)
Sachin Tendulkar and Actress Shilpa Shirodkar Dating Rumor: ಕಳೆದ ಕೆಲವು ದಿನಗಳಿಂದ, 90 ರ ದಶಕದಲ್ಲಿ ದಂತಕಥೆ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಮತ್ತು ಪ್ರಸಿದ್ಧ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ ನಡುವೆ ಪ್ರಣಯವಿತ್ತು ಎಂದು ಹೇಳಿಕೊಳ್ಳುವ ಕೆಲವು ಹಳೆಯ ವೀಡಿಯೊಗಳು ಮತ್ತು ಪೋಸ್ಟ್ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಇವರಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಸುದ್ದಿ ಎಷ್ಟು ಸತ್ಯ ಎಂಬುದನ್ನು ಮುಂದೆ ನೋಡೋಣ.
ಮಾಧ್ಯಮ ವರದಿಗಳು ಮತ್ತು ಅಧಿಕೃತ ಮೂಲಗಳ ಪ್ರಕಾರ, ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಶಿಲ್ಪಾ ಶಿರೋಡ್ಕರ್ ಅವರೊಂದಿಗೆ ಸಾರ್ವಜನಿಕವಾಗಿ ಎಂದಿಗೂ ಉಲ್ಲೇಖಿಸಲಾಗಿಲ್ಲ. ಆದರೆ ಇವರಿಬ್ಬರ ಬಗ್ಗೆ ಕೇವಲ ಗಾಸಿಪ್ ಆಗಿತ್ತು. ಇನ್ನು ರೆಡ್ ಎಫ್ಎಂಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ, ಶಿಲ್ಪಾ ಶಿರೋಡ್ಕರ್ ಹೀಗೆ ಹೇಳಿದ್ದರು:
"ನಾನು 1991 ರಲ್ಲಿ 'ಹಮ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಚಿನ್ ಅವರನ್ನು ಭೇಟಿಯಾದೆ. ಆ ಸಮಯದಲ್ಲಿ ಸಚಿನ್ ಬಾಂದ್ರಾ ಪೂರ್ವದಲ್ಲಿ ತನ್ನ ಸೋದರಸಂಬಂಧಿಯೊಂದಿಗೆ ಕ್ರಿಕೆಟ್ ಆಡುತ್ತಿದ್ದ. ನಾನು ಅವರನ್ನು ಭೇಟಿಯಾದಾಗ, ಅವರು ಈಗಾಗಲೇ ಅಂಜಲಿಯೊಂದಿಗೆ ಸಂಬಂಧ ಹೊಂದಿದ್ದರು. ಅದು ಯಾರಿಗೂ ಗೊತ್ತಿರಲಿಲ್ಲ. ನಾವು ಸ್ನೇಹಿತರಾಗಿದ್ದೇವೆ ಎಂದು ನಮಗೆ ಮಾತ್ರ ತಿಳಿದಿತ್ತು. ಒಬ್ಬ ನಟಿ, ಸ್ಟಾರ್ ಕ್ರಿಕೆಟಿಗನನ್ನು ಭೇಟಿಯಾದರೆ, ಅದು ಕೂಡ ಸಚಿನ್ ತೆಂಡೂಲ್ಕರ್ ಅವರಂತವರನ್ನು.. ಆಗ ಜನರಿಗೆ ಕಥೆಗಳನ್ನು ಕಟ್ಟುವುದು ಸುಲಭವಾಗುತ್ತದೆ, ಆದರೆ ನಾವು ಒಮ್ಮೆ ಮಾತ್ರ ಭೇಟಿಯಾಗಿದ್ದೆವು" ಎಂದಿದ್ದಾರೆ.
ಸಚಿನ್ ಸ್ಪಷ್ಟೀಕರಣ:
ಸಚಿನ್ ತೆಂಡೂಲ್ಕರ್ 1995 ರಲ್ಲಿ ವೈದ್ಯೆಯಾಗಿರುವ ಅಂಜಲಿ ತೆಂಡೂಲ್ಕರ್ ಅವರನ್ನು ವಿವಾಹವಾದರು. ಸಚಿನ್ ಅವರ ಬಳಿಕಯೂ ಈ ಹಿಂದೆ ಶಿಲ್ಪಾ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಹೀಗೆ ಹೇಳಿದರು: "ಶಿಲ್ಪಾ ಶಿರೋಡ್ಕರ್ ಮತ್ತು ನಾನು ಪರಸ್ಪರ ಚೆನ್ನಾಗಿ ತಿಳಿದಿಲ್ಲದಿದ್ದರೂ ಸಹ ಜನರು ಸಂಬಂಧ ಹೊಂದಿದ್ದೇವೆ ಎಂದು ಹೇಳುತ್ತಿದ್ದರು" ಎಂದು ಅಸಮಾಧಾನ ಹೊರಹಾಕಿದ್ದರು.
ಶಿಲ್ಪಾ ಶಿರೋಡ್ಕರ್ 1990 ರ ದಶಕದಲ್ಲಿ ಕಿಶನ್ ಕನ್ಹಯ್ಯಾ, ಹಮ್ ಮತ್ತು ಆಂಖೇನ್ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು. 2000 ನೇ ಇಸವಿಯಲ್ಲಿ, ಅವರು ಬ್ರಿಟಿಷ್ ಬ್ಯಾಂಕರ್ ಅಪರೇಶ್ ರಾಣೆ ಅವರನ್ನು ವಿವಾಹವಾಗಿ, ನಂತರ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ.