2027ರ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಗ್ಗೆ ರೋಹಿತ್‌ ಶರ್ಮಾ ಮಹತ್ವದ ಹೇಳಿಕೆ; ಹಿಟ್‌ಮ್ಯಾನ್‌ ಹೇಳಿದ್ದೇನು?

2027 Cricket World Cup: ನಾನು ಈಗ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. 2027ರ ವಿಶ್ವಕಪ್‌ಗೆ ಆಡುತ್ತೇನೆಯೇ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲು ಇಷ್ಟಪಡುವುದಿಲ್ಲವೆಂದು ರೋಹಿತ್‌ ಶರ್ಮಾ ಹೇಳಿದ್ದಾರೆ. 

Written by - Puttaraj K Alur | Last Updated : Mar 11, 2025, 07:58 PM IST
  • ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಖುಷಿಯಲ್ಲಿ ರೋಹಿತ್‌ ಶರ್ಮಾ
  • ಸೋಲಿಲ್ಲದೆ ಪ್ರತಿಷ್ಠಿತ ಸರಣಿ ಗೆಲ್ಲುವುದು ಅತಿದೊಡ್ಡ ಸಾಧನೆ ಎಂದ ಹಿಟ್‌ಮ್ಯಾನ್‌
  • 2027ರ ವಿಶ್ವಕಪ್‌ ಟೂರ್ನಿ ಆಡುವ ಬಗ್ಗೆ ರೋಹಿತ್‌ ಶರ್ಮಾ ಮಹತ್ವದ ಹೇಳಿಕೆ
 2027ರ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಗ್ಗೆ ರೋಹಿತ್‌ ಶರ್ಮಾ ಮಹತ್ವದ ಹೇಳಿಕೆ; ಹಿಟ್‌ಮ್ಯಾನ್‌ ಹೇಳಿದ್ದೇನು?
ರೋಹಿತ್‌ ಶರ್ಮಾ ಮಹತ್ವದ ಹೇಳಿಕೆ

ICC Champions Trophy 2025: ಒಂದೇ ಒಂದು ಪಂದ್ಯದಲ್ಲಿ ಸೋಲಿಲ್ಲದೆ ಪ್ರತಿಷ್ಠಿತ ಸರಣಿ ಗೆಲ್ಲುವುದು ಅತಿದೊಡ್ಡ ಸಾಧನೆ ಎಂದು ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಗೆಲುವು ಸಾಧಿಸಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. 

Add Zee News as a Preferred Source

ʼಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ನಾವು ಐದು ಟಾಸ್‌ಗಳಲ್ಲಿ ಸೋತೆವು, ಆದರೆ ಒಂದೇ ಒಂದು ಪಂದ್ಯವನ್ನು ಕಳೆದುಕೊಳ್ಳದೆ ಚಾಂಪಿಯನ್ಸ್ ಟ್ರೋಫಿ ಗೆದ್ದೆವು. ಯಾವುದೇ ಸರಣಿಯಲ್ಲಿ ಸೋಲಿಲ್ಲದೆ ಕೊನೆಯವರೆಗೆ ಹೋಗುವುದು ದೊಡ್ಡ ಸವಾಲಾಗುತ್ತದೆ. ಆದರೆ ನಾವು ಅದನ್ನು ಸಾಧಿಸಿದ್ದೇವೆ. ಚಾಂಪಿಯನ್ ಪಟ್ಟವನ್ನು ಗೆದ್ದ ನಂತರವೇ ಇದರ ವಿಶಿಷ್ಟತೆಯನ್ನು ಅರಿತೆವು. ಇದನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ನಾವು ಪೂರ್ಣ ಪ್ರತಿಬದ್ಧತೆ ಮತ್ತು ಒಗ್ಗಟ್ಟಿನ ತಂಡವಾಗಿ ಆಡಿದೆವು. ಪ್ರತಿಯೊಬ್ಬರೂ ತಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಅರಿತು ಕಾರ್ಯನಿರ್ವಹಿಸಿದರು. ಮೈದಾನದಲ್ಲಿ ಭಾವನೆಗಳು ಉಕ್ಕಿ ಹರಿಯಬಹುದು, ಆದರೆ ನಾವು ಆಟದ ಮೇಲಿನ ಪ್ರತಿಬದ್ಧತೆಯೊಂದಿಗೆಯೇ ಕಾರ್ಯನಿರ್ವಹಿಸುತ್ತೇವೆ. ನಮ್ಮ ತಂಡದ ಮುಖ್ಯ ಗುರಿ ಗೆಲುವನ್ನು ಸಾಧಿಸುವುದಾಗಿದೆ ಮತ್ತು ಅದನ್ನು ತಲುಪಲು ಏನನ್ನಾದರೂ ಮಾಡಲು ನಾವು ಸಿದ್ಧರಿದ್ದೇವೆʼ ಎಂದಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಲ್ಲ.. ಈ ಇಬ್ಬರು ಯುವ ಆಟಗಾರರಿಗೆ ಟೀಂ ಇಂಡಿಯಾ ಬಾಗಿಲು ಬಂದ್!‌?   

ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿ ಬಗ್ಗೆ ರೋಹಿತ್‌ ಹೇಳಿದ್ದೇನು?

ʼಜಸ್‌ಪ್ರೀತ್ ಬುಮ್ರಾ ತಂಡದಲ್ಲಿ ಇಲ್ಲ ಎಂಬುದನ್ನು ಮನಗಂಡು ಮುಂಚಿತವಾಗಿ ನಾವು ಸಿದ್ಧತೆ ಮಾಡಿಕೊಂಡಿದ್ದೆವು. ಅವರ ಗಾಯ ಸಂಪೂರ್ಣವಾಗಿ ಗುಣವಾಗಬೇಕಿತ್ತು, ಏಕೆಂದರೆ ಅವರು ಇನ್ನೂ ಹಲವು ವರ್ಷಗಳ ಕಾಲ ಆಡಬೇಕಿರುವ ವೇಗದ ಬೌಲರ್. ಈ ಕೊರತೆಯನ್ನು ಹೇಗೆ ಸರಿದೂಗಿಸುವುದು ಎಂದು ಯೋಜನೆ ಮಾಡುವಾಗ, ಮೊಹಮ್ಮದ್ ಶಮಿ ನಮ್ಮ ಬಳಿ ಇದ್ದದ್ದು ದೊಡ್ಡ ಬಲವಾಗಿತ್ತು. ಐಸಿಸಿ ಟೂರ್ನಿಗಳಲ್ಲಿ ಅವರು ತೋರಿದ ಪ್ರದರ್ಶನವನ್ನು ಯೋಚಿಸಿದರೆ, ಅವರು ಯಾವಾಗಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್ ತಂಡದ ವಿರುದ್ಧ ಅವರು ಆಡಿದ ಎರಡು ಪಂದ್ಯಗಳು ನಮಗೆ ಆತ್ಮವಿಶ್ವಾಸ ತುಂಬಿದವು. ಇದರ ಜೊತೆಗೆ ಅರ್ಶ್‌ದೀಪ್ ಮತ್ತು ಹರ್ಷಿತ್‌ರಂತಹ ಬೌಲರ್‌ಗಳ ಮೇಲೆ ನಾವು ಸಂಪೂರ್ಣ ವಿಶ್ವಾಸವಿಟ್ಟಿದ್ದೆವು. ಪಂದ್ಯಕ್ಕೆ ಮುನ್ನ ಇದ್ದ 20-25 ದಿನಗಳನ್ನು ಅಭ್ಯಾಸಕ್ಕೆ ಮತ್ತು ಮೈದಾನದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಬಳಸಿಕೊಂಡೆವು. ಈ ವ್ಯವಸ್ಥಿತ ವಿಧಾನಗಳೇ ಬುಮ್ರಾ ಇಲ್ಲದಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿದವುʼ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ.

2015ರ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರದ ಬದಲಾವಣೆ ಏನು?

"ಇದನ್ನು ನಾವು ತಂಡದೊಳಗೆ ದೀರ್ಘಕಾಲದಿಂದ ಚರ್ಚಿಸುತ್ತಿದ್ದೇವೆ. ಹಲವು ಬಾರಿ ಅಂತಿಮ ಹಂತವನ್ನು ತಲುಪಿದ್ದೇವೆ, ಆದರೆ ಗೆಲ್ಲಲು ಸಾಧ್ಯವಾಗಿಲ್ಲ. 2015ರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ಆಗ ಮಾಡದ ತಪ್ಪುಗಳನ್ನು ಮಾಡಿಬಿಟ್ಟೆವು. ಅಂತಹ ಸ್ಥಿತಿಯೇ 2016 ಮತ್ತು 2017ರಲ್ಲೂ ಉಂಟಾಯಿತು. 2023ರ ವಿಶ್ವಕಪ್‌ನಲ್ಲಿ ಮೊದಲ ಒಂಬತ್ತು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆವು, ಆದರೆ ಫೈನಲ್‌ನಲ್ಲಿ ಸೋತೆವು. 2019ರ ವಿಶ್ವಕಪ್‌ನಲ್ಲಿ ನಾನು ಐದು ಶತಕಗಳನ್ನು ಗಳಿಸಿದ್ದೆ, ಆದರೆ ತಂಡ ಗೆಲ್ಲದಿದ್ದಾಗ ಆ ಸಾಧನೆಗೆ ಮಹತ್ವವಿಲ್ಲ. ಆ ನಂತರ ತಂಡದ ಯೋಚನೆಗಳನ್ನು ಬದಲಾಯಿಸಲು ಪ್ರಯತ್ನಿಸಿದೆವು. ಪ್ರತಿಯೊಬ್ಬರೂ ಗೆಲುವನ್ನು ಮಾತ್ರ ಗುರಿಯಾಗಿಟ್ಟುಕೊಳ್ಳಬೇಕೆಂದು ಹೇಳುತ್ತಿದ್ದೆವು. ಈ ಹೊಸ ವಿಧಾನವನ್ನು ಸಂಪೂರ್ಣವಾಗಿ ಸ್ವೀಕರಿಸುವ ಸ್ಥಿತಿಗೆ ಎಲ್ಲರೂ ಬಂದದ್ದೇ ಗೆಲುವಿನ ಕಾರಣವಾಯಿತುʼ ಎಂದು ರೋಹಿತ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಧೋನಿ ಮಾತ್ರವಲ್ಲ... 4 ಸೂಪರ್‌ಸ್ಟಾರ್ ಆಟಗಾರರ ವೃತ್ತಿಜೀವನವೂ ಐಪಿಎಲ್‌ 2025ರ ಬಳಿಕ ಕೊನೆಯಾಗುವುದು

ಭಾರತ ತಂಡವನ್ನು ಇತರ ತಂಡಗಳು ಹೇಗೆ ನೋಡಬೇಕು?

"ಇತರ ತಂಡಗಳು ನಮ್ಮನ್ನು ಹೇಗೆ ನೋಡಬೇಕೆಂದು ನಾನು ಒತ್ತಾಯಪೂರ್ವಕವಾಗಿ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಒಂದೇ ಒಂದು ವಿಷಯ ಹೇಳಬೇಕಂದರೆ, ನಮ್ಮನ್ನು ಯಾವ ಸಮಯದಲ್ಲೂ ಹಗುರವಾಗಿ ತೆಗೆದುಕೊಳ್ಳಬಾರದು. ಐದು ವಿಕೆಟ್‌ಗಳು ಬಿದ್ದ ನಂತರವೂ ನಾವು ಪುಟಿದೆದ್ದು ಬರುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಮೈದಾನದಲ್ಲಿ ನಮ್ಮ ತಂಡಕ್ಕೆ ಯಾವಾಗಲೂ ಒಂದು ಹೋರಾಟವೇ ಇರುತ್ತದೆ. ನಾವು ಯಾವಾಗಲೂ ದೃಢತೆಯಿಂದ ಆಡುತ್ತೇವೆ, ಯಾವ ಸ್ಥಿತಿಯಿಂದಲಾದರೂ ಗೆಲ್ಲುವ ಸಾಮರ್ಥ್ಯ ನಮ್ಮಲ್ಲಿದೆ ಎಂಬುದನ್ನು ತೋರಿಸಲು ಬಯಸುತ್ತೇವೆ. ಅಂತಹ ಮಟ್ಟದಲ್ಲಿ ಸಂಘಟಿತ ತಂಡವಾಗಿ ಮತ್ತು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರಿತವರಾಗಿ ಕಾರ್ಯನಿರ್ವಹಿಸುತ್ತೇವೆ. ನಮ್ಮನ್ನು ಎದುರಿಸುವ ತಂಡಗಳು ಯಾವಾಗಲೂ ಸಂಪೂರ್ಣವಾಗಿ ನಮ್ಮನ್ನು ಸಮೀಪಿಸಬೇಕೆಂಬುದೇ ನಮ್ಮ ಗುರಿʼ ಎಂದು ರೋಹಿತ್‌ ಹೇಳಿದ್ದಾರೆ.

ಭಾರತ ತಂಡದೊಂದಿಗಿನ ನಿಮ್ಮ ಭವಿಷ್ಯ?

"ನಾನು ಈಗ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. 2027ರ ವಿಶ್ವಕಪ್‌ಗೆ ಆಡುತ್ತೇನೆಯೇ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಈಗ ನನ್ನ ಗಮನ ನನ್ನ ಆಟದ ಮೇಲೆ ಮತ್ತು ತಂಡದೊಂದಿಗೆ ಸಮಯವನ್ನು ಕಳೆಯುವುದರ ಮೇಲಿದೆ. ನನ್ನ ತಂಡದ ಸಹ ಆಟಗಾರರು ನನ್ನನ್ನು ತಂಡದಲ್ಲಿ ಬಯಸುತ್ತಾರೆಯೇ ಎಂಬುದೇ ನನಗೆ ಮುಖ್ಯವಾದ ವಿಷಯʼವೆಂದು ರೋಹಿತ್‌ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News