗೊತ್ತಾ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News