ನನಗೆ ಮದುವೆ ಇಷ್ಟವಿಲ್ಲ.. ಆದರೆ.. ಆ ವಿಚಾರದ ಬಗ್ಗೆ ಮಾತ್ರ ಯೋಚಿಸುವ ಹುಡುಗಿ ನಾನು..! ಚಾಹಲ್ ಗೆಳತಿಯ ಶಾಕಿಂಗ್‌ ಹೇಳಿಕೆ

Chahal RJ Mahvash dating : ಟೀಂ ಇಂಡಿಯಾ ಕ್ರಿಕೆಟಿಗ ಚಾಹಲ್ ಮತ್ತು ಧನಶ್ರೀ ವಿಚ್ಛೇದನದ ನಂತರ, ಆರ್‌ಜೆ ಮಹ್ವಾಶ್ ಮತ್ತು ಚಾಹಲ್ ಪ್ರೇಮ ಸಂಬಂಧ ಪ್ರಸ್ತುತ ಚರ್ಚೆಯಲ್ಲಿದೆ. ಮಹ್ವಾಶ್ ಈಗ ತಮ್ಮ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.. ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..

Written by - Krishna N K | Last Updated : Apr 4, 2025, 06:32 PM IST
    • ಟೀಂ ಇಂಡಿಯಾ ಕ್ರಿಕೆಟಿಗ ಚಾಹಲ್ ಮತ್ತು ಧನಶ್ರೀ ವಿಚ್ಛೇದನ
    • ಆರ್‌ಜೆ ಮಹ್ವಾಶ್ ಮತ್ತು ಚಾಹಲ್ ಪ್ರೇಮ ಸಂಬಂಧ ಪ್ರಸ್ತುತ ಚರ್ಚೆಯಲ್ಲಿದೆ.
    • ಚಾಹಲ್ ಜೊತೆ ಮಹ್ವಾಶ್‌ ಕ್ರಿಕೆಟ್ ಪಂದ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು..
ನನಗೆ ಮದುವೆ ಇಷ್ಟವಿಲ್ಲ.. ಆದರೆ.. ಆ ವಿಚಾರದ ಬಗ್ಗೆ ಮಾತ್ರ ಯೋಚಿಸುವ ಹುಡುಗಿ ನಾನು..! ಚಾಹಲ್ ಗೆಳತಿಯ ಶಾಕಿಂಗ್‌ ಹೇಳಿಕೆ

RJ Mahvash on Chahal : ಬಾಲಿವುಡ್ ಅಥವಾ ಕ್ರಿಕೆಟ್ ಜಗತ್ತಿನ ಜೋಡಿಗಳ ವಿಚ್ಛೇದನ ವಿಚಾರ ಆಗಾಗ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತದೆ. ಈ ಪೈಕಿ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ಅವರ ವಿಚ್ಛೇದನವೂ ಒಂದು. ಡಿವೋರ್ಸ್‌ ನಂತರವೂ ಈ ದಂಪತಿ ಗಾಸಿಫ್‌ಗಳು ಕೇಳಿ ಬರುತ್ತಿವೆ.. ಈ ಪೈಕಿ ಚಾಹಲ್‌-ಮಹ್ವಾಶ್‌ ಡೇಟಿಂಗ್‌ ವಿಚಾರವೂ ಒಂದು.

Add Zee News as a Preferred Source

ಹೌದು.. ಆರ್‌ಜೆ ಮಹ್ವಾಶ್ ಮತ್ತು ಯುಜ್ವೇಂದ್ರ ಚಾಹಲ್ ನಡುವಿನ ಸಂಬಂಧದ ಬಗ್ಗೆ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಚಹಾಲ್ ವಿಚ್ಛೇದನ ಪಡೆದಾಗ, ಧನಶ್ರೀ ಅವರನ್ನು ಕೆಣಕುವ ಅನೇಕ ಪೋಸ್ಟ್‌ಗಳನ್ನು ಮಾಡಿದ್ದರು. ಅಷ್ಟೇ ಅಲ್ಲ, ಚಾಹಲ್ ಜೊತೆ ಮಹ್ವಾಶ್‌ ಕ್ರಿಕೆಟ್ ಪಂದ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.. 

ಇದನ್ನೂ ಓದಿ:ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್‌ ಕಿತ್ತ ವಿಶ್ವದ ಮೊದಲ ಕ್ರಿಕೆಟಿಗ ಯಾರು ಗೊತ್ತಾ? ಈ ಆಟಗಾರ ಐಪಿಎಲ್‌ ಆಡ್ಬೇಕು ಅಂತಾ ಹನಿಮೂನನ್ನೇ ಕ್ಯಾನ್ಸಲ್‌ ಮಾಡಿದ್ನಂತೆ!

ಈ ಪೈಕಿ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಇಬ್ಬರ ಸಂಬಂಧದ ಕುರಿತು ಅನೇಕ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದವು. ಆದರೆ, ಈಗ ಆರ್‌ಜೆ ಮಹ್ವಾಶ್ ಈ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. 

ತಮ್ಮ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಮದುವೆಯ ಬಗ್ಗೆ ತಮಗಿರುವ ಆಲೋಚನೆಗಳನ್ನು ವ್ಯಕ್ತಪಡಿಸಿದರು. ಸಂದರ್ಶನದಲ್ಲಿ.. ಆರ್ ಜೆ ಮಹ್ವಾಶ್.. ನಾನು ಪ್ರಸ್ತುತ ಒಂಟಿಯಾಗಿದ್ದೇನೆ, ಯಾರೊಂದಿಗೂ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ:ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕರ್ನಾಟಕದ ಆಟಗಾರರು ಯಾರು? ಇಲ್ಲಿದೆ ಸಂಪೂರ್ಣ ಪಟ್ಟಿ

ಮದುವೆಯ ವಿಷಯ ಬಂದಾಗ ಮಾತ್ರ ಡೇಟಿಂಗ್ ಬಗ್ಗೆ ಯೋಚಿಸುವ ಹುಡುಗಿ ನಾನು. ಏಕೆಂದರೆ ಈಗ ಅದರ ಮೇಲೆ ಗಮನಹರಿಸುತ್ತಿಲ್ಲ.. ನನಗೆ ಮದುವೆಯಾಗಲು ಇಷ್ಟವಿಲ್ಲ. ನಾನು ಅದರ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದರು..  

ಅಷ್ಟೇ ಅಲ್ಲ, ನಾನು 19ನೇ ವಯಸ್ಸಿನಲ್ಲಿ ಕುಟುಂಬವೇ ನಿಶ್ಚಯಿಸಿದ್ದ ಹುಡುಗನ್ನು ಮದುವೆಯಾದೆ. ಆದರೆ ಅದು ಶೀಘ್ರದಲ್ಲೇ ಮುರಿದುಬಿತ್ತು. ಕಾಲಕ್ರಮೇಣ ನನ್ನ ಆಲೋಚನೆಗಳು ಬದಲಾದವು ಎನ್ನುವ ಮೂಲಕ ಮಹ್ವಾಶ್ ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News