Rohit ritika sajdeh love story : ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಇಂದು (ಏಪ್ರಿಲ್ 30) 38ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ತಮ್ಮ ನಾಯಕತ್ವದಲ್ಲಿ ಭಾರತವನ್ನು ಟಿ20 ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದ ಹಿಟ್ ಮ್ಯಾನ್, ಹಲವು ದಾಖಲೆಗಳನ್ನು ಹೊಂದಿದ್ದಾರೆ. ಮೈದಾನದಲ್ಲಿ ಅವರ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ. ಮೈದಾನದ ಹೊರಗೆಯೂ ಸಹ, ರೋಹಿತ್ ತಮ್ಮ ವಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇದೀಗ ಅವರ ಲವ್ ಸ್ಟೋರಿ ಮುನ್ನಲೆಗೆ ಬಂದಿದೆ.
ಅಂದಹಾಗೆ, ರೋಹಿತ್ ಶರ್ಮಾ ಮೊದಲು ಬೌಲರ್ ಆಗಲು ಬಯಸಿದ್ದರು. ಆಫ್-ಸ್ಪಿನ್ನರ್ ಆಗುವ ಮೂಲಕ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಬೆವರಿಳಿಸುವ ಆಸೆ ಇಟ್ಟುಕೊಂಡಿದ್ದರು. ಆದರೆ ಕೋಚ್ ದಿನೇಶ್ ಲಾಡ್ ರೋಹಿತ್ ಕೈಗೆ ಬ್ಯಾಟ್ ಕೊಟ್ಟರು. ಅಷ್ಟೇ ಈಗ ಬ್ಯಾಟ್ಸ್‌ಮನ್ 'ಹಿಟ್‌ಮ್ಯಾನ್' ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:IPL 2025: ದೆಹಲಿ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ಗೆ 14 ರನ್‌ಗಳ ರೋಚಕ ಜಯ
ರೋಹಿತ್ ಮತ್ತು ರಿತಿಕಾ ಸಜ್ದೇ ಅವರ ಪ್ರೇಮಕಥೆ ಯಾವ ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ. ರಿತಿಕಾ ಮೊದಲು ರೋಹಿತ್‌ನ ಮ್ಯಾನೇಜರ್ ಆಗಿದ್ದರು. ಈಗ ಬಾಳ ಸಂಗಾತಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ.. ಇಂದು ರೋಹಿತ್ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಅವರ ಲವ್ ಸ್ಟೋರಿ ವೈರಲ್ ಆಗುತ್ತಿದೆ.
ರಿತಿಕಾ ಯುವರಾಜ್ ಸಿಂಗ್ ಅವರ ಸಹೋದರಿ... ಒಡ ಹುಟ್ಟಿದವರಲ್ಲದಿದ್ದರೂ ಅಣ್ಣ-ತಂಗಿಯಂತಿದ್ದರು. 2008 ರಲ್ಲಿ ಬ್ರಾಂಡ್ ಶೂಟಿಂಗ್ ಸಮಯದಲ್ಲಿ ಯುವರಾಜ್ ಮೂಲಕ ರೋಹಿತ್ ಮತ್ತು ರಿತಿಕಾ ಮೊದಲ ಬಾರಿಗೆ ಭೇಟಿಯಾದರು. ಇದಾದ ನಂತರ, ಇಬ್ಬರು ಹಲವಾರು ಬಾರಿ ಮೀಟ್ ಆಗಿದ್ದರು, ಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಗಲು ಪ್ರಾರಂಭಿಸಿತು.
ಆರು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಂತರ, ರೋಹಿತ್ ರಿತಿಕಾಗೆ ಮುಂಬೈನ ಬೊರಿವಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದರು. ಬೊರಿವಲಿ.. ರೋಹಿತ್ 11 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಮೈದಾನ ಎಂಬುವುದು ವಿಶೇಷ. ರಿತಿಕಾ ರೋಹಿತ್ ಪ್ರಪೋಸಲ್ ಒಪ್ಪಿಕೊಂಡರು. ಅದರಂತೆ.. ಡಿಸೆಂಬರ್ 13, 2015 ರಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









