Sania Mirza: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆದರು. ಡಿವೋರ್ಸ್ ಬಳಿಕ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು.. ಆದರೆ ಸಾನಿಯಾ ಮಿರ್ಜಾ ತಮ್ಮ ಮಗನೊಂದಿಗೆ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಒಂದು ಪ್ರಮುಖ ಹೇಳಿಕೆ ನೀಡಿದ್ದರು.. ಅದಾದ ನಂತರ, ಅವರು ತಮ್ಮ ಜೀವನದಲ್ಲಿ ಹೊಸ ಸಂಗಾತಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬಂದವು.
ಭಾರತದ ಜನಪ್ರಿಯ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನ ಸಂಚಿಕೆಯೊಂದರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದರು.. ಅವರು ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಮತ್ತು ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಪ್ರದರ್ಶನ ನೀಡಿದ್ದರು. ಈ ಕಾರ್ಯಕ್ರಮದ ಪ್ರೋಮೋ ಆ ಸಮಯದಲ್ಲಿ ಸಖತ್ ಸೌಂಡ್ ಮಾಡಿತ್ತು.. ಪ್ರೋಮೋದಲ್ಲಿ, ಸಾನಿಯಾ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸಾನಿಯಾ ಮಿರ್ಜಾ ಜೊತೆ ಶಾರುಖ್ ಖಾನ್ ತಮ್ಮ ಬಗ್ಗೆ ಸಿನಿಮಾ ಮಾಡಿದರೆ, ಅದರಲ್ಲಿ ಅವರ ಪ್ರೇಮಿಯ ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದ್ದನ್ನು ಕಪಿಲ್ ಶರ್ಮಾ ಪ್ರೋಮೋದಲ್ಲಿ ನೆನಪಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರ ಈ ಮಾತನ್ನು ಕೇಳಿದ ಸಾನಿಯಾ, "ಇದೀಗ, ನಾನು ಮೊದಲು ನನ್ನ ಪ್ರೀತಿಯನ್ನು ಹುಡುಕಬೇಕು" ಎಂದು ಉತ್ತರಿಸಿದರು. ಇದರಿಂದಾಗಿ ಸಾನಿಯಾ ಮತ್ತೆ ಮದುವೆಯಾಗುತ್ತಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿದ್ದವು. ಅಲ್ಲದೇ ಅವರ ಈ ಉತ್ತರವನ್ನು ಕೇಳಿ ಅವರ ಅಭಿಮಾನಿಗಳು ಶೋಯೆಬ್ ಮಲಿಕ್‌ಗೆ ವಿಚ್ಛೇದನ ನೀಡಿದ ನಂತರ ಸಾನಿಯಾ ಈಗ ಬದಲಾಗಿದ್ದಾರೆಂದು ಖುಷಿಪಟ್ಟಿದ್ದರು..
ಸಾನಿಯಾ ಮಿರ್ಜಾ ಅವರ ಕುಟುಂಬವು ವರ್ಷಗಳ ಹಿಂದೆ ಸಾನಿಯಾ ಮತ್ತು ಶೋಯೆಬ್ ಬೇರ್ಪಟ್ಟಿದ್ದಾರೆ ಎಂದು ದೃಢಪಡಿಸಿತು. ಆಗಿನಿಂದ ಜನಮನದಿಂದ ದೂರವೇ ಇದ್ದಿದ್ದ ಸಾನಿಯಾ ಮಿರ್ಜಾ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.. ಇದೀಗ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೀಡಿದ ಹಳೆಯ ಹೇಳಿಕೆ ವೈರಲ್ ಆಗುತ್ತಿದೆ..
ಇನ್ನು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವಿವಾಹವಾದರು. ಇಬ್ಬರಿಗೂ ಇಜಾನ್ ಮಿರ್ಜಾ ಮಲಿಕ್ ಎಂಬ ಮಗನಿದ್ದಾನೆ. ಇಜಾನ್ ತನ್ನ ತಾಯಿ ಸಾನಿಯಾ ಜೊತೆ ವಾಸಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









