)
Rohit Sharma record against Australia: ಟೀಂ ಇಂಡಿಯಾದ ಹಿರಿಯ ಆಟಗಾರ ರೋಹಿತ್ ಶರ್ಮಾ ಅಪರೂಪದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಆಸೀಸ್ ವಿರುದ್ಧ 1000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಡಿಲೇಡ್ನಲ್ಲಿ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ ಇತಿಹಾಸ ಸೃಷ್ಟಿಸಿದ್ದು, ಈ ಮೂಲಕ ತಮ್ಮ 59 ನೇ ಅರ್ಧಶತಕ ಪೂರೈಸಿದ್ದಾರೆ.
ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಎರಡು ರನ್ ಗಳಿಸುವ ಮೂಲಕ ಹಿಟ್ಮ್ಯಾನ್ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ನಂತರ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಇದ್ದಾರೆ.
ಆಸೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳು ಇವರು..
1. ರೋಹಿತ್ ಶರ್ಮಾ-1000* ರನ್ಗಳು
2. ವಿರಾಟ್ ಕೊಹ್ಲಿ-802 ರನ್ಗಳು
3. ಸಚಿನ್ ತೆಂಡೂಲ್ಕರ್-740 ರನ್ಗಳು
4. ಎಂಎಸ್ ಧೋನಿ-684 ರನ್ಗಳು
ಒಟ್ಟಾರೆಯಾಗಿ, ರೋಹಿತ್ ಶರ್ಮಾ ದಾಖಲೆ ಸಾಧಿಸಿದ ಐದನೇ ಆಟಗಾರರಾಗಿದ್ದಾರೆ. ರೋಹಿತ್ಗಿಂತ ಮೊದಲು, ವಿವ್ ರಿಚರ್ಡ್ಸ್, ಡೆಸ್ಮಂಡ್ ಹೇನ್ಸ್, ಕುಮಾರ್ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಈ ಸಾಧನೆ ಮಾಡಿದ್ದರು.