Sania Mirza: ಸಾನಿಯಾ ಮಿರ್ಜಾ ಅವರ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರಸ್ತುತ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದು ತಮ್ಮ ಮಗನೊಂದಿಗೆ ವಾಸಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅವರು, ಅಭಿಮಾನಿಗಳಿಗೆ ಆಗಾಗ ಅಪ್ಡೇಟ್ ಕೊಡುತ್ತಿರುಯತ್ತಾರೆ.
ಸಾನಿಯಾ ಮಿರ್ಜಾ ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದು, ಆಕೆಯ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೈರಲ್ ವಿಡಿಯೋವನ್ನು ಸಾನಿಯಾ ಮತ್ತು ಶೋಯೆಬ್ ಮಲಿಕ್ ಡಿವೋರ್ಸ್ ಪಡೆಯುವ ಮುನ್ನ ತೆಗೆಯಲಾಗಿದ್ದು, ಈ ಕಾರ್ಯಕ್ರಮದ ಸಮಯದಲ್ಲಿ ಸಾನಿಯಾ ಕೇಳಿದ ಪ್ರಶ್ನೆಯೊಂದು ಸಂಚಲನ ಮೂಡಿಸಿದೆ. ಸದ್ಯ ಈ ವಿಚಾರ ನೆಟ್ಟಿಗರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ.
ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೆಲೆಬ್ರಿಟಿಯೊಬ್ಬರನ್ನು 'ಮಲಗುವ ಕೋಣೆಯಲ್ಲಿ ಮಾತ್ರ ನಡೆಯುವ ಮೂರು ವಿಷಯಗಳು' ಯಾವುವು ಎಂದು ಕೇಳಿದ ಪ್ರಶ್ನೆಗೆ 'ನಾನು ಮಲಗುತ್ತೇನೆ, ಊಟ ಮಾಡುತ್ತೇನೆ ಮತ್ತು ಟಿವಿ ನೋಡುತ್ತೇನೆ' ಎಂದು ಹೇಳುವ ಮೂಲಕ ಸಾನಿಯಾ ಮಿರ್ಜಾ ಸೋಶಬ್ ಮಲಿಕ್‌ಗೆ ಆಘಾತ ನೀಡಿದರು. ಅವಳ ಉತ್ತರ ಕೇಳಿ ಇಬ್ಬರೂ ಮಲಗುವ ಕೋಣೆಯಲ್ಲಿ ಮಾಡಿದ್ದ ಕೆಲಸಗಳು ಇವೇನಾ ಎಂದು ಜನರು ನಗಲು ಆರಂಭಿಸಿದ್ದರು.
ಈ ಸಮಯದಲ್ಲಿ ಸಾನಿಯಾ ಮಿರ್ಜಾ ಹುಡುಗಿಯನ್ನು ಪ್ರಶ್ನೆ ಕೇಳಿದ್ದು " "ನೀವು ಮಲಗುವ ಕೋಣೆಯಲ್ಲಿ ಯಾವ ಸಮಯಕ್ಕೆ ಊಟ ಮಾಡುತ್ತೀರಿ?" ಎಂದು ಕೇಳಿದಾಗ ಆ ಹುಡುಗಿ ತನ್ನ ರಾತ್ರಿಯ ಅಭ್ಯಾಸಗಳ ಬಗ್ಗೆ ಹೇಳಿದಳು, ಹಾಸಿಗೆಯಲ್ಲಿ ಕುಳಿತುಕೊಳ್ಳುವುದು, ಟಿವಿ ನೋಡುವುದು ಮತ್ತು ಆಹಾರ ತಿನ್ನುವುದನ್ನು ಆನಂದಿಸುತ್ತೇನೆ ಎಂದು ಹೇಳಿದಳು. ಈ ಉತ್ತರವನ್ನು ಕೇಳಿದಾಗ, ಕಾರ್ಯಕ್ರಮದಲ್ಲಿದ್ದ ಎಲ್ಲರೂ ನಗುವುದನ್ನು ನೀವು ನೋಡಬಹುದು.
ಈ ವಿಡಿಯೋವನ್ನು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಒಟ್ಟಿಗೆ ವಾಸಿಸುತ್ತಿದ್ದಾಗ ಚಿತ್ರೀಕರಿಸಲಾಗಿದೆ. ಆ ಸಮಯದಲ್ಲಿ, ದಿ ಮಿರ್ಜಾ ಮಿಲ್ಕ್ ಶೋ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅವರಿಬ್ಬರೂ ಪ್ರಸ್ತುತ ವಿಚ್ಛೇದನ ಪಡೆದಿದ್ದಾರೆ. ಆದರೆ, ಈ ಹಳೆಯ ವಿಡಿಯೋ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾನಿಯಾ ಮಿರ್ಜಾ ತಮ್ಮ ಟೆನಿಸ್ ಸಾಧನೆಗಳಿಗೆ ಮಾತ್ರವಲ್ಲದೆ, ತಮ್ಮ ವ್ಯಕ್ತಿತ್ವಕ್ಕೂ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ.
ಸಾನಿಯಾ ಮಿರ್ಜಾ ಅವರ ವೃತ್ತಿಜೀವನವು ಯುವ ಟೆನಿಸ್ ಆಟಗಾರರಿಗೆ ಸ್ಫೂರ್ತಿಯಾಗಿದೆ. ಇದು ಯಾವುದೇ ವೃತ್ತಿಪರ ಆಟಗಾರನ ಜೀವನ ಕ್ರೀಡೆಗೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಸಾನಿಯಾ ಅವರ ಯಶಸ್ಸಿನ ಗುಟ್ಟು ಅವರ ಕಠಿಣ ಪರಿಶ್ರಮ ಮತ್ತು ಟೆನಿಸ್ ಕೋರ್ಟ್‌ನಲ್ಲಿನ ಅಪ್ರತಿಮ ಪ್ರದರ್ಶನ, ಇದು ಅವರಿಗೆ ವಿಶ್ವಾದ್ಯಂತ ಸ್ಥಾನ ಗಳಿಸಿಕೊಟ್ಟಿದೆ. ಅವರು ಈಗ ಯಶಸ್ವಿ ಉದ್ಯಮಿಯೂ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









