)
Virat Kohli: 2025 ಆರ್ಸಿಬಿ ಅಭಿಮಾನಿಗಳಿಗೆ ಮರೆಯಲಾಗದ ವರ್ಷ. ಕೋಟಿ ಕೋಟಿ ಅಭಿಮಾನಿಗಳ ಕನಸ್ಸು ನನಸಾಗಿದ್ದ ವರ್ಷ. ಕಪ್ ಗೆದ್ದ ಖುಷಯಲ್ಲಿ ಕುಣಿದು ಕುಪ್ಪಳಿಸಿದ ವರ್ಷ. ಕಾಲ್ತುಳಿತದಲ್ಲಿ ಅಭಿಮಾನಿಗಳು ತಮ್ಮ ಪ್ರಾಣ ಬಿಟ್ಟ ವರ್ಷ. ಹೀಗೆ ಆರ್ಸಿಬಿ ಪಾಲಿಗೆ ಈ ವರ್ಷ ನೋವು ನಲಿವಿನಿಂದ ಕೂಡಿತ್ತು. ವಿರಾಟ್ ಕೊಹ್ಲಿ ಅವರ ಪಾಲಿಗೂ ಈ ವರ್ಷ ತುಂಬಾ ವಿಶೇಷವಾಗಿತ್ತು. ಐಪಿಎಲ್ ಸೀಸನ್ ಶುರುವಾದಗಿನಿಂದಲೂ ಒಂದೇ ತಂಡದ ಪರ ಆಡಿದ್ದ ಕಿಂಗ್ ಅವರ ಹಲವು ವರ್ಷಗಳ ಕನಸ್ಸು ನನಸ್ಸಾಗಿದ್ದ ವರ್ಷವಾಗಿತ್ತು.
ಈ ಎಲ್ಲಾ ವಿಚಾರಗಳ ನಡುವೆ 2026ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಬೆಂಗಳೂರು ತಂಡದ ಪರ ಆಡೋದಿಲ್ವಾ? ಎನ್ನುವ ಸುದ್ದಿ ಸದ್ಯ ಕೇಳಿಬರುತ್ತಿದೆ. ಆರ್ಸಿಬಿ ತಂಡದಲ್ಲಿ ವಿರಾಟ್ ಮುಂದುವರೆಯೋದಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಚಿಂತೆಯನ್ನುಂಟು ಮಾಡಿದೆ. ಅಷ್ಟಕ್ಕೂ ಇಂತಹದ್ದೊಂದು ಊಹಾಪೋಹ ಶುರುವಾಗಲು ಕಾರಣ ಏನು? ಹಾಗಾದ್ರೆ ನಿಜವಾಗಿಯೂ ವಿರಾಟ್ ಕೊಹ್ಲಿ ಬೆಂಗಳೂರು ತಂಡದಲ್ಲಿ ಮುಂದುವರೆಯೊಲ್ವಾ? ಮುಂದೆ ಓದಿ..
ವಿರಾಟ್ ಕೊಹ್ಲಿ ಅವರು ಆರ್ಸಿಬಿ ತಂಡದಲ್ಲಿ ಮುಂದಿನ ವರ್ಷ ಐಪಿಎಲ್ ಸೀಸನ್ ಆಡುತ್ತಾರಾ? ಎಂಬುದರ ಕುರಿತು ಮಾತನಾಡಿದ ಪತ್ರಕರ್ತ ರೋಹಿತ್ ಜುಗ್ಲಾನ್ "2026ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಒಂದು ಬ್ರ್ಯಾಂಡ್ನೊಂದಿಗಿನ ತಮ್ಮ ಒಪ್ಪಂದವನ್ನು ನವೀಕರಣ ಮಾಡಬೇಕಿತ್ತು, ಆದರೆ ಆ ನವೀಕರಣವನ್ನು ಅವರು ಮಾಡಿಲ್ಲ. ಇದು ಇಲ್ಲಿಯವರೆಗೂ ನನಗೆ ಸಿಕ್ಕಿರುವ ಮಾಹಿತಿ" ಎಂದಿದ್ದಾರೆ.
ಸಿಬಿ ಫ್ರಾಂಚೈಸಿ ಆಗಲಿ ಅಥವಾ ವಿರಾಟ್ ಕೊಹ್ಲಿ ಆಗಲಿ ಈ ಕುರಿತು ಇಲ್ಲಿಯವರೆಗೂ ಯಾವುದೇ ಸ್ಪಷ್ಟನೆ ಆಗಲಿ ಅಧಿಕೃತ ಮಾಹಿತಿಯನ್ನಾಗಲೀ ಕೊಟ್ಟಿಲ್ಲ. ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈ ಬಿಟ್ಟ ನಂತರ ಆರ್ಸಿಬಿ ತಂಡ ವಿರಾಟ್ ಕೊಹ್ಲಿಗೆ ತಂಡದ ನಾಯಕತ್ವದ ಆಫರ್ ಅನ್ನು ಕೊಟ್ಟಿತ್ತು, ಆದರೆ ಕೊಹ್ಲಿ ಅದನ್ನು ತಿರಸ್ಕರಿಸಿ, ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಜವಬ್ದಾರಿಯನ್ನು ನೀಡಿದ್ದರು. ಇದು ಕೊಹ್ಲಿಯವರ ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿತ್ತು, ಈ ಮೂಲಕ ವಿರಾಟ್ ಕೊಹ್ಲಿಅವರ ವರ್ಷಗಳ ಕನಸ್ಸು ನನಸ್ಸಾಗಿತ್ತು ಎಂದು ಜುಗ್ಲಾನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
"ಮಹೇಂದ್ರ ಸಿಂಗ್ ಧೋನಿ ಅವರು 2020 ರಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದ ನಂತರವೂ ಕೂಡ ಕಳೆದ ವರ್ಷದ ವರೆಗೂ ಅವರು ಐಪಿಎಲ್ನಲ್ಲಿ ಮುಂದುವರೆದಿದ್ದಾರೆ. ಅವರನ್ನು ನಾನು ದೂಷಿಸುತ್ತಿಲ್ಲ, ಅದು ಅವರ ಇಚ್ಛೆ ಆದರೆ, ವಿರಾಟ್ ಕೊಹ್ಲಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದು, ಇನ್ನು ಅವರು ದೀರ್ಘಕಾಲ ಮುಂದುವರೆಯುವ ಸಾಧ್ಯತೆ ಇಲ್ಲ ಎಂದು ತೋರುತ್ತಿದೆ" ಎಂದರು.
ಹಿಂದೆ ವಿರಾಟ್ ಕೊಹ್ಲಿ "ನಾನೊಮ್ಮೆ ಬ್ಯಾಟ್ ಕೆಳಕ್ಕಿಟ್ಟರೆ ಮತ್ತೆ ಬ್ಯಾಟ್ ಮೇಲಕ್ಕೆತ್ತುವ ಸಾಧ್ಯತೆಯೇ ಇಲ್ಲ ಎಂದಿದ್ದರು". ಸದ್ಯ ಲಂಡನ್ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿ, ಮುಂದಿನ ವರ್ಷ ಐಪಿಎಲ್ನಲ್ಲಿ ಮುಂದುವರೆಯುತ್ತಾರಾ? ಇಲ್ವಾ? ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ. ಇನ್ನು ಮುಂದೆ ಏನೆಲ್ಲಾ ಬೆಳವಣಿಗೆ ನಡೆಯಲಿದೆ? ಎಂಬುದನ್ನು ಕಾದು ನೋಡಬೇಕಿದೆ.