)
ಇಂದು ಮಧ್ಯಾಹ್ನ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ ನಡೆಯಲಿದೆ. ಈಗಾಗಲೇ ಟೆಸ್ಟ್ ಸರಣಿ ಸೋತಿರುವ ಟೀಮ್ ಇಂಡಿಯಾ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಇನ್ನು ರಾಂಚಿ ಮೈದಾನದಲ್ಲಿ ನಡೆಯುವ ಈ ಪಂದ್ಯದಲ್ಲಿ ಓಪನರ್ ರೋಹಿತ್ ಶರ್ಮಾ ಅವರು ವಿಶ್ವದಾಖಲೆ ಬರೆಯಲಿದ್ದಾರೆ.
ಟೀಮ್ ಇಂಡಿಯಾದ ಯಶಸ್ವಿ ಓಪನರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸಿಕ್ಸರ್ಗಳನ್ನು ಸಿಡಿಸುವುದರಲ್ಲಿ ಎತ್ತಿದ ಕೈ. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದರೆ ಬೌಲರ್ ಅನ್ನು ಲೆಕ್ಕಿಸದೇ ಬಾಲ್ಗಳನ್ನು ಬೌಂಡರಿ ಗೆರೆ ದಾಟಿಸುತ್ತಾರೆ. ಆರಂಭದಲ್ಲಿ ತಂಡಕ್ಕೆ ಹೆಚ್ಚು ರನ್ ತಂದು ಕೊಡುವ ರೋಹಿತ್ ಶರ್ಮಾ, ಇಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ದಾಖಲೆಯನ್ನು ಬ್ರೇಕ್ ಮಾಡಲಿದ್ದಾರೆ.
ಒಡಿಐ ಪಂದ್ಯದಲ್ಲಿ ಈ ವರೆಗೆ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಒಟ್ಟು 351 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ವಿಶ್ವದಲ್ಲೇ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ ರೋಹಿತ್ ಇದ್ದಾರೆ. ರೋಹಿತ್ ಶರ್ಮಾ ಒಟ್ಟು 349 ಸಿಕ್ಸರ್ಗಳನ್ನು ಗಳಿಸಿದ್ದಾರೆ. ಒಂದು ವೇಳೆ ಇಂದು ನಡೆಯುವ ಪಂದ್ಯದಲ್ಲಿ ರೋಹಿತ್ ಕೇವಲ ಮೂರು ಸಿಕ್ಸರ್ಗಳನ್ನು ಬಾರಿಸಿದರೆ ವಿಶ್ವದಲ್ಲೇ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.
ಸದ್ಯ ರೋಹಿತ್ ಶರ್ಮಾ ಬ್ಯಾಟಿಂಗ್ ಫಾರ್ಮ್ ಚೆನ್ನಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಒಡಿಐ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಒಂದು ಹಾಫ್ಸೆಂಚುರಿ ಹಾಗೂ ಒಂದು ಸೆಂಚುರಿ ಸಿಡಿಸಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧವೂ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ರೋಹಿತ್ ಶರ್ಮಾ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ರೆ ಅಭಿಮಾನಿಗಳಿಗೂ ಸಖತ್ ಎಂಜಾಯ್ಮೆಂಟ್ ಸಿಗುತ್ತದೆ.
ODI ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಸ್ ಬಾರಿಸಿದ ಬ್ಯಾಟರ್ಸ್
ಪಾಕಿಸ್ತಾನದ ಶಾಹಿದ್ ಅಫ್ರಿದಿ- 351 ಸಿಕ್ಸರ್ಸ್
ಭಾರತದ ರೋಹಿತ್ ಶರ್ಮಾ- 349 ಸಿಕ್ಸರ್ಗಳು
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್- 331 ಸಿಕ್ಸರ್ಸ್
ಶ್ರೀಲಂಕಾದ ಸನತ್ ಜಯಸೂರ್ಯ- 270 ಸಿಕ್ಸರ್ಗಳು
ಭಾರತದ ಎಂಎಸ್ ಧೋನಿ- 229 ಸಿಕ್ಸರ್ಗಳು