ರೋಹಿತ್ ಶರ್ಮಾ ಶತಕ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತ

ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ.

Updated: Oct 19, 2019 , 02:30 PM IST
 ರೋಹಿತ್ ಶರ್ಮಾ ಶತಕ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತ
Photo courtesy: Twitter

ನವದೆಹಲಿ: ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭದಲ್ಲೇ ರಬಾಡಾ ದಾಳಿಗೆ ತತ್ತರಿಸಿ 39 ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಪಡೆದುಕೊಂಡಿತು. ತದನಂತರ ರೋಹಿತ್ ಶರ್ಮಾ ಅವರ ಶತಕ (108) ಹಾಗೂ ಅಜಿಂಕ್ಯಾ ರಹಾನೆ ಅವರ ಅರ್ಧಶತಕದ ನೆರವಿನಿಂದ ಈಗ 205 ರನ್ ಗಳಿಸಿದೆ.

ಕಳೆದ ಬಾರಿ ಮಿಂಚಿದ್ದ ಮಾಯಾಂಕ್ ಅಗರ್ವಾಲ್ ಅವರು ಇಂದು 10 ರನ್ ಗಳಾಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರೆ ನಾಯಕ ಕೊಹ್ಲಿ  12 ಹಾಗೂ ಚೇತೆಶ್ವರ್ ಪೂಜಾರ್ ಅವರು ಶೂನ್ಯಕ್ಕೆ ಔಟಾದರು. ಭಾರತ ಈಗ ಮೂರು ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.ಅಷ್ಟೇ ಅಲ್ಲದೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನದಲ್ಲಿದೆ.