ಸನತ್ ಜಯಸೂರ್ಯ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಅದ್ಭುತ ಶತಕ ಬಾರಿಸಿದರು.

Last Updated : Dec 18, 2019, 04:43 PM IST
ಸನತ್ ಜಯಸೂರ್ಯ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ title=

ನವದೆಹಲಿ: ಭಾರತದ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ(Rohit Sharma) ಶ್ರೀಲಂಕಾದ ಸನತ್ ಜಯಸೂರ್ಯ (28) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ(Rohit Sharma) 107 ಎಸೆತಗಳಲ್ಲಿ ಒಂದು ಶತಕವನ್ನು ಪೂರೈಸಿದರು. ಇದು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದಲ್ಲಿ 28 ನೇ ಶತಕವಾಗಿದೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ(Hashim Amla) ಅವರನ್ನು ಹಿಂದಿಕ್ಕಿದ್ದಾರೆ. 

ವಿಶಾಖಪಟ್ಟಣಂನಲ್ಲಿ ಬುಧವಾರ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭಿಕ ಓಪನರ್ ಕೆ.ಎಲ್.ರಾಹುಲ್ ಅವರೊಂದಿಗೆ 200 ಕ್ಕೂ ಹೆಚ್ಚು ರನ್ಕಲೆಹಾಕಿದ್ದಾರೆ. ಈ ಪಾಲುದಾರಿಕೆಯ ಸಮಯದಲ್ಲಿ, ಕೆಎಲ್ ರಾಹುಲ್ ಆರಂಭದಲ್ಲಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ರೋಹಿತ್‌ಗೆ ಮೊದಲೇ ರಾಹುಲ್ ಅರ್ಧಶತಕವನ್ನು ಪೂರೈಸಿದರು. ಇಬ್ಬರೂ ಆಟಗಾರರು 80–80 ಸ್ಕೋರ್ ದಾಟಿದಾಗ, ರೋಹಿತ್ ಶರ್ಮಾ ಹೆಚ್ಚು ಆಕ್ರಮಣಕಾರಿಯಾಗಿ ಆಡಲು ಪ್ರಾರಂಭಿಸಿದರು. ಒಂದು ಸಮಯದಲ್ಲಿ ಅವರು 99 ಎಸೆತಗಳಲ್ಲಿ 86 ರನ್ ಆಡುತ್ತಿದ್ದರು. ಮುಂದಿನ 14 ರನ್ ಗಳಿಸಲು ಕೇವಲ ಎಂಟು ಎಸೆತಗಳನ್ನು ತೆಗೆದುಕೊಂಡ ಅವರು 107 ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು.

ಇದು ರೋಹಿತ್ ಶರ್ಮಾ ಅವರ 220 ನೇ ಏಕದಿನ ಪಂದ್ಯವಾಗಿದೆ. ಈ ಪಂದ್ಯಗಳಲ್ಲಿ ಅವರು 28 ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿದ ಹಾಶಿಮ್ ಆಮ್ಲಾ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ಈಗ ಹೆಚ್ಚು ಶತಕಗಳಿಸಿದ ದಾಖಲೆ ನಿರ್ಮಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ (28) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಗ  'ಹಿಟ್‌ಮ್ಯಾನ್' ರೋಹಿತ್ ಶರ್ಮಾರ ಮುಂದಿನ ಗುರಿ ರಿಕಿ ಪಾಂಟಿಂಗ್. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಏಕದಿನ ಕ್ರಿಕೆಟ್‌ನಲ್ಲಿ 30 ಶತಕಗಳನ್ನು ಬಾರಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಗಳಿಸುವ ದೃಷ್ಟಿಯಿಂದ ರೋಹಿತ್ ಶರ್ಮಾ ಈಗ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರಿಕಿ ಪಾಂಟಿಂಗ್ ಮಾತ್ರ ಅವರಿಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 49 ಶತಕಗಳ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ 43 ಶತಕಗಳನ್ನು ಬಾರಿಸಿದ್ದಾರೆ. ರಿಕಿ ಪಾಂಟಿಂಗ್ 30 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
 

Trending News