Team India: ಟೀಂ ಇಂಡಿಯಾಕ್ಕೆ ಮಾರಕವಾಗುತ್ತಿದೆ ರೋಹಿತ್-ದ್ರಾವಿಡ್ ಜೋಡಿ! ಇದುವೇ ಅತಿ ದೊಡ್ಡ ಕಾರಣ

Rohit Sharma-Rahul Dravid: ಆಟದ ಪ್ರತಿಯೊಂದು ವಿಭಾಗದಲ್ಲಿ ತಂಡವು ಹೆಣಗಾಡುತ್ತಿದೆ ಮತ್ತು ತಂಡದ ಆಡಳಿತವು ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಪ್ರಶ್ನಿಸಲಾಗುತ್ತಿದೆ. ರೋಹಿತ್ ಅವರ ನಾಯಕತ್ವ ಮತ್ತು ದ್ರಾವಿಡ್ ಅವರ ತರಬೇತಿಯಲ್ಲಿ ಸ್ಥಿರತೆ ಇದೆ, ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅದು ಕ್ರಿಯಾತ್ಮಕವಾಗಿರಬೇಕು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಭಾರತದ ಬ್ಯಾಟಿಂಗ್, ಬೌಲಿಂಗ್ ನಿಷ್ಪರಿಣಾಮಕಾರಿಯಾಗಲು ಇದೇ ಕಾರಣ.

Written by - Bhavishya Shetty | Last Updated : Dec 11, 2022, 02:22 PM IST
    • ರೋಹಿತ್ ಅವರ ನಾಯಕತ್ವ ಮತ್ತು ದ್ರಾವಿಡ್ ಅವರ ತರಬೇತಿಯಲ್ಲಿ ಸ್ಥಿರತೆ ಇದೆ
    • ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅದು ಕ್ರಿಯಾತ್ಮಕವಾಗಿರಬೇಕು
    • ರೋಹಿತ್ ಮತ್ತು ದ್ರಾವಿಡ್‌ ಪ್ರಯೋಗಿಸುತ್ತಿರುವುದು ಹಳೆಯ ಶೈಲಿ
Team India: ಟೀಂ ಇಂಡಿಯಾಕ್ಕೆ ಮಾರಕವಾಗುತ್ತಿದೆ ರೋಹಿತ್-ದ್ರಾವಿಡ್ ಜೋಡಿ! ಇದುವೇ ಅತಿ ದೊಡ್ಡ ಕಾರಣ title=
rohit sharma

Rohit Sharma-Rahul Dravid: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ಗೆ ಮೊದಲು, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಏಕದಿನ ಮತ್ತು ಟಿ 20 ಮಾದರಿಯಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಭಾರತವು 2022 ರ ವರ್ಷವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲಾ ಮೂರು ODIಗಳನ್ನು ಕಳೆದುಕೊಳ್ಳುವ ಮೂಲಕ ಪ್ರಾರಂಭಿಸಿತ್ತು. ಇದೀಗ ಬಾಂಗ್ಲಾದೇಶದ ವಿರುದ್ಧ 1-2 ಅಂತರದಿಂದ ODI ಸರಣಿಯಲ್ಲಿ ಕಳೆದುಕೊಂಡಿದೆ. ಇದಲ್ಲದೆ, 2022 ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತವನ್ನು ಹೀನಾಯವಾಗಿ ಸೋಲಿಸಲಾಯಿತು.

ಇದನ್ನೂ ಓದಿ: Marathon World Record: 107 ದಿನ ನಿರಂತರವಾಗಿ ಓಡಿ ವಿಶ್ವದಾಖಲೆ ಬರೆದ ಮಹಿಳೆ: ಈ ಸಾಧನೆಗೆ ಕಾರಣ ‘ಪ್ರಾಣಿಗಳು’

ಇದು ಅತಿ ದೊಡ್ಡ ಕಾರಣ

ಆಟದ ಪ್ರತಿಯೊಂದು ವಿಭಾಗದಲ್ಲಿ ತಂಡವು ಹೆಣಗಾಡುತ್ತಿದೆ ಮತ್ತು ತಂಡದ ಆಡಳಿತವು ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಪ್ರಶ್ನಿಸಲಾಗುತ್ತಿದೆ. ರೋಹಿತ್ ಅವರ ನಾಯಕತ್ವ ಮತ್ತು ದ್ರಾವಿಡ್ ಅವರ ತರಬೇತಿಯಲ್ಲಿ ಸ್ಥಿರತೆ ಇದೆ, ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅದು ಕ್ರಿಯಾತ್ಮಕವಾಗಿರಬೇಕು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಭಾರತದ ಬ್ಯಾಟಿಂಗ್, ಬೌಲಿಂಗ್ ನಿಷ್ಪರಿಣಾಮಕಾರಿಯಾಗಲು ಇದೇ ಕಾರಣ.

ಟಿ20 ವಿಶ್ವಕಪ್‌ನಲ್ಲಿ ಮ್ಯಾನೇಜ್‌ಮೆಂಟ್ ಜೋಡಿಯ ದೊಡ್ಡ ತಪ್ಪೆಂದರೆ ಯುಜುವೇಂದ್ರ ಚಹಾಲ್ ಅವರನ್ನು ಆಡಿಸದಿರುವುದು. ಇನ್ನೊಂದೆಡೆ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ವಿಫಲರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಅವರನ್ನು ಬಳಸಿಕೊಳ್ಳುವ ಬಗ್ಗೆ ನಿರ್ಧರಿಸಲು ಭಾರತ ತಂಡದ ಆಡಳಿತ ಮಂಡಳಿಗೆ ಸಾಧ್ಯವಾಗಲಿಲ್ಲ ಮತ್ತು ಫಿನಿಶರ್ ಪಾತ್ರಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿತ್ತು. ಕಾರ್ತಿಕ್ ಅವರನ್ನು ನಂಬಿ ರೋಹಿತ್ ಮತ್ತು ಮ್ಯಾನೇಜ್‌ಮೆಂಟ್ ಪಂತ್ ಅವರಂತಹ ಪ್ರತಿಭೆ ಹೊಂದಿರುವ ಬ್ಯಾಟ್ಸ್‌ಮನ್‌ಗೆ ನ್ಯಾಯ ಸಲ್ಲಿಸಲಿಲ್ಲ. ತಂಡದಲ್ಲಿ ಸ್ಥಾನ ನೀಡುವಲ್ಲಿ ವಿಫಲವಾಗಿತ್ತು.

ರೋಹಿತ್ ಮತ್ತು ದ್ರಾವಿಡ್ ಸಮಸ್ಯೆ:

ವಿರಾಟ್ ಕೊಹ್ಲಿ ಹೊರತುಪಡಿಸಿ ಬೇರೆ ಯಾರೂ ಪ್ರದರ್ಶನದಲ್ಲಿ ಸ್ಥಿರವಾಗಿಲ್ಲದ ಕಾರಣ ಭಾರತವು ಅಗ್ರ ಕ್ರಮಾಂಕದಲ್ಲಿ ಪಂತ್ ಅವರನ್ನು ಆಯ್ಕೆ ಮಾಡಬೇಕಿತ್ತು. ಎಡಗೈ ಬ್ಯಾಟ್ಸ್‌ಮನ್ ಲೈನ್-ಅಪ್‌ನಲ್ಲಿ ಉತ್ತಮ ಪರಿಣಾಮ ಬೀರಬಹುದಿತ್ತು. ರೋಹಿತ್ ಮತ್ತು ದ್ರಾವಿಡ್ ಬೌಲಿಂಗ್ ಘಟಕದ ವೈಫಲ್ಯಕ್ಕೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ರೋಹಿತ್ ಮತ್ತು ದ್ರಾವಿಡ್‌ ಅವರ ಪ್ರಮುಖ ಸಮಸ್ಯೆ ಎಂದರೆ ಅವರದ್ದು ಹಳೆಯ ಶೈಲಿ. ಆದರೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಎಷ್ಟರ ಮಟ್ಟಿಗೆ ಕ್ರಿಯಾತ್ಮಕವಾಗಿರುತ್ತದೆಯೋ ಅಷ್ಟು ಉತ್ತಮ. ತಂಡಗಳು ಹೊಸ ಪರಿಕಲ್ಪನೆಗಳನ್ನು ಆವಿಷ್ಕರಿಸುತ್ತಲೇ ಇರಬೇಕಾಗುತ್ತದೆ.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಆಕ್ರಮಣಕಾರಿ ಶೈಲಿಯು ಬಹಳ ಯಶಸ್ವಿಯಾಗಿದೆ. ಇದರಿಂದಾಗಿ 50 ಓವರ್ ಮತ್ತು T20 ವಿಶ್ವಕಪ್‌ಗಳನ್ನು ಗೆದ್ದಿದ್ದಾರೆ. ಭಾರತವು T20 ವಿಶ್ವಕಪ್‌ ತಯಾರಿಗಾಗಿ 30 ಆಟಗಾರರನ್ನು ಪ್ರಯತ್ನಿಸಿತ್ತು. ಆದರೆ ಮೈದಾನದಲ್ಲಿ ರೋಹಿತ್ ಪ್ರಯೋಗಿಸಿದ ತಂತ್ರ ಮಾತ್ರ ನಿರೀಕ್ಷೆಗಿಂತ ಕಳಪೆಯಾಗಿತ್ತು.

ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡುವ ಬಗ್ಗೆ ಚರ್ಚೆ:

ಇತ್ತೀಚಿಗೆ ತಂಡದ ನಿರಾಸೆಯನ್ನು ಗಮನದಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡುವ ಮಾತು ಕೇಳಿ ಬರುತ್ತಿದೆ. ರಾಹುಲ್ ದ್ರಾವಿಡ್‌ಗಿಂತ ಹೆಚ್ಚು ಟಿ20 ಆಡಿದ ಕೋಚ್ ಅನ್ನು ತರಬೇಕು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಮತ್ತು ದ್ರಾವಿಡ್ ಈ ಕಠಿಣ ಪರಿಸ್ಥಿತಿಗಳಿಂದ ಹೊರಬರಲು ಮತ್ತು ಯುವ ಆಟಗಾರರಾದ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಅರ್ಷ್‌ದೀಪ್ ಸಿಂಗ್‌ಗೆ ಅವಕಾಶ ನೀಡಲು ಕೆಲವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.

ಇದನ್ನೂ ಓದಿ:  Ishan Kishan: 190 ರನ್ ಗಳಿಸಿದ್ದ ವೇಳೆ ಕೊಹ್ಲಿಗೆ ಗುಟ್ಟಾಗಿ ಇಶಾನ್ ಕಿಶನ್ ಹೇಳಿದ್ರು ಆ ಒಂದು ಮಾತು!!

ಮೈದಾನದಲ್ಲಿ ಹಿಡಿತ ಕಳೆದುಕೊಳ್ಳುವುದು, ಹತಾಶೆ ತೋರುವುದು, ಕೋಪಗೊಳ್ಳುವಂತಹ ಮುಂತಾದ ಸ್ವಭಾವಗಳನ್ನೂ ರೋಹಿತ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆಯನ್ನು ತರಲು ಅಥವಾ ಮೈದಾನಕ್ಕೆ ಹೊಸ ವಿಧಾನವನ್ನು ತರಲು ರೋಹಿತ್ ಮತ್ತು ದ್ರಾವಿಡ್ ಅವರು ಪ್ರಯತ್ನಿಸಬೇಕಿದೆ. ಸಮಯ ಈಗ ವೇಗವಾಗಿ ಸಾಗುತ್ತಿದ್ದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಶ್ವಕಪ್‌ ಪ್ರಾರಂಭವಾಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News