)
Rohit Sharma : ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಮೂರನೇ ಬಾರಿಗೆ ವಿಶ್ವಕಪ್ನ ಫೈನಲ್ಗೆ ಅರ್ಹತೆ ಪಡೆದಿದ್ದು, ಈಗ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಮಧ್ಯೆ, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರೋಹಿತ್ ಶರ್ಮಾ ಮಹಿಳಾ ಕ್ರಿಕೆಟಿಗನೊಂದಿಗೆ ಚಾಟ್ ಮಾಡುತ್ತಿದ್ದಾರೆ. ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ಕನಸು. ಪುರುಷ ಮತ್ತು ಮಹಿಳಾ ತಂಡಗಳ ನಡುವೆ ಒಂದು ಸಾಮಾನ್ಯ ವಿಷಯವೆಂದರೆ, ತಂಡಗಳು ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಸೋಲುತ್ತಿವೆ. ಪುರುಷರ ತಂಡ ಸೆಮಿಫೈನಲ್ನಲ್ಲಿ ಸೋಲುತ್ತದೆ, ಮಹಿಳಾ ತಂಡವೂ ಸಹ ಫೈನಲ್ನಲ್ಲಿ ಸೋಲುತ್ತಿದೆ. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ನಾವು ಫೈನಲ್ನಲ್ಲಿ ಸೋತಿದ್ದೇವೆ. ಆದರೆ, ಆ ಲೀಗ್ನಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. 2019 ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯವನ್ನು ಸೋತಿದ್ದೇವೆ, ಅದರ ನಂತರ, ಒಂದು ಪಂದ್ಯವನ್ನು ಸೋತಿಲ್ಲ. ಆದರೆ ಸೆಮಿಫೈನಲ್ನಲ್ಲಿ ಗೆಲ್ಲಲು ಆಗಲಿಲ್ಲ ಎಂದು ರೋಹಿತ್ ಶರ್ಮಾ ಈ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ:ಹರ್ಮನ್ಪ್ರೀತ್ ಮತ್ತು ಜೆಮಿಯಾ ಜೊತೆಯಾಟದ ಕಮಾಲ್
🚨 WOMEN WORLD CUP 25 🚨
Rohit Sharma has designed the plan & script to win the Women World Cup and sharing with Smriti Mandhana and Jemimah Rodrigues.
'Hitman' Rohit Sharma 🔥 🥵 @ImRo45 pic.twitter.com/Qd2lFkfiOi
— Hitman 🇮🇳 Lover 🇮🇳 (@ILoveYouJanu68) October 30, 2025
ಫೈನಲ್ಗೆ ಮುನ್ನ ನಾವು ಚೆನ್ನಾಗಿ ತಯಾರಿ ನಡೆಸಬೇಕು. ಎರಡೂ ತಂಡಗಳು ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಪುರುಷರ ತಂಡ ಮಹಿಳಾ ತಂಡಕ್ಕೆ ಸವಾಲು ಹಾಕಬೇಕು ಮತ್ತು ಮಹಿಳಾ ತಂಡ ಪುರುಷರ ತಂಡಕ್ಕೆ ಸವಾಲು ಹಾಕಬೇಕು. ಇದು ಪರಸ್ಪರರ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರೋಹಿತ್ ಶರ್ಮಾ ಮಹಿಳಾ ತಂಡಕ್ಕೆ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ..
ಪ್ರಸ್ತುತ ಹಿಟ್ಮ್ಯಾನ್, ಸ್ಮೃತಿ ಮಂಧಾನ ಮತ್ತು ಜೆಮಿಮಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳಾ ತಂಡಕ್ಕೆ ರೋಹಿತ್ ಶರ್ಮಾ ಸ್ಕ್ರಿಪ್ಟ್ ಬರೆದಿದ್ದಾರಾ? ಎನ್ನುವ ಸಂಶಯಕ್ಕೆ ಈ ಕ್ಲಿಪ್ ಕಾರಣವಾಗಿದೆ. ಸತ್ಯ ಎನಪ್ಪಾ ಅಂದ್ರೆ, ಈ ವಿಡಿಯೋ ನಾಲ್ಕರಿಂದ ಐದು ವರ್ಷ ಹಳೆಯದು.