Rohit Sharma statement on retirement: 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಪ್ರಶಸ್ತಿಯನ್ನು ಗೆದ್ದಿದೆ. ದೊಡ್ಡ ಐಸಿಸಿ ಟೂರ್ನಮೆಂಟ್‌ನಲ್ಲಿನ ಯಶಸ್ಸಿನಿಂದ ನಾಯಕ ರೋಹಿತ್ ಶರ್ಮಾ ಸಂತೋಷಗೊಂಡಿದ್ದರು. ಈ ಪಂದ್ಯದ ನಂತರ, ಮಾತನಾಡಿರುವ ಅವರು ತಮ್ಮ ನಿವೃತ್ತಿ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ: IND vs NZ Final: 25 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡು ಚಾಂಪಿಯನ್ ಆದ ಟೀಂ ಇಂಡಿಯಾ!
ತಮ್ಮ ಬ್ಯಾಟಿಂಗ್ ಬಗ್ಗೆ ಮೊದಲಿಗೆ ಮಾತನಾಡಿದ ಅವರು, "ಇದು ನನ್ನ ನೈಸರ್ಗಿಕ ಶೈಲಿಯಲ್ಲ, ಆದರೆ ನಾನು ಇಂತಹ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸಿದ್ದೆ. ಹೊಸದನ್ನು ಪ್ರಯತ್ನಿಸುವಾಗ, ತಂಡ ಮತ್ತು ನಿರ್ವಹಣೆಯ ಬೆಂಬಲವನ್ನು ಹೊಂದಿರುವುದು ಮುಖ್ಯ. ನಾನು ಮೊದಲು ರಾಹುಲ್ ಭಾಯ್ ಜೊತೆ ಮಾತನಾಡಿದ್ದೆ, ಈಗ ಗೌತಿ ಭಾಯ್ ಜೊತೆಯೂ ಮಾತನಾಡಿದ್ದೇನೆ. ಇದು ನಾನು ನಿಜವಾಗಿಯೂ ಮಾಡಲು ಬಯಸಿದ್ದ ವಿಷಯವಾಗಿತ್ತು. ಇಷ್ಟು ವರ್ಷಗಳ ಕಾಲ ನಾನು ವಿಭಿನ್ನ ಶೈಲಿಯಲ್ಲಿ ಆಡಿದ್ದೇನೆ, ಆದರೆ ಈಗ ಈ ಹೊಸ ವಿಧಾನದಿಂದ ನಮಗೆ ಉತ್ತಮ ಫಲಿತಾಂಶಗಳು ಸಿಗುತ್ತಿವೆ" ಎಂದಿದ್ದಾರೆ.
"ನಾವು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಮೊದಲ 5-6 ಓವರ್‌ಗಳಲ್ಲಿ ಹೇಗೆ ಆಡಬೇಕೆಂದು ನನಗೆ ಅದಾಗಲೇ ಸ್ಪಷ್ಟವಾಗಿತ್ತು. ನಾನು ಈ ಹಿಂದೆಯೂ ಇದೇ ರೀತಿ ಕೆಲಸ ಮಾಡಿದ್ದೇನೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸುವುದು ಮುಖ್ಯ. ನಮಗೆ ಬ್ಯಾಟಿಂಗ್‌ನಲ್ಲಿ ಹಿಡಿತವಿದೆ. ಅದು ನನಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯವನ್ನು ನೀಡುತ್ತದೆ" ಎಂದರು.
ಇದನ್ನೂ ಓದಿ: ರೈಲು ತಲೆ ಮೇಲೆ ಹಾದು ಹೋದರೂ ಮೃತ್ಯುಂಜಯನಂತೆ ಎದ್ದು ಬಂದ ಕುಡುಕ ಮಹಾಶಯ !ಇದು ಮದ್ಯದ ಪವರಾ ಎನ್ನುತ್ತಿರುವ ವಿಡಿಯೋ ವೀಕ್ಷಕರು !
ಇದಾದ ಬಳಿಕ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ ಅವರು, "ಇನ್ನೊಂದು ವಿಷಯ... ನಾನು ಎಲ್ಲಿಗೂ ಹೋಗುತ್ತಿಲ್ಲ, ಈ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ"ಎಂದು ಹೇಳುತ್ತಾ ಈ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









