)
ರಾಯಪುರ: ಇಲ್ಲಿನ ಶಾಹಿದ್ ವೀರನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 53 ನೇ ಶತಕವನ್ನು ದಾಖಲಿಸಿದ್ದಾರೆ.
Ruturaj Gaikwad notches up a magnificent maiden ODI century 👌#INDvSA 📝: https://t.co/b4ectUVL0T pic.twitter.com/qS20xRalhr
— ICC (@ICC) December 3, 2025
ದಕ್ಷಿಣ ಆಫ್ರಿಕಾ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ಇದೆ ವೇಳೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಇನ್ನೇನು ಆರಂಭಿಕ ಆಟಗಾರರು ನೆಲೆ ಕಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ರೋಹಿತ್ ಶರ್ಮಾ(14), ಮತ್ತು ಯಶಸ್ವಿ ಜೈಸ್ವಾಲ್(22) ಅವರ ವಿಕೆಟ್ ಗಳನ್ನು 62 ರನ್ ಗಳಾಗುವಷ್ಟರಲ್ಲಿ ಕಳೆದುಕೊಂಡಿತು.ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ(102) ಹಾಗೂ ಮೊದಲ ಬಾರಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಲು ಬಂದ ರುತುರಾಜ್ ಗಾಯಕ್ವಾಡ್(105) ಭರ್ಜರಿ ಶತಕಗಳನ್ನು ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು.
ಇದೇ ಮೊದಲ ಬಾರಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಋತುರಾಜ್ ಗಾಯಕ್ವಾಡ್ ಕೇವಲ 83 ಎಸೆತಗಳಲ್ಲಿ 105 ರನ್ ಗಳನ್ನು ಗಳಿಸುವ ಮೂಲಕ 8ನೇ ಇನಿಂಗ್ಸ್ ನಲ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದರು.
Back-to-back ODI hundreds for Virat Kohli 🔥#INDvSA 📝: https://t.co/b4ectUVL0T pic.twitter.com/mCNbrJGNOL
— ICC (@ICC) December 3, 2025
ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 90 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಈ ಟೂರ್ನಿಯಲ್ಲಿ ಎರಡನೇ ಶತಕವನ್ನು ಒಟ್ಟಾರೆ 53 ಶತಕವನ್ನು ದಾಖಲಿಸಿದರು.ಈ ದಾಖಲೆಯ ಮೂಲಕ ಈಗ ಅವರು ಐಸಿಸಿ ಶ್ರೇಯಾಂಕದಲ್ಲಿಯೂ ಶುಬ್ಮನ್ ಗಿಲ್ ಅವರನ್ನು ಹಿಂದಿಕ್ಕುವ ಮೂಲಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.